ಜಾನಪದ ಸಂಸ್ಕøತಿಯಿಂದ ವ್ಯಕ್ತಿತ್ವ ವಿಕಸನ

ಕಲಬುರಗಿ,ಜು.22: ಮಾನವೀಯತೆ, ಆಚಾರ-ವಿಚಾರ, ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವದು, ಹೃದಯವಂತಿಕೆ, ದೇಶಪ್ರೇಮ ಸೇರಿದಂತೆ ಮುಂತಾದ ಮಾನವೀಯ, ಸಾಮಾಜಿಕ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಹೊಂದಿರುವ ಜಾನಪದ ಸಂಸ್ಕøತಿ, ಪರಂಪರೆಯನ್ನು ಅಳವಡಿಸಿಕೊಂಡರೆ ವ್ಯಕಿತ್ವ ವಿಕಸನವಾಗಲು ಸಾಧ್ಯವಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಅಭಿಪ್ರಾಯಪಟ್ಟರು.
ನಗರದ ಮಹಾತ್ಮ ಬಸವೇಶ್ವರ ನಗರದಲ್ಲಿರುವ ವ್ಯಕ್ತಿತ್ವ ವಿಕಸನ ಶಿಕ್ಷಣ ಸಂಸ್ಥೆಯ ವಿಶಾಲ್ ಪಿಯು ಕಾಲೇಜಿನಲ್ಲಿ ‘ಕನ್ನಡ ಜಾನಪದ್ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ವಿಕಾಸಕ್ಕಾಗಿ ಜಾನಪದ’ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಭವ್ಯ ಸಂಸ್ಕøತಿ, ಪರಂಪರೆ ಉಳಿದಿದೆ ಎಂದರೆ, ಅದು ಜಾನಪದದಿಂದ ಮಾತ್ರ ಎಂಬುದು ಮರೆಯಬಾರದು. ವಿದೇಶಿ ಸಂಸ್ಕøತಿ ಬೇಡ. ದೇಶದ ಮೂಲ ಸಂಸ್ಕøತಿಯಾದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಜಾನಪದ ಸಂಸ್ಕøತಿ ಪರಿಸರ, ನಿಸರ್ಗದೊಂದಿಗಿನ ಅವಿನಾಭಾವ ಹೊಂದಿದ್ದು, ಪ್ರಗತಿಕೆ ಪೂರಕವಾಗಿದೆ. ತಂದೆ-ತಾಯಿ ಅವರನ್ನು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಮಗು ಜನಿಸಿದಾಗ ಐದೇಶಿಯಿಂದ ಆರಂಭಗೊಂಡು, ವ್ಯಕ್ತಿಯ ಜೀವನದ ಕೊನೆಯವರೆಗೆ ವಿವಿಧ ಸಂಸ್ಕಾರಗಳನ್ನು ನೀಡಲಾಗುತ್ತದೆ. ಪ್ರತಿಯೊಂದು ಸಂಸ್ಕಾರಕ್ಕೆ ತನ್ನದೇ ಆದ ಹಿನ್ನಲೆ, ಅರ್ಥವನ್ನು ಒಳಗೊಂಡಿದೆ. ಆದರೆ ಪ್ರಸ್ತುತವಾಗಿ ಇಂತಹ ಆಚರಣೆಗಳು ಕಡಿಮೆಯಾಗುತ್ತವೆ. ಜಾನಪದ ಪರಂಪರೆಯನ್ನು ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ಪರಿಷತ್ ನಿರಂತರವಾಗಿ ಕಾರ್ಯ ಮಾಡುತ್ತಿದೆ ಎಂದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ.ಶಿವಶಂಕರ ಬಿ. ಮಾತನಾಡಿದರು. ಜಾನಪದ ಕಲಾವಿದ ಬಸಯ್ಯಸ್ವಾಮಿ ಹೊದಲೂರ ಹಾಡುಗಳನ್ನು ಹಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಯರಾಜ ಬಿ.ಪಾಟೀಲ ಓಕಳಿ, ಆಡಳಿತಾಧಿಕಾರಿ ಶಶಿಕಲಾ ಜೆ.ಪಾಟೀಲ, ಸದಸ್ಯ ವಿಕಾಸ ಪಾಟೀಲ, ಕಾಲೇಜಿನ ಉಪನ್ಯಾಸಕರಾದ ಸರೋಜಾ ಆಲಗೂಡ್, ಶಾಂತಲಾ ಪಾಟೀಲ, ರಶ್ಮೀ ಪಾಟೀಲ, ದೀಪಾ ಪಾಟೀಲ, ಲಲಿತಾ ಉಡಮನಳ್ಳಿ, ರೇಖಾ ಅಕ್ಕೋಣಿ, ಫರ್ವಿನ್ ಬೇಗಂ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.