` ಜಾನಪದ ಸಂಭ್ರಮ’ ಕಾರ್ಯಕ್ರಮ

ಧಾರವಾಡ,ಆ.6: ಹೆಣ್ಣು ಹುಟ್ಟದ ಮನೆ ಪರಿಪೂರ್ಣಅಲ್ಲಎನ್ನುವಾಗ ಹೆಣ್ಣು ಹುಣ್ಣುಎಂದುಜನಪದರುಎಂದೂ ಭಾವಿಸಲಿಲ್ಲ. ಹೆಣ್ಣಿನದು ಬಹು ಪಾತ್ರ. ಆಯಾಕಾಲಘಟ್ಟಕ್ಕೆ ಅವಳು ಬದಲಾಗುವ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವ ಅದ್ಭುತ ಶಕ್ತಿ ಹೊಂದಿದವಳು ಎಂದುಧಾರವಾಡಕರ್ನಾಟಕ ಕಲಾ ಮಹಾವಿದ್ಯಾಲಯದಕನ್ನಡ ವಿಭಾಗದ ಮುಖ್ಯಸ್ಥೆಡಾ.ಮಹಾದೇವಿ ಹಿರೇಮಠ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಹಾಗೂ ಕರ್ನಾಟಕಕಾಲೇಜಿನಕನ್ನಡ ಸಂಘದ ಸಂಯುಕ್ತಆಶ್ರಯದಲ್ಲಿ ಆಯೋಜಿಸಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿಅವರು ‘ಜನಪದದಲ್ಲಿ ಮಹಿಳಾ ಸಂಸ್ಕøತಿ’ ಕುರಿತು ಮಾತನಾಡುತ್ತಿದ್ದರು.
ನಮ್ಮ ಸಂಸ್ಕøತಿಯನ್ನುಒಮ್ಮೆತಿರುವಿ ಹಾಕಿ ನೋಡಬೇಕಾಗಿದೆ.ಇಂದುಕೌಟುಂಬಿಕದಲ್ಲಿ ಬಳಷ್ಟು ಬದಲಾವಣೆಆಗುತ್ತಿದೆ.ಮಹಿಳೆ ಸ್ವಾವಲಂಬಿ ಆಗುತ್ತಿದ್ದಾಳೆ.ಈ ಕಾಲ ಸಂಘರ್ಷದ ಕಾಲ. ಹೆಣ್ಣು ಸ್ವಾವಲಂಬಿಯಾಗುತ್ತಿರುವಾಗ ಸಹಜವಾಗಿಕುಟುಂಬದಲ್ಲಿ ಕಲಹವನ್ನು ನೋಡುತ್ತೇವೆ. ಬದುಕಿನಅನುಭವಕ್ಕೆ ಸಾಟಿಇನ್ನೊಂದಿಲ್ಲ. ಇಂದುಕೃತಕ ಬದುಕಿನಲ್ಲಿ ಬದುಕುತ್ತಾಇದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಬಳಸುತ್ತಿದ್ದ ಕೌದಿಯಲ್ಲಿಅಜ್ಜ, ಅಜ್ಜಿ, ಮಾವ, ಅತ್ತೆ ಹೀಗೆ ಎಲ್ಲರ ನೆನಪುಗಳ ಸಂಗಮವೇ ಕೌದಿಯಾಗಿರುತ್ತಿತ್ತು.ಹಿಂದಿನ ಜನ ಬಂದದ್ದನ್ನು ಸ್ವೀಕರಿಸುತ್ತಿದ್ದರು.ಎಂದೂ ಸಮಸ್ಯೆಗಳು ಬಂದಾಗ ಬೇಸರಪಟ್ಟುಕೊಳ್ಳುತ್ತಿದ್ದಿಲ್ಲ.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಬದುಕಿನಅನುಭವಅಪಾರವಾಗಿರುತ್ತದೆ.ಆಟದ ಮೂಲಕ ಜ್ಞಾನ ಸಿಗುತ್ತಿತ್ತು. ಹಳ್ಳಿಯಲ್ಲಿ ಸಣ್ಣವರಿರುವಾಗಲೇ ಬದುಕು ಕಟ್ಟಿಕೊಳ್ಳುವ ಅನುಭವವನ್ನು ಪಡೆಯುವಂತೆಆಗುತ್ತಿತ್ತು. ಬದುಕಿನ ಮೌಲ್ಯಗಳಿಗೆ ಸಂಬಂಧಿಸಿದಂತೆ ಎಲ್ಲ ಹಂತಗಳಲ್ಲಿ ಹೆಣ್ಣುದಾಟಿ ಬರುತ್ತಾಳೆ.ಅಂದಿನ ದಿನಗಳ ಸಂಬಂಧಗಳಲ್ಲಿ ಪ್ರೀತಿತುಂಬಿರುತ್ತಿತ್ತು.ಇಂದುಅಧುನಿಕತೆಯ ಹೆಸರಿನಲ್ಲಿಕೃತಕತೆತುಂಬಿಕೊಂಡಿದೆ.ಜನಪದರಲ್ಲಿ ಹೆಣ್ಣಿಗೆ ನೀಡುವಗೌರವಅಪಾರವಾಗಿತ್ತು. ಜನಪದರು ಮುಕ್ತಮನಸಿನಿಂದ ಸ್ವೀಕರಿಸುತ್ತಿದ್ದರು. ಹೆಣ್ಣು ಮನೆಯನ್ನು ಬೆಳಗುವ ದೀಪದಂತೆಎಂದುಜನಪದರು ಹೆಣ್ಣಿನ ಹಿರಿಮೆಯನ್ನುಕಟ್ಟಿಕೊಟ್ಟಿರುವರು.ಬದುಕನ್ನುಎಲ್ಲರೀತಿಯಿಂದ ಗೆದ್ದವಳು ಹೆಣ್ಣುಎಂದುಜನಪದರು ಹೇಳುತ್ತಾ ಬಂದಿದ್ದಾರೆಡಾ.ಮಹಾದೇವಿ ಹಿರೇಮಠಎಂದರು.
ಜನಪದದಲ್ಲಿ ಪುರುಷ ಸಂಸ್ಕøತಿಕುರಿತುಜಾನಪದ ವಿದ್ವಾಂಸಡಾ. ರಾಮು ಮೂಲಗಿ ಮಾತನಾಡಿ, ಕವಿವಾಣಿ ಹೂವಾದರೆಜನಪದಅದರ ಬೇರು.ಮೂಲ ಜನಪದರುಜೀವನಾನುಭವದಅನುಭವವನ್ನು ಹಾಡಾಗಿಕಟ್ಟಿಕೊಟ್ಟಿರುವರು.ಸುಖ, ದುಃಖಗಳನ್ನು ಹಾಡಾಗಿ ಹಾಡಿದ್ದೇಜನಪದ ಸಾಹಿತ್ಯ. ಜನಪದಕ್ಕೆಯಾರೂ ಮಾಲಕರಲ್ಲ. ಎಲ್ಲರೂಜನಪದಕ್ಕ ಮಾಲಿಕರು. ಜನಪ್ರೀಯಜಾನಪದ ಹಾಡಿಗೆಜನಪದದ ಪದಗಳು ಮೂಲವಾಗಿ ರೂಪಗೊಂಡಿರುತ್ತವೆ. ಪರಂಪರೆಯಿಂದ ಬಂದಜನಪದವನ್ನು ವಿದ್ಯಾರ್ಥಿಗಳು ಹಾಡುವುದನ್ನು ರೂಢಿಸಿಕೊಳ್ಳಬೇಕು. ಹಿಂದಿನ ಹಿರಿಯರಲ್ಲಿ ಬದುಕಿನ ಪ್ರಜ್ಞೆಇತ್ತು.ಅದನ್ನುಒಗಟಿನ ಪದಗಳನ್ನು ಬಳಸಿ ಬದುಕಿನಅನುಭವವನ್ನುಕಟ್ಟಿಕೊಡುತ್ತಿದ್ದರು.ಪ್ರತಿಜನಪದದ ಪದಗಳಲ್ಲಿ ಸಂದೇಶಇರುತ್ತದೆ.ಜನಪದ ಹಾಡುಗಳಲ್ಲಿ ಮಹಿಳೆಯರ, ಮಕ್ಕಳ, ಪುರುಷರ ಹಾಡುಗಳನ್ನು ವರ್ಗಿಕರಿಸಿ ನೋಡಬಹುದು. ಹಳ್ಳಿಯಲ್ಲಿ ಜನಪದ ಹಾಡುಗಳನ್ನು ಕೇಳುತ್ತ, ಹಾಡುತ್ತಾ ಬಂದಿದ್ದರಿಂದಇನ್ನೂಜನಪದಕುರುಹು ಹಳ್ಳಿಯಲ್ಲಿ ಸಿಗುತ್ತದೆ ಅದಕ್ಕೆ ಪೆÇ್ರೀತ್ಸಾಹ ನೀಡುವ ಕೆಲಸವನ್ನು ಸಮಾಜ ಮಾಡಬೇಕುಎಂದರು.
ಡಾ. ಐ.ಸಿ. ಮುಳಗುಂದವರು ಮಾತನಾಡಿ, ಮನುಷ್ಯನ ಮನಸ್ಸಿನಲ್ಲಿ ಏನಿದೆ, ಸಮಾಜದ ಮನಸು ಎಂಥದುಎಂದು ತಿಳಿದುಕೊಳ್ಳಬೇಕಾದರೆ ಜನಪದ ಸಾಹಿತ್ಯವನ್ನುಅಧ್ಯಯನವನ್ನು ಮಾಡಬೇಕಾಗುತ್ತದೆ.ಜನಪದ ಸಾಹಿತ್ಯವನ್ನುಅಧ್ಯಯನ ಮಾಡುವಾಗ ಲಿಂಗತಾರತಮ್ಯ, ವರ್ಣಬೇಧ, ಪುರುಷಪ್ರಧಾನ. ವ್ಯವಸ್ಥೆ ಹೇಗೆ ಇತ್ತುಎಂದುಗೊತ್ತಾಗುತ್ತದೆ. ನಮ್ಮ ಭಾರತಿಯ ಪರಂಪರೆ ಸುಂದರತೆಎಷ್ಟಿದೆಎಂಬುದನ್ನು ತಿಳಿದುಕೊಳ್ಳಬಹುದು.ಜನಪದದ ಮೂಲ ನೆಲೆಯನ್ನು ತಿಳಿದುಕೊಳ್ಳುವುದು ಕಷ್ಟ ಸಾಧ್ಯ. ರಾಮಾಯಣ ಮಹಾಭಾರತವನ್ನುಜನಸಾಮಾನ್ಯರಿಗೆತಲುಪಿಸುವಲ್ಲಿಜನಪದರು ಬಹು ದೊಡ್ಡಕೊಡುಗೆಯನ್ನು ನೀಡಿರುವರುಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಪ್ರಾಚಾರ್ಯಡಾ.ಡಿ.ಬಿ. ಕರಡೋಣಿಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಗೆ ಹೆಚ್ಚು ತಾಳ್ಮೆ ಇರೋದರಿಂದಲೇ ಸಂಸಾರ ಸುಂದರವಾಗಿರುತ್ತದೆ. ಹೆಣ್ಣುಗಂಡಿನ ನಡುವಿನ ಸರಸ ವಿರಸಗಳು ಬರುವುದು ಸಹಜ.ಅವುಗಳನ್ನು ಜನಪದರು ಹಾಡುಗಳ ಮೂಲಕ ಹಂಚಿಕೊಳ್ಳುತ್ತಾ ತಮ್ಮ ಬದುಕನ್ನು ಶ್ರೀಮಂತಗೊಳಿಸಿಕೊಂಡು ಬಂದಿದ್ದಾರೆ.ಅನಕ್ಷರಸ್ತರು ಹಲವು ಚರಿತ್ರೆಗಳನ್ನು ಹಾಡುತ್ತಾ ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಬಹು ದೊಡ್ಡಕಾರ್ಯವನ್ನುಜನಪದರು ಮಾಡುತ್ತಾ ಬಂದಿದ್ದಾರೆ.ಇಂಥ ಹಿರಿಮೆಯಕಾಯಕವನ್ನುಗೌರವಿಸುವ ಕಾರ್ಯ ಸಮಾಜದಿಂದಆಗಬೇಕಿದೆಎಂದರು.
ಮಹಿಳಾ ಮಂಟಪದ ಸಂಚಾಲಕಿ ಡಾ.ಶೈಲಜಾಅಮರಶೆಟ್ಟಿ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾರದಾ ಕೌದಿ, ಜ್ಯೋತಿ ಭಾವಿಕಟ್ಟಿ, ಸುಜಾತಾ ಹಡಗಲಿ, ಡಾ.ಭೈರನ್ನವರ ಪರಿಚಯಿಸಿದರು.ಕುಮಾರಿಕಾವೇರಿ ಪ್ರಾರ್ಥಿಸಿದರು.ಡಾ. ವಿ. ಶಾರದಾಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳು ಹಾಗೂ ಆಹ್ವಾನಿತರುಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಡಾ.ಲಮಾಣಿ, ಡಾ.ಚಲವಾದಿ, ಡಾ.ತಳವಾರ, ಡಾ.ಕುರಹಟ್ಟಿ ಮುಂತಾದವರು ಉಪಸ್ಥಿತರಿದ್ದರು.