ಜಾನಪದ ಸಂಗೀತ ಶ್ರೇಷ್ಠ

ಕಲಬುರಗಿ.ಎ. 16: ಭಾರತೀಯ ಸಂಸ್ಕøತಿಯಲ್ಲಿ ಜಾನಪದ ಸಂಗೀತ ಶ್ರೇಷ್ಠವಾಗಿದೆ ಇದನ್ನು ಉಳಿಸಿ ¨ಳೆಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಮಹಾಗಾಂವದ ಅಮೃತಪ್ಪ ಮಲಕಪ್ಪಗೌಡ ನ್ಯಾಯವಾದಿಗಳು ನುಡಿದರು.

ನಗರದ ಪರುಷಮಠದ ಶ್ರೀ ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಡಾ. ಪಂಡಿತ ಪುಟ್ಟರಾಜ ಸಾಂಸ್ಕøತಿಕ ಸೇವಾ ಸಂಘ, ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಜನಪದ ಸಂಭ್ರಮ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಪಾಶ್ಚಿಮಾತ್ಯ ಸಂಗೀತವನ್ನು ಅನುಸರಿಸದೇ ನಮ್ಮ ಭಾರತೀಯ ಸಂಸ್ಕøತಿ, ಜನಪದ ಸಾಹಿತ್ಯ, ಸಂಗೀತ ಉಳಿಸಿಬೆಳಿಸಬೇಕೆಂದು ನುಡಿದರು. ಬಣಮಗಿಯ

ಶ್ರೀ ರಾಚೋಟೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದರು, ಸಿದ್ರಾಮಪ್ಪ ಹೊದಲೂರ ಅಧ್ಯಕ್ಷತೆ ವಹಿಸಿದರು, ಶ್ರೀಶೈಲ ಪುರವಂತ, ಹಣಮಂತರಾವ ಕೊರಳ್ಳಿ, ಸಿದ್ರಾಮಪ್ಪ ಆಲಗೂಡಕರ ವೇದಿಕೆಮೇಲೆ ಇದ್ದರು. ಗುರುಶಾಂತಯ್ಯ ಸ್ಥಾವರಮಠ, ಅಣ್ಣಾರಾವ ಶೆಳ್ಳಗಿ, ದತ್ತರಾಜ ಕಲಶೆಟ್ಟಿ, ದೇವಿಂದ್ರಪ್ಪ ನಂದೀಕೂರ ಸೈದಪ್ಪ ಚೌಡಾಪೂರ, ಶಿವಶರಣಯ್ಯಸ್ವಾಮಿ ಬೀದಿಮನಿ, ಚೇತನ ಕೋಬಾಳ, ಕು. ಗಂಗಾಂಬಿಕಾ ಮಠಪತಿ, ರೇವಣಸಿದ್ದಯ್ಯಸ್ವಾಮಿ ಸುಂಟನೂರ, ಉದಯ ಶಾಸ್ತ್ರೀ, ಜನಪದ ಸಂಭ್ರಮ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷರಾದ ರಾಚಯ್ಯಸ್ವಾಮಿ ರಟಕಲ್ ಸರ್ವರನ್ನು ಸ್ವಾಗತಿಸಿದರು, ಉದಯಶಾಸ್ತ್ರೀ ನಿರೂಪಿಸಿದರು.