ಜಾನಪದ ಸಂಗೀತ ಕಾರ್ಯಕ್ರಮ

ರಾಯಚೂರು.ಜ.೦೪- ಜಾನಪದ ಸಂಗೀತ ಕಾರ್ಯಕ್ರಮವೂ ಇತ್ತೀಚಿಗೆ ಪವರ್ ಗ್ರಿಡ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಾಯೋಜಿತ ಕಾರ್ಯಕ್ರಮವನ್ನು ಮಹ್ಮದ್ ಅನ್ವರ್ ಇವರಿಂದ ಜಾನಪದ ಸಂಗೀತ ಕಾರ್ಯಕ್ರಮ ಕನ್ನಡ ಖವಾಲಿಯನ್ನು ಕಲಾ ಪೋಷಕರಾದ ಎಂ.ಸುಭಾಷ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜನಾರ್ಧನ ಅವರು ವಹಿಸಿದ್ದರು. ಮುಖ್ಯಾತಿಥಿಗಳಾಗಿ ವೆಂಕಟೇಶ ಜಾಲಿಬೆಂಚಿ, ಶ್ರೀನಿವಾಸ ಗಣಮೂರು, ಮಲ್ಲೇಶಪ್ಪ, ಕೆ.ಸಾಬಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love