ಜಾನಪದ ಸಂಗೀತೋತ್ಸವ

ಕೋಲಾರ,ಮಾ.೧೬:ಶ್ರೀವೆಂಕಟೇಶ್ವರ ಗ್ರಾಮೀಣಾಭಿವೃದ್ಧಿ ಕಲಾವಿದರ ಸಂಘ ಚಿನ್ನಾಪುರ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಾಮಧೇನುಹಳ್ಳಿ ಶ್ರೀ ಸತ್ಯಮ್ಮದೇವಿ ದೇವಾಲಯದ ಆವರಣದಲ್ಲಿ, ಜಾನಪದ ಸಂಗೀತೋತ್ಸವ ಜಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಾರ್ಜೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ನಾಗರಾಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲಾವಿದರು ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕೆಂದರು. ಮಾರ್ಜೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮಮ್ಮ ಮುಕುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಶಿಸುತ್ತಿರುವ ಕಲೆಯನ್ನು ಇನ್ನು ಜೀವಂತವಾಗಿರಿಸಲು ಶ್ರಮಿಸುತ್ತಿರುವ ಕಲಾವಿದರ ಸೇವೆ ಶ್ಲಾಘನೀಯ ಎಂದರು.
ಮಣಿಘಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ವಿ.ವಿಶ್ವನಾಥ್, ಸುಬ್ಬಮ್ಮ, ಸಂಘದ ಕಾರ್ಯದರ್ಶಿ ಸಿ.ವಿ ದೇವರಾಜ್ ಉಪಸ್ಥಿತರಿದ್ದರು.
ಯಡಹಳ್ಳಿ ಜಿ.ಪ್ರಭಾಕರ್ ಮತ್ತು ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ, ವೀರಾಪುರ ಸಿ.ಯಲ್ಲಪ್ಪ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ, ರತ್ಮಮ್ಮ ಮತ್ತು ತಂಡದಿಂದ ಖ್ಯಾತಿಯ ಸಂಗೀತ ಕಾರ್ಯಕ್ರಮ, ಲಕ್ಷ್ಮಮ್ಮ ತಂಡದವರಿಂದ ದಾಸರ ಪದಗಳ ಗಾಯನ ಕಾರ್ಯಕ್ರಮ, ನಾಗರತ್ನಮ್ಮ ಮತ್ತು ತಂಡದವರಿಂದ ಸಂಗೀತ ಹಾಡುಗಾರಿಕೆ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.