ಜಾನಪದ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮ

ಕಲಬುರಗಿ:ಜ.5:ಜಾನಪದ ಸಾಹಿತ್ಯದ ಬದುಕನ್ನು ದೂರ ಮಾಡುತ್ತಾ ಬಂದಾಗ ಸಾಮಾಜಿಕ ವಿಸ್ಮಯಗಳು ನಮ್ಮನ್ನು ಕಾಡುತ್ತಿವೆ. ಆ ನಿಟ್ಟಿನಲ್ಲಿ ಮತ್ತೆ ಹಿಂದಿನ ಸಂಭ್ರಮಕ್ಕೆ ತೆರಳಬೇಕಾದರೆ ಜಾನಪದವನ್ನು ಉಳಿಸಿ ಬೆಳೆಸುವ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಅಪ್ಪಾರಾವ ವಾಲಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಲಕ್ಕಮ್ಮ ಗ್ರಾಮೀಣ ಜಾನಪದ ಕಲಾ ಸಂಘ (ರಿ) ಗೋಳಾ (ಬಿ), ತಾ: ಆಳಂದ, ಜಿ: ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 31/12/2022 ರಂದು ಶನಿವಾರ ಸಾಯಂಕಾಲ 6:00 ಗಂಟೆಗೆ ಶ್ರೀ ವಿಶ್ವ ಆಂಜನೇಯ ದೇವಸ್ಥಾನ ಆವರಣ, ಭಾಗ್ಯ ನಗರ, ಸೇಡಂ ರೋಡ, ಕಲಬುರಗಿಯಲ್ಲಿ “ಜಾನಪದ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮವನ್ನು” ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಶ್ರೀ ಮಹಿಪಾಲ ರೆಡ್ಡಿ ರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಆಗಿಮಿಸಿದವರು ಶ್ರೀ ಚಂದ್ರು ಸ್ವಾಮಿ ವಿಶ್ವ ಆಂಜನೇಯ ದೇವಸ್ಥಾನದ ಅರ್ಚಕರು, ಶ್ರೀ ಮೋಹನ್ ಕಾರ್ಕಂಡಕಿ, ಶ್ರೀಮತಿ ಶಾರದಾ ಬುಕ್ಕೆಗಾರ, ಶ್ರೀಮತಿ ಗೀತಾ ಶಿರೂರ, ಶ್ರೀ ಚನ್ನವೀರಯ್ಯ ಮಠ, ಶ್ರೀ ವೀರಯ್ಯ ಮಠಪತಿ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರು ಶ್ರೀ ಶರಣಗೌಡ ಸುಗಮ ಸಂಗೀತ, ಶ್ರೀ ಮಹೇಶ ತತ್ವಪದ, ಶ್ರೀಮತಿ ಶಾರದಾ ಬುಕ್ಕೆಗಾರ ವಚನ ಗಾಯನ, ಕಲ್ಯಾಣಿ ಶಿಲ್ವಂತ್ ಅಕ್ಕಸಾಲಿಗ ಜಾನಪದ ಗೀತೆ, ರೇವಣಸಿದ್ದಪ್ಪ ಭಾವಗೀತೆ, ವಾದ್ಯ ಸಹಕಾರವನ್ನು ಉದಯ ಫೂಲಾರೆ ಮತ್ತು ಮಹೇಶ ಮಾಡಬೂಳ ತಬಲಾ ಸಾತ್ ನೀಡಿದರು ಹಾಗೂ ಪ್ರಕಾಶ ಪೂಜಾರಿ ಹಾರ್ಮೋನಿಯಂ ಸಾತ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಾಹಿತಿ ಕಲಾವಿದರು ಗಣ್ಯ ಮಾನ್ಯರ ಪಾಲ್ಗೊಂಡು ಸಂಗೀತ ರಸದೌತಣ ಸವಿದರು ಎಂದು ಲಕ್ಕಮ್ಮ ಗ್ರಾಮೀಣ ಜಾನಪದ ಕಲಾ ಸಂಘದ ಅಧ್ಯಕ್ಷರಾದ ಸಚೀನ್ ಅಲಂಕಾರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.