ಜಾನಪದ ಲೋಕಕ್ಕೆ ಡಾ.ಡಿ.ಬಿ.ನಾಯಕ್ ನೀಡಿರುವ ಕೊಡುಗೆ ಅಪಾರ: ಡಾ.ಅಮೃತಾ ಕಟಕೆ

filter: 0; jpegRotation: 0; fileterIntensity: 0.000000; filterMask: 0;

ಕಲಬುರಗಿ,ಜೂ.16-ಬಂಜಾರಾ ಸಮುದಾಯದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಡಾ.ಡಿ.ಬಿ.ನಾಯಕ್ ಅವರು ಬದುಕಿನೂದಕ್ಕೂ ಕಷ್ಟಗಳನ್ನು ಎದುರಿಸಿ ವಿಶ್ವವಿದ್ಯಾಲಯದ ಕುಲಪತಿಯಂತಹ ಉನ್ನತ ಸ್ಥಾನಕ್ಕೆ ಏರಿದ್ದು ಎಲ್ಲರೂ ಹೆಮ್ಮೆ ಪಡಬೇಕಾದ ವಿಷಯವಾಗಿದೆ ಎಂದು ಲೇಖಕಿ ಡಾ.ಅಮೃತಾ ಕಟಕೆ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಹಾಗೂ ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಜಾನಪದ ವಿದ್ವಾಂಸ ಡಾ.ಡಿ.ಬಿ.ನಾಯಕ ಅವರ ಬದುಕು-ಬರಹ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ನಾಯಕ್ ಅವರು ಜಾನಪದ ಮತ್ತು ಬಂಜಾರಾ ಸಮಾಜದ ಕುರಿತು ಅನೇಕ ಮಹತ್ವದ ಕೃತಿಗಳನ್ನು ಹೊರತಂದಿದ್ದಾರೆ ಎಂದು ತಿಳಿಸಿದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ನಿವೃತ್ತ ನಿರ್ದೇಶಕ ಎನ್.ಬಿ.ಪಾಟೀಲ ಅವರು ಮಾತನಾಡಿ, ಜಾನಪದವು ಅಳಿವಿನ ಅಂಚಿನಲ್ಲಿದ್ದು ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ಅವರು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕಿÀ ಡಾ.ವಿಶಾಲಾಕ್ಷಿ ಕರಡ್ಡಿ, ಸಮಾಜ ಸೇವಕ ದಯಾನಂದ ಪಾಟೀಲ, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ವೇದಿಕೆ ಮೇಲಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಸಾವಿತ್ರಿ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಅಮೋಘಸಿದ್ದ ಕಾರ್ಯಕ್ರಮ ನಿರೂಪಿಸಿದರು. ವಿಜಯಾನಂದ ಸ್ವಾಗತಿಸಿದರು. ಅರ್ಚನಾ ಪ್ರಾರ್ಥನಾಗೀತೆ ಹಾಡಿದರು. ಕಾಲೇಜಿನ ಉಪನ್ಯಾಸಕ ಸಿದ್ಧಲಿಂಗ ಉಪಸ್ಥಿತರಿದ್ದರು.