ಜಾನಪದ ಮರೆತರೆ ನಾಗರಿಕತೆ ಅವನತಿ:ಡಾ: ಎಸ್ ಟಿ ಮೆಹರವಾಡೆ

ವಿಜಯಪುರ;ಆ.21: ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು. ಅದನ್ನು ಮರೆತರೆ ನಾಗರಿಕತೆಯ ಅವನತಿಯಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ, ಎಸ್ ಟಿ ಮೆಹರವಾಡೆ ಅಭಿಪ್ರಾಯ ವ್ಯಕ್ತಪಡಿಸಿದರು.ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯಲ್ಲಿ ದಿ: ಕುಂತಿದೇವಿ ಚಂದಪ್ಪ ಅಕ್ಕಲಕೋಟ ದತ್ತಿ ದಾನಿಗಳಾದ ರಂಗನಾಥ ಚಂದಪ್ಪ ಅಕ್ಕಲಕೋಟ ಹಾಗು ಶ್ರೀ ಹಣಮಂತ ಸಂಕನಾಳ ಸ್ಮರಣಾರ್ಥ. ದತ್ತಿ ದಾನಿಗಳು ಡಾ,ಯಲಗೂರೇಶ್ವರ ಸಂಕನಾಳ ದತ್ತಿ ಉಪನ್ಯಾಸ ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಕಾಯ9ಕ್ರಮ ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಜೀವನದ ಮೌಲ್ಯ ಮರೆತರೆ ಸವ9ಸ್ವವನ್ನು ಕಳೆದುಕೊಂಡಂತೆ ಎಂದರು

ಅರ್ಜುಣಗಿ ಸರಕಾರಿ ಪ ಪೂ ಕಾಲೇಜಿನ ಉಪನ್ಯಾಸಕಿ ಡಾ : ಸವಿತಾ ಝಳಕಿ ಜಾನಪದ ನಡೆದು ಬಂದ ದಾರಿ ಹಾಗು ಗರತಿಯ ಹಾಡುಗಳು ಕುರಿತು ಮಾತನಾಡಿ ಆಧುನಿಕತೆಯ ಸಮಾಜದಲ್ಲಿ ಜಾನಪದ ಪರಂಪರೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ .ಮಹಿಳೆ ಗ್ರಾಮೀಣ ಪ್ರದೇಶದಲ್ಲಿ ಮಗುವಿನ ಜೊತೆಗಿನ ಸಂಬಂಧ ಹೇಳತೀರದು. ಗಂಡನ ಮನೆಯ ಲೇಸು ಎನ್ನುವ ವಿಚಾರ ಅಥ9ಪೂಣ9. ಗರತಿಯ ಜೀವನ ಬಡತನ ಶ್ರೀಮಂತಿಕೆ ಮುಖ್ಯವಲ್ಲ ಅವಳಿಗೆ ಗಂಡನ ಮನೆಯ ಕುಟುಂಬ ಮಹತ್ವ. ಆಡಿ ಬಾ ನನ್ನ ಕಂದ ಅಂಗಾಲ ತೊಳದೇನ ಎಂದು ಹಾಡುತ್ತಾ ತುಂಬಿದ ಜೀವನ ಸಾಗಿಸುತ್ತಾಳೆ

ಗರತಿ ಗಂಡನ ಮನೆಯಲ್ಲಿ ತನ್ನ ಹಕ್ಕುಗಳು ದೊರಕದೆ ಹೋದರು ಚಿಂತಸದೆ ಕುಟುಂಬದ ಸದಸ್ಯರಿಗಾಗಿ ಹಗಲಿರಳು ದುಡಿಯುತ್ತಾಳೆ .ಗರತಿ ಜೀವನ ಕುರಿತು ಅನೇಕರು ತ್ರಿಪದಿಯಲ್ಲಿ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಜ್ಞಾನದ ಕೊಡುಗೆ ನೀಡಿದ್ದಾರೆ.

ಇಂದಿನ ಮಹಿಳೆಗೆ ಗರತಿಯ ಹಾಡುಗಳು ಪಾಠ ಮಾಡುವಂತಿವೆ. ಮಹಿಳೆಗೆ ತವರು ಮನೆಯ ಮೇಲೆ ಪ್ರೀತಿ ಮಮತೆ ವಾತ್ಸಲ್ಯ ಜೀವನದ ಕೊನೆಯವರೆಗೆ ಕಡಿಮೆಯಾಗುವದಿಲ್ಲ. ಜಾನಪದ ಸಾಹಿತ್ಯ ಇಂದು ದೇಶಕ್ಕೆ ಮಾಗ9ದಶ9 ಮಾಡುವ ಶಕ್ತಿ ಹೊಂದಿದೆ ಎಂದರು

ಶ್ರೀ ಸಂಗಮೇಶ್ವರ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯದ ಚಡಚಣ ಸಹಾಯಕ ಪ್ರಾಧ್ಯಾಪಕ ಡಾ: ಎಮ್ ಎಸ್ ಮಾಗಣಗೇರಿ ಮರೆಯಾಗುತ್ತಿರುವ ಜಾನಪದ ಸಂಸ್ಕøತಿ ಕುರಿತು ಮಾತನಾಡಿ ಜಾನಪದ ಸಾಹಿತ್ಯ ಉಳಿಸುವ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕಾಗಿದೆ . ನಗರ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಜಾನಪದ ಸಾಹಿತ್ಯ ಪಠ್ಯಕ್ರಮದಲ್ಲಿ ಅಳವಡಿಸಿ ಸನ್ಮಾರ್ಗದ ಜೀವನ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.ಜಾನಪದ ಸಂಸ್ಕೃತಿ ಶ್ರೀಮಂತವಾಗಿದ್ಡು ತಲೆಮಾರಿನಿಂದ ತಲೆಮಾರಿಗೆ ಬಂದಂತಹ ಈ ಸಂಸ್ಕೃತಿಯು ಮರೆಯಾಗದಂತೆ ನೋಡಿಕೊಳ್ಳುಬೇಕು.ರೈತರು ಜಾನಪದ ಸಂಸ್ಕೃತಿ ರೂವಾರಿಯಾಗಿದ್ದಾರೆ.ಜಾನಪದ ಹಾಡುಗಳು ನಶಿಸಿ ಹೋಗುತ್ತಿವೆ. ರೈತರು ಆಧುನಿಕ ಜೀವನಕ್ಕೆ ಮಾರುಹೊಗುತ್ತಿದ್ದಾರೆ ಎಂದರು

ಸಭೆಯ ಅಧ್ಯಕ್ಷತೆ ವಹಿಸಿದ್ದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ನಿವೃತ್ತ ಪ್ರಾಂಶುಪಾಲ ಪೆÇ್ರ ಶಿವಾನಂದ ನುಚ್ಚಿ ಮಾತನಾಡಿ ಜಾನಪದ ಸಂಸ್ಕೃತಿಯು ಉಳಿಯದೆ ಹೋದರೆ ಸಮಾಜದಲ್ಲಿ ಗೌರವದ ಜೀವನ ಕಾಣಸಿಗುವದಿಲ್ಲ ಎಂದರು

ಶರಣೆ ಅಕ್ಕಮಹಾದೇವಿಯ ಬುಲಿ9 ಸಾಹಿತಿ ರಂಗನಾಥ ಅಕ್ಕಲಕೋಟ. ಆಶಾ ಬಸನಗೌಡ ಬಿರಾದಾರ ಮಾತನಾಡಿದರು. ಹಾಸಿಂಪೀರ ವಾಲಿಕಾರ ಬಸನಗೌಡ ಬಿರಾದಾರ ಶರಣಗೌಡ ಪಾಟೀಲ ಸಿದ್ರಾಮಯ್ಯ ಲಕ್ಕುಂಡಿಮಠ ಅನ್ನಪೂರ್ಣ ಬೆಳೆನ್ನವರ ಶಾಂತಾ ವಿಭೂತಿ ಇಂದಿರಾ ಬಿದರಿ ಅಹಮ್ಮದ ವಾಲಿಕಾರ ಪೆÇ್ರ ಎಸ್ ಕೆ ಬಿರಾದಾರ ಡಾ ಮಾಧವ ಗುಡಿ ಡಾ ವಿ ಎಮ್ ಬಾಗಾಯತ ಕಮಲಾ ಮುರಾಳ ರಾಜೇಸಾಬ ಶಿವನಗುತ್ತಿನ ಆಯ್ ಟಿ ಪಡಗಣ್ಣವರ ಎ ಎಲ್ ಹಳ್ಳೂರ ಡಾ ಸುರೇಶ ಕಾಗಲಕರ ಮಹಮ್ಮದಯುನುಸ್ ಬೀಳಗಿ

ಲಕ್ಷ್ಮೀ ತೊರವಿ ರಪೀಕ ಪಣಿಬಂದ ತ್ರಿವೇಣೆ ಬುರ್ಲಿ ಶಬ್ಬೀರ ಜಹಾಗೀರದಾರ ಎಮ್ ಬಿ ಮೋಪಗಾರ ಎಸ್ ಬಿ ಬಿರಾದಾರ (ಬಾಬಾನಗರ) ಶೇಷರಾವ ಮಾನೆ ಎಮ್ ಎಮ್ ಖಲಾಸಿ ಇಶ್ರತಜಹಾ ಸುತಾರ ಎ ಎಮ್ ಪಾಟೀಲ ಉಪಸ್ಥಿತರಿದ್ದರು

ಸುನಂದಾ ಕೋರಿ ಮಹೇತಾಬ ಕಾಗವಾಡ ಸಾಹೇಬಣ್ಣ ಮಾದರ ಜಾನಪದ ಗೀತೇಗಳನ್ನು ಹಾಡಿ ರಂಜಿಸಿದರು ಸುಖದೇವಿ ಅಲಬಾಳಮಠ ಪ್ರಾರ್ಥಿಸಿದರು ಸುರೇಶ ಜತ್ತಿ ಸ್ವಾಗತಿಸಿ ಪರಿಚಯಿಸಿದರು ಸಾಹಿತಿ ವಿಜಯಲಕ್ಷ್ಮೀ ಹಳಕಟ್ಟಿ ನಿರೂಪಿಸಿದರು ಯಮನಪ್ಪ್ ಪವಾರ ವಂದಿಸಿದರು