ಜಾನಪದ ಬದುಕಿನ ಅವಿಭಾಜ್ಯ ಅಂಗ

ಕಲಬುರಗಿ:ನ.15:ಭಾರತ ದೇಶ ರೈತರು, ಹಳ್ಳಿಗಳಿಂದ ಕೂಡಿರುವುದರಿಂದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹುಟ್ಟಿನಿಂದ ಮರಣದವರೆಗೆ ವ್ಯಕ್ತಿಗೆ ನೀಡುವ ಪ್ರತಿಯೊಂದು ಆಚರಣೆ, ಸಂಸ್ಕಾರದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಜಾನಪದ ಸಂಸ್ಕøತಿ, ಪರಂಪರೆಯ ಅಳವಡಿಕೆಯಿಂದ ನಮ್ಮತನ, ದೇಶದ ಮೂಲ ಸಂಸ್ಕøತಿ, ಪರಂಪರೆ ಉಳಿದು, ಬೆಳೆಯಲು ಸಾಧ್ಯವಿದೆಯೆಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಮತ ವ್ಯಕತಪಡಿಸಿದರು.
ಅವರು ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಜಾಪ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಜಾನಪದ ದೀಪಾವಳಿ ಸಂಭ್ರಮ’ ವಿಶೇಷ ಕಾರ್ಯಕ್ರಮದಲ್ಲಿ ಎತ್ತುಗಳಿಗೆ ಬೆಳಗುವುದು, ಜಾನಪದ ಗಾಯನ, ಕಲಾವಿದರಿಗೆ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ದೀಪಾವಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ದನ-ಕರುಗಳಿಗೆ ಆಣೀ ಪೀಣಿಯ ಮೂಲಕ ಬೆಳಗಲಾಗುತ್ತದೆ. ದನ-ಕರುಗಳ ಮೇಲಿನ ಪೀಡೆ ಹೋಗಬೇಕು, ಯಾವುದೇ ರೋಗ-ರುಜಿನಿಗಳು ಬರಬಾರದು, ಆರೋಗ್ಯಯುತವಾಗಿರಬೇಕೆಂಬ ನಂಬಿಕೆಯಿಂದ ಬೆಳಗಿ, ಗಾಯನದ ಮೂಲಕ ಪ್ರಾರ್ಥಿಸಲಾಗುತ್ತದೆ. ಹಾವಿನ ಹೆಡೆ ಆಕಾರದಲ್ಲಿ ಹುಲ್ಲಿನ ಹೆಣಿಕೆಯಿಂದ ಆಣೀ ಪೀಣಿಯನ್ನು ತಯಾರಿಸಿ, ಮಧ್ಯಭಾಗದಲ್ಲಿ ದೀಪವನ್ನು ಇಟ್ಟು, ಅದ್ಭುತವಾಗಿ ರಚಿಸಲಾಗಿರುತ್ತದೆ. ಇಂತಹ ಆಚರಣೆಗಳನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ಈಗಿನ ಜನಾಂಗದ ಮೇಲಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸುನೀಲಕುಮಾರ ವಂಟಿ, ಎಸ್.ಎಸ್.ಪಾಟೀಲ.ಬಡದಾಳ, ಜಾನಪದ ಕಲಾವಿದರಾದ ಸಿದ್ದಪ್ಪ ಬಾಗೋಡಿ, ಕಮಲಾಬಾಯಿ ಬಾಗೋಡಿ, ರಮೇಶ, ನಾಗರಾಜ, ಮಲ್ಲಿಕಾರ್ಜುನ, ಗ್ರಾಮಸ್ಥರಾದ ರೇಣುಕಾಚಾರ್ಯ ಸ್ಥಾವರಮಠ, ಪೀರಪ್ಪ ಜಮಾದಾರ, ಉಮೇಶ ಬಾಗೋಡಿ, ಸುಗಲಾಬಾಯಿ, ರಂಗುಬಾಯಿ, ಸಂತೋಷ, ಪದ್ಮಾವತಿ, ಪಾರ್ವತಿ, ಸಿದ್ದಾರೂಡ ಜಮಾದಾರ, ಭೀಮಯ್ಯ ಗುತ್ತೇದಾರ, ಶಿವಕುಮಾರ ಸ್ವಾಮಿ, ಬಸವಂತರಾವ ಜಮಾದಾರ ಸೇರಿದಂತೆ ಗ್ರಾಮಸ್ಥರು, ಮತ್ತಿತರರು ಭಾಗವಹಿಸಿದ್ದರು.