ಜಾನಪದ ಬದುಕಿನ ಅಮೂಲ್ಯ ಸಂಪತ್ತು : ವೀರಣ್ಣಗೌಡ ಪಾಟೀಲ್

ಕಲಬುರಗಿ:ಅ.31:ಜಾನಪದ ನಮ್ಮ ಬದುಕಿನ ಅಮೂಲ್ಯವಾದ ಸಂಪತ್ತು ಆ ಅಮೃತವನ್ನು ಯಾವುದೇ ಕಾರಣಕ್ಕೂ ನಾವು ಕಳೆದುಕೊಳ್ಳಬಾರದು ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ವೀರಣ್ಣಗೌಡ ಪಾಟೀಲ್ ಮಲ್ಲಾಬಾದಿ ತಿಳಿಸಿದರು. ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆ (ರಿ) ಕಲಬುರಗಿ,ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಇವರ ಸಹಯೋಗದಲ್ಲಿ ಜರುಗಿದ ಧನಸಹಾಯ ಯೋಜನೆಯಡಿ ಜಾನಪದ ಸಂಗೀತೋತ್ಸವ ನಗರದ ಮಹಾಲಕ್ಷ್ಮಿ ದೇವಾಲಯ ಅಕ್ಕಮಹಾದೇವಿ ಕಾಲೋನಿ ಹೈಕೋರ್ಟ್ ಕಲಬುರಗಿಯಲ್ಲಿ ಭಾನುವಾರ ಏರ್ಪಡಿಸಿದ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದವಿಲ್ಲದೆ ಬದುಕಿಲ್ಲ ಅದೇ ಭಾರತೀಯರ ಉಸಿರು ಅದು ನಾಶವಾದರೆ ನಮ್ಮ ತನ ಸೇರಿದಂತೆ ಎಲ್ಲವೂ ನಾಶವಾಗುತ್ತದೆ ಎಂದು ಎಚ್ಚರಿಸಿದರು. ಖ್ಯಾತ ಉದ್ದಿಮೆದಾರರಾದ ಪ್ರಭುಗೌಡ ಪಾಟೀಲ ಗೊಬ್ಬುರ್ ಮಾತನಾಡಿ ಜಿಲ್ಲೆಯಲ್ಲಿರುವ ಜಾನಪದ ಪ್ರಕಾರಗಳು ಬೇರೆ ಜಿಲ್ಲೆಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿವೆ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಲೆ ಬೇಕಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ರಾಜಕೀಯ ಮುಖಂಡರಾದ ಶಿವಶರಣಪ್ಪ ಕೋಬಾಳ ಮಾತನಾಡಿ ಜನಪದವನ್ನು ಉಳಿಸಬೇಕಾದರೆ ರಾಜ್ಯದಲ್ಲಿರುವ ಜಾನಪದ ಕಲಾವಿದರು ಕಣ್ಮರೆಯಾಗುವ ಮೊದಲು ಅವರ ಕಲೆ ಮತ್ತು ಚರಿತ್ರೆಯನ್ನು ದಾಖಲಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕೋಲಿ ಸಮಾಜ ಮುಖಂಡರಾದ ಮಹಾರಾಯ ಅಗಸಿ ,ಸಿದ್ದುಗೌಡ ಪಾಟೀಲ್ ಶಿವಪುರ, ರಾಘವೇಂದ್ರ ಮಿಣಜಿಗಿ,ರುಕ್ಮೇಶ್ ಭಂಡಾರಿ, ಸಂಸ್ಥೆಯ ಅಧ್ಯಕ್ಷರಾದ ಬಾಬುರಾವ ಕೋಬಾಳ,ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಮಹಾಂತಪ್ಪ ಮಂದೇವಾಲ, ಆಕಾಶವಾಣಿ ದೂರದರ್ಶನ ಕಲಾವಿದರಾದ ಸೂರ್ಯಕಾಂತ ಡುಮ್ಮಾ, ಬಲಭೀಮ ನೆಲೋಗಿ,ಪ್ರಕಾಶ್ ಗೊಬ್ಬುರ,ಸಂದೀಪ ಎಸ್ ಮಾಳಿಗೆ, ಇವರಿಂದ ಜಾನಪದ ಗೀತೆ, ತತ್ವಪದ ,ಸುಗಮ ಸಂಗೀತ,ವಚನ ಗಾಯನ,ದಾಸವಾಣಿ ಹಾಡುವ ಮೂಲಕ ಸಬಿಕರನ್ನು ರಂಜಿಸಿದರು.ಬಡಾವಣೆಯ ನಾಗರಿಕರು ಹಿರಿಯರು ಮಹಿಳೆಯರು ಗಣ್ಯವ್ಯಕ್ತಿಗಳು ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಕೊನೆಗೆ ಶ್ರೀಮತಿ ನಾಗಮ್ಮ ಬಿ. ವಂದಿಸಿದರು.