ಜಾನಪದ ಪರಿಷತ್ ಲೋಕ ನೃತ್ಯ ಭಾರತ ಭಾರತಿಯ ಭವ್ಯ ಮೆರವಣಿಗೆ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಜು.18:ಪಟ್ಟಣದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಆಯೋಜಿಸಿದ್ದ ಲೋಕ ನೃತ್ಯ ಭಾರತ ಭಾರತಿ ಕಾರ್ಯಕ್ರಮದ ನಿಮಿತ್ಯ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಪಟ್ಟಣದ ಚನ್ನಬಸವಾಶ್ರಮದಿಂದ ಬಸವೆಶ್ವರ ವೃತ್ತದ ಮೂಲಕ ಸಾಗಿ, ಮಹಾತ್ಮಾಗಾಂಧಿ ವೃತ್ತ, ಡಾ|ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಪುರಭವನದಲ್ಲಿ ಸಮಾವೇಶ ಗೊಂಡಿತು.
ಮೆರವಣಿಗೆಯುದ್ದಕ್ಕೂ ದೇಶದ ವಿವಿಧ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ಒಡಿಸ್ಸಾ, ಪಂಜಾಬ, ಜಮ್ಮು ಕಾಶ್ಮೀರ, ಛತೀಸ್‍ಘಡ್, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರಿಂದ ನೃತ್ಯ ಮತ್ತು ಅಭಿನಯ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಪ್ರಮುಖರಾದ ಡಾ| ಜಗನ್ನಾಥ ಹೆಬ್ಬಾಳೆ, ಪ್ರೊ| ಶಂಭುಲಿಂಗ ಕಾಮಣ್ಣ, ವಸಂತ ಹುಣಸನಾಳೆ, ರಮೇಶ ಮಾನಶೆಟ್ಟೆ, ಡಾ| ರಾಜಕುಮಾರ ಹೆಬ್ಬಾಳೆ, ಶಿವಕುಮಾರ ಘಂಟೆ, ಡಾ| ಕಾಶಿನಾಥ ಚಲವಾ, ಮಲ್ಲಮ್ಮಾ ನಾಗನಕೇರೆ, ರಾಜೆಪ್ಪಾ ಪಾಟೀಲ, ಸಂಜೀವಕುಮಾರ ಜುಮ್ಮಾ, ಬಸವರಾಜ ಮರೆ, ಜೈಕಾಂತ ಗಂಗೋಜಿ, ಶಿವಾನಂದ ಗುಂದಗಿ, ವಿಜಯಲಕ್ಷ್ಮಿ ಮಾನಕಾರ, ಆಶಾಬಾಯಿ ರಾಠೋಡ, ಬಸವರಾಜ ದಾನಾ, ಸಂತೋಷ ಹಡಪದ, ಮುನಿರೋದಿನ್ ಮಾಸಿಮಾಡು ಸೇರಿದಂತೆ ಮುಂತಾದವರು ಇದ್ದರು.