ಜಾನಪದ ಪರಿಷತ್ ನ ಸಮಾಲೋಚನಾ ಸಭೆ


ದಾವಣಗೆರೆ. ಜ.೧೫; ಕರ್ನಾಟಕ ಜಾನಪದ ಪರಿಷತ್ ನ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ನಗರದ ಆಶ್ರಯ ಆಸ್ಪತ್ರೆ ಪಕ್ಕದ  ಗಂಗಾಮತಸ್ಥರ ವಿದ್ಯಾರ್ಥಿ ನಿಲಯದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿತ್ತು.ಜಾನಪದ ಪರಿಷತ್ ನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸಂಚಾಲಕತ್ವವನ್ನು ಗಂಗಾಧರ ಬಿ ಎಲ್ ನಿಟ್ಟೂರ್ ವಹಿಸಿದ್ದರು.  ಜಾನಪದ ಕಲಾವಿದರ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ ಸೌಲಭ್ಯ ಕಲ್ಪಿಸುವಂತೆ  ಸರ್ಕಾರದ ಗಮನ ಸೆಳೆಯುವುದು,  ಪರಿಷತ್ ಗೆ ನೂತನ ಪದಾಧಿಕಾರಿಗಳ ನೇಮಕ, ಗ್ರಾಮ ಮತ್ತು ನಗರ ಮಟ್ಟದಲ್ಲಿ ಜಾನಪದ ಕಲೆಗಳ ಪ್ರಚುರ ಪಡಿಸುವುದು ಹಾಗೂ ಜಿಲ್ಲಾ ಜಾನಪದ ಸಮ್ಮೇಳನ ನಡೆಸುವ ವಿಚಾರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ಗೌರವಾಧ್ಯಕ್ಷರಾದ ಮಾಗನಹಳ್ಳಿ ಮಂಜುನಾಥ್,  ಕತ್ತಿಗೆ ಪರಮೇಶ್ವರಪ್ಪ, ಬುರುಡೆ ಕಟ್ಟೆ ಮಂಜಪ್ಪ, ಶಿವಕುಮಾರ್, ಸುಮತಿ ಜಯಪ್ಪ, ಮಲ್ಲಮ್ಮ ನಾಗರಾಜ್, ಸುಭಾಷಿಣಿ ಮಂಜುನಾಥ್, ಚಂದ್ರಿಕಾ ಜಗನ್ನಾಥ್, ಶಹಜಾನ್, ಗಿರೀಶ್, ಯೋಗೇಶ್, ಸಚಿನ್ ಸೇರಿದಂತೆ ಇತರರು ಭಾಗವಹಿಸಿದ್ದರು. 
Attachments areaReplyReply to allForward