ಜಾನಪದ ಪರಿಷತ್ತು: ಮಹಿಳಾ ಘಟಕಗಳು ಅಸ್ತಿತ್ವಕ್ಕೆ- ಬಾಲಾಜಿ

ರಾಯಚೂರು.ನ.21-ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾನಪದ ಪರಿಷತ್ತಿನ ಮಹಿಳಾ ಘಟಕಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ ಕನ್ನಡ ಜಾನಪದ ಪರಿಷತ್ತಿನ ಯೋಜನೆಗಳ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವ ಬಹುದೊಡ್ಡ ಆಶೆ ಹೊಂದಲಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು..
ಅವರಿಂದ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಿಂಧನೂರಿನಲ್ಲಿ ಇಂದು ತಾಲೂಕು ಘಟಕ ಮತ್ತು ಮಹಿಳಾ ಘಟಕಗಳ ಉದ್ಘಾಟನಾ ಸಮಾರಂಭ ಜೊತೆಗೆ ಜಾನಪದ ಸಂಭ್ರಮ ಆಯೋಜನೆ ಮಾಡಲಾಗಿದೆ. ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುತ್ತಿದೆ. ಹಾಗೆಯೇ, ಇಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಸಹಯೋಗದಲ್ಲಿ ಜಿಲ್ಲಾ ಮಹಿಳಾ ಘಟಕ ಮತ್ತು ತಾಲೂಕು ಘಟಕಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಮಾನವಿಯಲ್ಲಿ ನ.22ರಂದು ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಾನಪದ ಸಂಭ್ರಮ ಮತ್ತು ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕನ್ನಡ ಜಾನಪದ ರಾಜ್ಯ ಘಟಕ ವತಿಯಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳ ಆಯೋಜನೆ ಮತ್ತು ವಿವಿಧ ಕ್ಷೇತ್ರದ ಗಣ್ಯರನ್ನು ಗುರುತಿಸುವುದು ಸೇರಿ ಹಲವು ಯಶಸ್ವಿ ಕಾರ್ಯಕ್ರಮಗಳು ನಡೆಸಲಾಗಿದೆ. ಜಾನಪದ ದಾಖಲೀಕರಣ,ತರಬೇತಿ ಸೇರಿ ಕ್ಷೇತ್ರದ ಕಾರ್ಯ ಬಗ್ಗೆ ವಿಸ್ತತ ಮಾಹಿತಿ ಕಲೆ ಹಾಕುವ ಉದ್ದೇಶಗಳನ್ನು ಹೊಂದಲಾಗಿದ್ದು, ಜಾನಪದ ಕಲಾವಿದರ ಸಮೀಕ್ಷೆ ಮತ್ತು ಜಿಲ್ಲಾವಾರು ಕೈಪಿಡಿ ಬಿಡುಗಡೆ ಮಾಡುವ ಚಟುವಟಿಕೆಗಳು ಮಾಡಲಿದ್ದೇವೆ ಎಂದರು.
50 ವರ್ಷ ಮೀರಿದ ಯಾವುದೇ ಪ್ರಶಸ್ತಿಗೆ ಭಾಜನರಾಗದ , ಎಲೆಮರಿಕಾಯಿಯಂತೆ ಉಳಿದ ಕಲಾವಿದರನ್ನು ಗುರುತಿಸಿ 2 ಸಾವಿರ ನಗದು,ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಗೋನಾಳ್, ಸಿದ್ದಯ್ಯ, ಕೆ.ಸಿ.ಕಾಂತಪ್ಪ ದಾನಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.