ಜಾನಪದ ನೃತ್ಯೋತ್ಸವದ ಮೆರವಣಿಗೆಗೆ ಚಾಲನೆ

ಔರಾದ: ಮಾ.15:ಸಂಸ್ಕøತಿ ಮಂತ್ರಾಲಯ ನವದೆಹಲಿ, ಶಾಂತಿಶ್ವರಿ ಸ್ವಯಂ ಸೇವಾ ಸಂಸ್ಥೆ, ಕರ್ನಾಟಕ ಜಾನಪದ ಪರಿಷತ್ತು ತಾಲೂಕಾ ಘಟಕ ಔರಾದ ಸಹಕಾರದಲ್ಲಿ ಜಾನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಬಸವ ಮಂಟಪ ಸಂತಪೂರನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಾನಪದ ನೃತ್ಯೋತ್ಸವದ ಮೆರವಣಿಗೆಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಿವಿಲ್ ನ್ಯಾಯಾಧೀಶರಾದ ಶಿವರಾಜ ದೇಶಮುಖ ಅವರು ಉದ್ಘಾಟಿಸಿ ಮಾತನಾಡಿ “ಕಲೆ ಯಾರ ಸ್ವತ್ತು ಅಲ್ಲ. ಅದು ಅನುಭವದಿಂದ ಬರುವಂಥದ್ದಾಗಿದೆ. ಕಲಾವಿದ ಬಹಳ ಪರಿಶ್ರಮದಿಂದ ತನ್ನಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶನ ಮಾಡಿ ಯಶಸ್ವಿಯಾಗುತ್ತಾನೆ. ಅದರಲ್ಲೂ ನೃತ್ಯಕಲೆ ಮತ್ತು ನಾಟಕದ ಕಲೆ ಬಹಳ ಪರಿಶ್ರಮದಿಂದ ಕೂಡಿದೆ. ಉಸಿರು ಬಿಗಿಹಿಡಿದು ಕಲೆಯನ್ನು ಪ್ರದರ್ಶಿಸಿದಾಗ ಮಾತ್ರ ಕಲಾವಿದ ಯಶಸ್ವಿಯಾಗುತ್ತಾನೆ. ಇಂತಹ ಕಲಾವಿದರಿಗೆ ಸರ್ಕಾರ ಸೂಕ್ತ ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಸರ್ಕಾರ ನೀಡಬೇಕು. ಸಂಘ-ಸಂಸ್ಥೆಗಳ ಸಹಕಾರವೂ ಕಲಾವಿದರಿಗೆ ಇಂದಿನ ಕಾಲದಲ್ಲಿ ಅತ್ಯವಶ್ಯಕವಾಗಿದೆ. ಕಲಾವಿದರ ಉಳಿದರೆ ಮಾತ್ರ ಒಂದು ನಾಡಿನ ಸಂಸ್ಕøತಿ ಉಳಿಯುತ್ತದೆ. ಆದ್ದರಿಂದ ಕಲಾವಿದರಿಗೆ ಸಹಕಾರ ನೀಡುವುದು ಒಳಿತು ಎಂದು ಮಾನ್ಯ ನ್ಯಾಯಾಧೀಶರಾದ ಶಿವರಾಜ ದೇಶಮುಖ ನುಡಿದರು.

ಇದೇ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಘಾಟೆ, ಆಯುಷ್ಮಾನ್ ಭಾರತ ಸಹಾಯಕ ಪ್ರಾದೇಶಿಕ ಸಲಹೆಗಾರರಾದ ಡಾ. ಸಂಜಯ ದೇಶಮುಖ, ಚಂದ್ರಕಾಂತ ನಿರ್ಮಳೆ, ಡಾ. ರಾಜಕುಮಾರ ಹೆಬ್ಬಾಳೆ, ಶಿವಯ್ಯ ಸ್ವಾಮಿ, ಸಂಜೀವಕುಮಾರ ಜುಮ್ಮಾ, ಡಾ.ಸಂಗಮೇಶ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಕಲಾವಿದರಾದ ಚಂದ್ರಪ್ಪ ಕಾಂಬಳೆ (ಪೈತ್ರಿ ಕುಣಿತ), ಗುರಯ್ಯ ಕಲಾ ತಂಡ (ಕೋಲಾಟ), ಸೋಪಾನರಾವ ಗುಡಪಳ್ಳಿ (ಹೋಳಿ ಟೋಳಿ ಕುಣಿತ), ನಿಂಗಮ್ಮ ಕಲಾ ತಂಡ (ಕೋಲಾಟ ಕುಣಿತ), ಜಗದೇವಿ ಕಲಾತಂಡ (ಭಜನೆ ಪದಗಳು), ಶಾಂತಮ್ಮ ಡೊಣಗಾಪುರ ಕಲಾತಂಡ (ಬಿಂದಿಗೆ ಕುಣಿತ) ಭೀಮಾಬಾಯಿ ಕಲಾತಂಡ (ಲಂಬಾಣಿ ಕುಣಿತ) ಸೇರಿದಂತೆ ಅನೇಕ ಕಲಾತಂಡಗಳು ಮೆರವಣಿಗೆಯಲಿ ಪಾಲ್ಗೊಂಡಿದ್ದವು.