ಜಾನಪದ ನೃತ್ಯೋತ್ಸವದಿಂದ ಸಾಂಸ್ಕøತಿಕ ವಿನಿಮಯ: ಸತ್ಯನಾರಾಯಣ

ಬೀದರ:ಸೆ.25: ರಾಷ್ಟ್ರಮಟ್ಟದ ಇಂತಹ ಜಾನಪದ ನೃತ್ಯೋತ್ಸವ ಆಚರಣೆಯಿಂದ ಸಾಂಸ್ಕøತಿಕ ವಿನಿಮಯ ಸಾಧ್ಯವಾಗಿ ಅದರಿಂದ ರಾಷ್ಟ್ರೀಯ ಭಾವ್ಯಕ್ಯತೆ ಹಾಗೂ ಕೋಮು ಸೌಹಾರ್ದತೆ ಗಟ್ಟಿಗೊಳ್ಳುತ್ತದೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಭಿಪ್ರಾಯ ಪಟ್ಟರು.

ಶುಕ್ರವಾರ ಸಂಜೆ ನಗರದ ಹೃದಯಭಾಗ ಅಂಬೇಡ್ಕರ್ ವೃತ್ತದ ಬಳಿಯ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ದೆಹಲಿಯ ಸಂಸ್ಕøತಿ ಸಚಿವಾಲಯ, ನಾಗಪುರದ ದಕ್ಷಿಣ ವಲಯ ಕೇಂದ್ರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ಮೂರು ದಿವಸದ ರಾಷ್ಟ್ರೀಯ ಜನಪದ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಮನುಷ್ಯನಿಗೆ ಹಣಕ್ಕಿಂತ ನೆಮ್ಮದಿಯ ಕೊರತೆ ಕಾಡುತ್ತಿದೆ. ಸೋಮಾರಿತನ ಜಾಸ್ತಿಯಾಗಿ ಆಲಸ್ಯತನ ಹೆಚ್ಚಾಗಿ, ತನ್ನಲ್ಲಿನ ಉಲ್ಲಾಸ ಕಳೆದುಕೊಂಡು ಆತ್ಮಸ್ಥೈರ್ಯದಿಂದ ವಂಚಿತನಾಗಿರುವನು. ಕಲೆ, ಸಂಗೀತ, ನೃತ್ಯ ಇವು ಮನುಷ್ಯನಿಗೆ ಯೋಗಾಸನ ನೀಡುವಷ್ಟು ಆರೋಗ್ಯಕರ ಶಕ್ತಿ ದಯಪಾಲಿಸುತ್ತವೆ. ಸಮಾಜದಲ್ಲಿ ಗೌರವ, ಮಾನಸಿಕ ವಿಕಾಸ, ಪರಸ್ಪರ ಸೌಹಾರ್ದಯುತ ಸಂಬಂಧವೃದ್ಧಿ ಜೊತೆಗೆ ಬ್ರೇನ್ ಟ್ಯುಮರ್‍ನಂತಹ ಹಾನಿಕಾರಕ ಕಾಯಿಲೆಗಳಿಂದ ಮುಕ್ತಿ ಕಾಣಲು ಇದು ಪ್ರೇರೆಪಿಸುತ್ತದೆ ಎಂದರು.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಲು ಸಾಂಸ್ಲøತಿಕ ಕಾರ್ಯಕ್ರಮಗಳಿಗೆ, ಅದರಲ್ಲೂ ಉತ್ತರ ಭಾರತದ ಕಲೆಗಳು ದಕ್ಷಿಣ ಭಾರತದ ಕಲೆಯೊಂದಿಗೆ ವಿನಿಮಯ ಮಾಡುವಮಥ ವೈವಿಧ್ಯಮಯ ಕಾರ್ಯಲ್ರಮಗಳಿಗೆ ಒತ್ತು ನೀಡುತ್ತಿರುವರು. ಇಲ್ಲಿಯ ಸಂಘಟಕರು ಆಯೋಜಿಸಿರುವಂಥ ಈ ಅಪರೂಪದ ಕಾರ್ಯಕ್ರಮವನ್ನು ನಮ್ಮ ಕೇಂದ್ರಿಯ ವಿಶ್ವವಿದ್ಯಾಲಯದಲ್ಲೂ ಮಾಡಲು ಅವಕಾಶ ನೀಡಲಾಗುವುದೆಂದು ಕುಲಪತಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ ಬೀದರ್ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ, ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ಕಲಾವಿದರು ತಮ್ಮ ಅದ್ಭುತ ಕಲೆ ಪ್ರದರ್ಶನಗೈದು ಸಾಂಸ್ಕøತಿಕ ವಾತಾವರಣ ಸೃಷ್ಟಿಸಲಿದ್ದಾರೆ. ಮೂರು ದಿನಗಳ ಕಾಲ ಜಿಲ್ಲೆಯ ಬೇರೆ ಬೇರೆ ಕಡೆ ನಡೆಯುವ ಈ ನೃತ್ಯೋತ್ಸವದ ಲಾಭವನ್ನು ಜಿಲ್ಲೆಯ ಕಲಾಸಕ್ತರು ಪಡೆದುಕೊಳ್ಳಬೇಕು ಹಾಗೂ ಇಲ್ಲಿಯ ಕಲಾವಿದರು ಬೇರೆಡೆಯಿಂದ ಆಗಮಿಸಿದ ಕಲಾವಿದರ ಪ್ರೋತ್ಸಾಹಕ್ಕೆ ಕೈಜೋಡಿಸುವಂತೆ ಕರೆ ಕೊಟ್ಟರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ಸಂಯೋಜನಧಿಕಾರಿ ಡಾ.ಜಗನ್ನಾಥ ಹೆಬ್ಬಾಳೆ ಆಶೆಯ ನುಡಿ ನುಡಿಯುತ್ತ, ಈ ಹಿಂದೇ 2011ರಲ್ಲಿ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನ ನಡೆದಿತ್ತು. ಆಸಮಯದಲ್ಲಿ ಇಡೀ ಕಾಶ್ಮಿರದಿಂದ ಕನ್ಯಾಕುಮಾರಿ, ಗುಜರಾತ ಸೌರಾಷ್ಟ್ರದಿಂದ ಪೂರ್ವಭಾರತದ ಎಲ್ಲ ರಾಜ್ಯಗಳ ಕಲಾವಿದರು ಜಿಲ್ಲೆಗೆ ಆಗಮಿಸಿ ಜಿಲ್ಲೆಯ ವಾತಾವರಣವನ್ನು ಸಾಂಸ್ಕøತಿಕವಾಗಿಸಿದ್ದರು. ಅದಾದ ಮೇಲೆ ನಿರಂತರವಾಗಿ ಇಲ್ಲಿಯ ವರೆಗೆ ಸುಮಾರು ದಶಕಕ್ಕೂ ಅಧಿಕ ಬಾರಿ ರಾಷ್ಟ್ರದ ವಿವಿಧ ಕಲಾಕಾರರು ಇಲ್ಲಿಗೆ ಆಗಮಿಸಿ ಸಾಂಸ್ಕøತಿಕ ಸುಗಂಧ ಹೆಚ್ಚಿಸಿರುವರು. ಇಂಥ ಕಾರ್ಯಕ್ರಮಗಳು ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿ ಅಲ್ಲಿಯ ದೇಶದ ನಾನಾ ಕಡೆಯಿಂದ ಬಂದು ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹರಿಯಾಣದ ಅಶೋಕ ಗುಡ್ಡು ನೇತೃತ್ವದ ಜನಪದ ಕಲಾ ತಂಡದ ವತಿಯಿಂದ ಶಿವಶೃತಿ, ಫಾಗ್ ಗೋಮರ್ ನೃತ್ಯ, ತ್ರಿಪುರಾದ ಪಾಂಚಾಳಿ ದೆಬ್ಬಾರಾಮಾ ತಂಡದಿಂದ ಮಮಿತಾ ಜನಪದ ನೃತ್ಯ, ಮಹಾರಾಷ್ಟ್ರದ ಅಂಬಾದಾಸ ಶ್ರಾವಣಗೌಳಿ ತಂಡದಿಂದ ಸೋಂಗಿ ಮುಖವಟಿ ನೃತ್ಯ, ತೆಲಂಗಾಣಾದ ಕರಿಮ್‍ನಗರದ ಮಹಿಪಾಲರೆಡ್ಡಿ ನೇತೃತ್ವದ ವಗ್ಗುಡೊಲು, ಹೈದ್ರಾಬಾದ್‍ನ ರಾಮ್ಲಮ್ಮ ನೇತೃತ್ವದ ಕಲಾ ತಂಡದಿಂದ ಕೋಲಾಟಂ, ಮಧ್ಯಪ್ರದೇಶದ ಮಾಯಾರಾಮ ಗರ್ವೆ ತಂಡ ಗುದುಮಬಾಜಾ ಹಾಗೂ ಬದಾಯಿ ಜನಪದ ನೃತ್ಯ, ಒಡಿಶಾದ ಅಟಾಸಿ ಮಿಶ್ರಾ ಕಲಾ ತಂಡ ಸಂಬಲಪೂರಿ ನೃತ್ಯ, ಬೀದರ್‍ನ ನೂಪುರ ನೃತ್ಯ ಅಕಾಡೆಮಿ ತಂಡ ಬಂಜಾರಾ ನೃತ್ಯ ಹಾಗೂ ನಾಟ್ಯಶ್ರೀ ನೃತ್ಯ ಅಕಾಡೆಮಿ ತಂಡದಿಂದ ಸುಗ್ಗಿ ಕುಣಿತ ಕಾರ್ಯಕ್ರಮ ಪ್ರದರ್ಶಿಸಿದರು.

ಮುಖ್ಯ ಅತಿಥಿಗಳಾಗಿ ಹರಿಯಾಣಾದ ಜನಸೇವಾ ಕಲಾ ಸಮಿತಿ ಅಧ್ಯಕ್ಷ ಅಶೋಕ ಗುಡ್ಡು, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ.ಬಿ ಕುಚಬಾಳ ಹಾಗೂ ಇತರರು ವೇದಿಕೆಯಲ್ಲಿದ್ದರು.

ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಪಾಟೀಲ ಹಾಗೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗ ಹೇಡೆ ಅವರನ್ನು ಹಾಗೂ ದೇಶದ ವಿವಿಧೆಡೆಯಿಂದ ಆಗಮಿಸಿದ ಎಲ್ಲ ಕಲಾ ತಂಡಗಳ ಮುಖ್ಯಸ್ಥರನ್ನು ಇದೇ ವೇಳೆ ಸನ್ಮಾನಿಸಲಾಯಿತು. ರಮೇಶ ಹಾಗೂ ತ್ರಿವೇಣಿ ಕೊಳಾರ ನಾಡಗೀತೆ ಪ್ರಸ್ತುತ ಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ಡಾ.ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಸಂಘದ ಕೋಶಾಧ್ಯಕ್ಷ ಪೆÇ್ರ.ಎಸ್.ಬಿ. ಬಿರಾದಾರ ಸ್ವಾಗತಿಸಿದರು. ಮಹಾದೇವಿ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು. ಯುವ ಉದ್ಯಮಿ ಅಶೋಕ ಹೆಬ್ಬಾಳೆ ವಂದಿಸಿದರು.