ಜಾನಪದ ನಿಂತ ನೀರಾಗದೇ ಹರಿವ ಗಂಗೆಯಾಗಬೇಕು

ಕೆಂಭಾವಿ:ನ.9:ನಮ್ಮ ಪೂರ್ವಜರ ಶ್ರೀಮಂತ ಸಂಸ್ಕøತಿಯಾದ ಜಾನಪದ ನಿಂತ ನೀರಾಗದೆ ಅದು ನಿರಂತರ ಹರಿಯುವ ಗಂಗೆಯಾಗಬೇಕು ಎಂದು ಶಿಕ್ಷಕ ಸಾಹಿತಿ ಶಿವಶರಣಪ್ಪ ಶಿರೂರ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನ ಆವರಣದಲ್ಲಿ ಕಲ್ಯಾಣ ನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ನುಡಿಸಿರಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ರವಿವಾರ ನಡೆದ ಜಾನಪದ ಸಂಭ್ರಮ ಜಾನಪದ ಉಪನ್ಯಾಸ ಮತ್ತು ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಜಾನಪದದಲ್ಲಿ ವಸ್ತ್ರ ಸಂಹಿತೆ ಆದಿಯಾಗಿ ಸಾಮರಸ್ಯ ಹಾಗೂ ಮೌಲ್ಯಯುತ ಸಂಸ್ಕಾರದ ಬೇರು ಅಡಗಿದೆ. ಅಜ್ಜಿಯ ಕಥೆ, ಮಜ್ಜಿಗೆ ಊಟ, ತಿದ್ದಿ ತೀಡುವ, ಕೂಡಿ ಬಾಳು ಕಾಲ ಮರೆಯಾಗುತ್ತಿದೆ. ಗ್ರಾಮೀಣ ಬಾಗದಲ್ಲಿ ಇನ್ನೂ ಚೂರು ಇರುವ ಜಾನಪದ ಸೊಗಡು ನಮ್ಮ ಮುಂದಿನ ವಾರಸುದಾರರಿಗೆ ಪರಿಚಯಿಸುವುದರ ಮೂಲಕ ನಮ್ಮ ಮೌಲ್ಯಯುತ ಸಂಸ್ಕøತಿಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಂದಗಿ ತಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗ ಚೌದರಿ ಮಾತನಾಡಿ ಜಾನಪದ ಸತ್ವಯುತ ಬದುಕು ಕಟ್ಟಿಕೊಡುತ್ತದೆ. ಇಂಗ್ಲೀಷ ವ್ಯಾಮೋಹ ನಮ್ಮ ಕನ್ನಡ ನುಂಗುವಂತಾಗಿದೆ. ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ಆ ಮೂಲಕ ನಮ್ಮ ಸಂಸ್ಕøತಿಗೆ ಹೊಡೆತ ಬೀಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆÉ ಎಂದು ಕಳವಳ ವ್ಯಕ್ತ ಪಡಿಸಿದ ಅವರು ಜಾನಪದ ಸಂಭ್ರಮಗಳಿಗೆ ಸೀಮಿತವಾಗಬಾರದು ಅದು ಆಚರಣೆಗೆ ತರುವ ಪ್ರಯತ್ನವಾಗಬೇಕಾಗಿದೆ ಎಂದು ಕರೆನೀಡಿದರು.

ಕರ್ನಾಟಕ ಜಾನಪದ ಪರಿಷತ್ತ ಜಿಲ್ಲಾ ಅಧ್ಯಕ್ಷ ಪ್ರಕಾಶ ಅಂಗಡಿ ಆಶಯದ ಮಾತುಗಳನ್ನಾಡಿದರು. ಟ್ರಸ್ಟ್‍ನ ಸಂಚಾಲಕ ಮಡಿವಾಳಪ್ಪ ಪಾಟೀಲ್ ಪ್ರಾಸ್ತಾವಿಕ ಮಾತಾಡಿದರು. ಅಧ್ಯಕ್ಷ ಶ್ರೀಶೈಲ ಪಿ ಹೆಗ್ಗಣದೊಡ್ಡಿ ನೇತೃತ್ವ ವಹಿಸಿದ್ದರು. ಸಿಡಿಪಿಓ ಲಾಲಸಾಬ್ ಪೀರಾಪೂರ, ಮುಖಂಡರಾದ ಮಡಿವಾಳಪ್ಪಗೌಡ ಪೋ.ಪಾಟೀಲ್, ಶರಣಪ್ಪ ಬಂಡೋಳಿ, ಡಿ.ಸಿ.ಸಿ.ಬ್ಯಾಂಕ ನಿರ್ದೇಶಕ ಬಾಪುಗೌಡ ಪಾಟೀಲ್, ಪುರಸಭೆ ಸದಸ್ಯರಾದ ಬಾಬುಗೌಡ ಮಾ.ಪಾಟೀಲ, ಮಹಿಪಾಲರಡ್ಡಿ ಡಿಗ್ಗಾವಿ, ಕೆಂಭಾವಿ ವಲಯ ಕಸಾಪ ಅಧ್ಯಕ್ಷ ಡಾ. ಯಂಕನಗೌಡ ಪಾಟೀಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಹೀರೇಮಠದ ಪೀಠಾಧಿಪತಿ ಚನ್ನಬಸ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ. ಲಕ್ಷ್ಮಣ ಗುತ್ತೇದಾರ, ಬಸವರಾಜ ಗೊರೂಜಿ, ಗುರಣ್ಣ ಚೌಡಗುಂಡ, ಸಿ.ಆರ್.ಪಿ ಷಣ್ಮುಖ ನುಚ್ಚಿ, ಬಸವರಾಜ ವಿಶ್ವಕರ್ಮ, ಚೆನ್ನಬಸಪ್ಪ ಪೂಜಾರಿ, ಮಲ್ಲು ಬಾದ್ಯಾಪೂರ ರವರಿಗೆ ಟ್ರಸ್ಟ್ ವತಿಯಿಂದ ಐಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಗಾಯನ: ಕಾರ್ಯಕ್ರಮದಲ್ಲಿ ಜಾನಪದ ಕಲಾ ತಂಡಗಳಾದ ಕೋಡೆಕಲ್‍ನ ಶಿವಪ್ಪ ಹೆಬ್ಬಾಳ ಮಹಿಳಾ ತಂಡ, ಬಸಪ್ಪ ಹಣಮಸಾಗರ ತಂಡದವರು, ಹಣಮಂತ್ರಾಯ ಪೂಜಾರಿ ತಂಡ, ಮಹಾದೇವಪ್ಪ ವಜ್ಜಲ, ಮುರುಗೇಶ ಹುಣಸಗಿ, ಶಂಕ್ರಮ್ಮ ಮತ್ತು ತಂಡದವರು, ಸಿದ್ದಣ್ಣ ಆಲಗೂರ, ಪಾರ್ವತಿ ದೇಸಾಯಿ ಹಾಗೂ ನೀಲಮ್ಮ ಮಲ್ಲೆ ಸೇರಿದಂತೆ ಹಲವು ಕಲಾವಿಧರಿಂದ ಕೋಲಾಟದ ಪದಗಳು, ಬಿಸೋ ಪದ, ಸೋಬಾನೆ ಪದ, ಡೊಳ್ಳಿನ ಪದ. ತತ್ವಪದ, ಭಜನಾಪದ, ರಿವೈತ್ ಪದ, ಮೊಹರಂ ಪದಗಳು ಜರುಗಿದವು.

ಕಾರ್ಯಕ್ರಮವನ್ನು ಶಿಕ್ಷಕ ಜೆಟ್ಟೆಪ್ಪ ಪೂಜಾರಿ ನಿರೂಪಿಸಿದರು, ಬೀರಲಿಂಗ ಗೌಡಗೇರಿ ಸ್ವಾಗತಿಸಿದರು, ಶ್ರೀಶೈಲ ಹದಗಲ್ ವಂದಿಸಿದರು.