ಜಾನಪದ ಕಲೆ ಸಂಸ್ಕøತಿ ಉಳಿಸಿ ಬೆಳೆಸಿ

ಕಲಬುರಗಿ:ಮೇ.4:ಗ್ರಾಮೀಣ ಪ್ರದೇಶದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಡಾ|| ಪ್ರಕಾಶ ಟೇಂಗಳಿ ಅವರು ಮಾತನಾಡಿದರು.
ಇತ್ತೀಚಿಗೆ ನಗರದ ಮಾರ್ಕಂಡೇಶ್ವರ ದೇವಸ್ತಾನ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಹಮ್ಮಿಕೊಂಡ ಡಾ|| ಅಂಬೇಡ್ಕರ ಸಾಂಸ್ಕøತಿಕ ಕಲಾ ಸಂಘ (ರಿ) ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಜನಪದ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗುರುತಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳು ಹಣಮಂತ ಜಾರಬಂಡಿ, ಬಸವರಾಜ ದುಧನಿ, ವಿಜಯಕುಮಾರ ಸ್ವಾಮಿ, ಅಮೃತಪ್ಪ ರಾಜೋಳಕರ, ವಿಠ್ಠಲ ಪಟ್ಟಣಕರ, ಮಂಜುನಾಥ ಶೀಲಶೇಟ್ಟಿ, ಸಿದ್ದೇಶ್ವರ ಜಾರಬಂಡಿ, ಮಹಾದೇವಪ್ಪ ಜೇಸ್ಕಾಂ, ವೇದಿಕೆಮೇಲೆ ಉಪಸ್ಥಿತರಿದ್ದರು, ಶಿವರಾಯ ಬೋಳೆವಾಡ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ದೂರದರ್ಶನ ಕಲಾವಿದರಾದ ಅಣ್ಣಾರಾವ ಶೆಳ್ಳಗಿ, ಶಿವಶರಣಪ್ಪ ಮೇಳಕುಂದಿ, ಸೈದಪ್ಪ ಚೌಡಾಪೂರ, ಪ್ರಕಾಶ ಪೂಜಾರಿ, ಕು|| ಚೇತನ ಕೋಬಾಳ, ಬಸಯ್ಯ ಗುತ್ತೇದಾರ, ಸುಭಾಷ ಚೌಡಾಪೂರ. ಸೂರ್ಯಕಾಂತ ಹೊಳೆಅವರಾದ ಕು|| ಸ್ನೇಹಾ ಎಸ್. ಅಲಂಕಾರ, ವಿಜಯಲಕ್ಷ್ಮೀ ಕೆಂಗನಾಳ, ಪರಮೇಶ್ವರ ಕಲಶೇಟ್ಟಿ, ಸಿದ್ರಾಮಪ್ಪ ಮುಂಡೋಡಗಿ ಸೇರಿದಂತೆ ಹಲವಾರು ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು ಎಂದು ಸಂಘದ ಅಧ್ಯಕ್ಷರಾದ ಶ್ರೀಮಂತ ಅಲಂಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.