ಜಾನಪದ ಕಲೆ ಉಳಿಸಿ ಬೆಳೆಸಿದ ಕೀರ್ತಿ ಆದಿವಾಸಿಗಳಿಗೆ ಸಲ್ಲುತ್ತದೆ

ಬೀದರ: ಜು.09: ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದರಲ್ಲಿ ಆದಿವಾಸಿಗಳ ಪಾಲು ಬಹುದೊಡ್ಡದಾಗಿದ್ದು, ನಾವು ಸಹ ನಮ್ಮ ಜೀವನದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದಂತೆ ಜಾನಪದ ಕಲೆಯ ಕುರಿತು ಸಹ ಹೆಚ್ಚಿನ ಆಸಕ್ತಿ ವಹಿಸಬೇಕು ಹಾಗೂ ಬೆಳೆಸಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನಮೂಲ ಮತ್ತು ರಾಯಾನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

ಅವರು ಶನಿವಾರ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಬೀದರ, ಸಂಸ್ಕøತಿ ಮಂತ್ರಾಲಯ ನವದೆಹಲಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರು, ಕರ್ನಾಟಕ ಸಾಹಿತ್ಯ ಸಂಘ ಬೀದರ ಇವರ ಸಂಯುಕ್ತಾಶ್ರದಲ್ಲಿ ಬೀದರನ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕ್ರತಿಕ ಭವನದಲ್ಲಿ ಜುಲೈ 08 ರಿಂದ 10ವರೆಗೆ ನಡೆಯಲಿರುವ ರಾಷ್ಟ್ರೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಮಗೆ ಅಕ್ಷರದ ಜ್ಞಾನವಿಲ್ಲದ ಸಂದರ್ಭದಲ್ಲಿ ನಮ್ಮ ಪೂರ್ವಜರು ಒಂಬರಿಂದ ಒಬ್ಬರಿಗೆ ತಮ್ಮ ಜಾನಪದ ಶೈಲಿಯನ್ನು ಸಾರಿದ್ದಾರೆ ಆದರೆ ಪ್ರಸ್ತುತ ಎಲ್ಲರೂ ಜ್ಞಾನವಂತರು ಹಾಗೂ ತಂತ್ರಜ್ಞಾನದ ಅಭಿವೃದ್ದಿಯು ಬೆಟ್ಟದಷ್ಟಾದರು ಹೆಚ್ಚಿನವರ ಬಳಿ ಜನಾಪದ ಕಲೆಗಳ ಬಗ್ಗೆ ಆಸಕ್ತಿ ಇಲ್ಲದಿರುವುದರಿಂದ ನಶೀಸುತ್ತಿದೆ ಎಂದರು.

ನಾವು ಜಾನಪದಕ್ಕೆ ನೀಡಿದಷ್ಟೆ ಮಹತ್ವವನ್ನು ನಮ್ಮ ಪರಿಸರವನ್ನು ಉಳಿಸಿ ಬೆಳೆಸಲು ನೀಡಬೇಕು. ಭಾರತವು ಇಂದು ಜಿಡಿಪಿಯಲ್ಲಿ ಮಹೊನ್ನತ ಸಾಧನೆ ಮಾಡುತ್ತಿದೆ ಹಾಗೂ ಜಗತ್ತಿನ ಅತಿ ಕಡಿಮೆ ಹಣದುಬ್ಬರ ಹೊಂದಿರುವ ದೇಶ ಭಾರತವಾಗಿದೆ. ನರೇದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಪ್ರತಿಯೊಬ್ಬ ನಾಗರಿಕನಿಗು ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. 75 ಅಮೃತ ಮಹೋತ್ಸವ ಅಂಗವಾಗಿ ದೇಶದ ಹಳ್ಳಿಗಳಲ್ಲಿ ನೀರಿನ ಅಭಾವ ಕಡಿಮೆ ಮಾಡುವ ಉದ್ದೇಶದಿಂದ 75 ಸಾವಿರ ಅಮೃತ ಸರೋವರವನ್ನು ನಿರ್ಮಿಸಿದ್ದಾರೆ. ಹಾಗೂ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದಿಂದ ದೇಶದ ಪ್ರತಿ ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳ ಪರಿಚಯ ಇಡಿ ಜಗತ್ತಿಗಾಗುತ್ತಿದೆ ಎಂದು ಹೇಳಿದರು.

ಇತ್ತಿಚೇಕೆ ಸಾರ್ವಜನಿಕರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರಗಳೆ ತೆಗೆದುಕೊಳ್ಳಬೇಕು ಎನ್ನುವ ದುಷ್ಟಗುಣ ಕೆಲವರಲ್ಲಿ ಆದರಿಂದ ಇಂತಹ ಗುಣಗಳನ್ನು ಬಿಟ್ಟು ಎಲ್ಲರೂ ಕೆವಲ ಸರ್ಕಾರದ ಯೋಜನೆಗಳತ್ತ ಚಿತ್ತ ಹರಿಸದೇ ತಾವು ಕೂಡ ಸ್ವಾಹಲಂಬಿಗಳಾಗುವತ್ತ ಮುಂದೆ ಸಾಗಬೇಕು ಎಂದು ಅವರು ಸಲಹೆ ನೀಡಿದರು.

ಬೀದರನ ಕಮಠಾಣಾ ಸಮೀಪದಲ್ಲಿ ಈಗಾಗಲೇ ಜನಪದ ವಿ.ವಿ.ಗಾಗಿ ಐದು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಅದರ ಅಭಿವೃದ್ಧಿಗೆ ಹಾಗೂ ಕೇಂದ್ರ ಸರ್ಕಾರದಿಂದ ಕಲಾವಿದರಿಗೆ ನಿಡುವ ಮಾಶಾಸನ ಮೊತ್ತವು ಸದ್ಯ 4 ಸಾವಿರ ನೀಡಲಾಗುತ್ತಿದೆ. ಅದನ್ನು ಎಂಟು ಸಾವಿರಕ್ಕೆ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯಲ್ಲಿ ನಡೆಸಲು ಇಚ್ಛಿಸಿರುವ ಅಂತರಾಷ್ಟ್ರೀಯ ಜನಪದ ಉತ್ಸವ ಮತ್ತು ತೆಲಂಗಾಣ-ಕರ್ನಾಟಕ ಮಾರ್ಗಮಧ್ಯದಲ್ಲಿ ಸಾಂಸ್ಕøತಿಕ ಹಬ್ ನಿರ್ಮಾಣಕ್ಕಾಗಿ ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಜನಪದ ಕಾರ್ಯಕ್ಕೆ ನನ್ನ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ನಮ್ಮ ದೇಶದ ಕಲೆ, ಸಂಸ್ಕ್ರತಿಯನ್ನು ಉಳಿಸುವಲ್ಲಿ ಜಾನಪದವು ಸಿಂಹಪಾಲು ಹೊಂದಿದೆ ಜನಪದ ಉಳಿದರೆ ಮಾತ್ರ ದೇಶ ಮತ್ತು ಆ ರಾಷ್ಟ್ರದ ಸಂಸ್ಕøತಿ ಉಳಿಯುತ್ತದೆ ಆದರಿಂದ ನಾವೇಲ್ಲರೂ ಈ ಮಣ್ಣಿನ ಜಾನಪದ ಕಲೆಗಳನ್ನು ಉಳಿಸಿ ಬೆಳುವುದು ನಮ್ಮ ಕರ್ತವ್ಯವಾಗಿದೆ, ಇತ್ತಿಚೇಗೆ ವಿಲಾಯತಿ ಸಂಸ್ಕ್ರತಿಗೆ ನಮ್ಮ ಮಕ್ಕಳು ಮಾರುಹೊಗುತ್ತಿದ್ದಾರೆ ನಮ್ಮ ಮಕ್ಕಳಿಗೆ ಈ ಮಣ್ಣಿನ ಸೊಗಡನ್ನು ಕಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಜನಪದ ಸಂಸ್ಕøತಿಯು ಪರಸ್ಪರ ಸಂಬಂಧಗಳನ್ನು ಬೆಸೆದು ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಬಲಪಡಿಸುತ್ತದೆ ಮುಂದಿನ ದಿನಗಳಲ್ಲಿ ಜಾನಪದ ಕಲೆಯ ಉಳಿಸಿ ಬೆಳೆಸಲು ನನ್ನಿಂದ ಎಲ್ಲಾ ಸಹಕಾರಿ ನೀಡುತ್ತೆನೆ ಇದಕ್ಕೆ ಸಾರ್ವಜನಿಕರು ಸಹ ಕೈಜೋಡಿಸಬೇಕು ಅಂದಾಗ ಮಾತ್ರ ನಮ್ಮ ಜಾನಪದ ಕಲೆಯು ಬಾನೆತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಆಶಯ ಮಾತನಾಡಿ, ಇಂದಿನ ಯುವಪೀಳಿಗೆಗೆ ಜನಪದ ಸಂಸ್ಕøತಿ ಕುರಿತು ತಿಳಿಸುವ ನಿಟ್ಟಿನಲ್ಲಿ ಈ ಮೂರು ದಿವಸಗಳ ರಾಷ್ಟ್ರೀಯ ಜನಪದ ಸಮ್ಮೇಳನ ಆಯೋಜಿಸಲಾಗಿದೆ. ಅಲ್ಲದೇ ಜನಪದ ವಿಶ್ವವಿದ್ಯಾಲಯಕ್ಕಾಗಿ ಕಮಠಾಣಾ ಸಮೀಪ ಐದು ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿದೆ. ಹೀಗಾಗಿ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದು ವಿ.ವಿ. ಕಟ್ಟಡ ನಿರ್ಮಾಣಕ್ಕಾಗಿ ಸಹಕರಿಸಬೇಕೆಂದರು.

ಬೀದರ ಹಾಲಹಳ್ಳಿ ಸಮೀಪ ಇರುವ ಬೀದರ ವಿಶ್ವವಿದ್ಯಾಲಯಕ್ಕಾಗಿ 360 ಎಕರೆ ಜಮೀನು ಇದೆ. ಈ ಜಮೀನಿನಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ 10 ಕೋಟಿ ವೆಚ್ಚದ ಜನಪದ ವಸ್ತು ಸಂಗ್ರಹಾಲಯ ನಿರ್ಮಿಸಬೇಕು. ಸದ್ಯ ಬೀದರನಲ್ಲಿ 7500 ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸಿಕೊಡುತ್ತಿದ್ದೇವೆ. ಅದರಲ್ಲಿ ಕೆಲವು 60 ವರ್ಷ ಮೇಲ್ಪಟ್ಟ ಕಲಾವಿದರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ರೂ. 4000 ನೀಡುತ್ತಿದೆ. ಇದನ್ನು 8 ಸಾವಿರಕ್ಕೆ ವಿಸ್ತರಿಸಬೇಕು. ತೆಲಂಗಾಣ-ಕರ್ನಾಟಕದ ಗಡಿ ಭಾಗದಲ್ಲಿ ಒಂದು ಸಾಂಸ್ಕøತಿಕ ಹಬ್ ನಿರ್ಮಿಸಲು ಕೇಂದ್ರ ಸಚಿವರು ಪ್ರಯತ್ನಿಸಬೇಕು. ನವೆಂಬರ್ ಅಥವಾ ಡಿಸೆಂಬರ್ 2023ರಲ್ಲಿ ಬೀದರನಲ್ಲಿ ಅಂತರಾಷ್ಟ್ರೀಯ ಜನಪದ ಉತ್ಸವ ಆಯೋಜನೆ ಮಾಡುವ ಗುರಿ ಹೊಂದಲಾಗಿದೆ. ಹೀಗಾಗಿ ಈ ಸಮ್ಮೇಳನಕ್ಕೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆತರುವ ಮತ್ತು ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಸಿ ಜನಪದ ಸಮ್ಮೇಳನಕ್ಕೆ ಸಹಕರಿಸಬೇಕೆಂದು ಹೆಬ್ಬಾಳೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು.

ಬೀದರ ಜಿಲ್ಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ, ಜಿಲ್ಲೆಯ ಪಶುವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಇನ್ನು ಸಾಕಷ್ಟು ಭೂಮಿ ಇದ್ದು ಇಲ್ಲಿ ಅಂತರಾಷ್ಟ್ರೀಯ ಕ್ರೀಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು ಎಂದರು.

ಗಮನ ಸೆಳೆದ ಜಾನಪದ ನೃತ್ಯಗಳು : ಜಾನಪದ ಸಮ್ಮೇಳದಲ್ಲಿ ವಿವಿಧ ರಾಜ್ಯದಿಂದ ಹಾಗೂ ಜಿಲ್ಲೆಯ ತಾಲ್ಲೂಕುಗಳಿಂದ ಆಗಮಿಸಿದ ಕಲಾತಂಡದ ಕಲಾವಿದರು ಲಾವಣಿ ನೃತ್ಯ ವೀರಗಾಸೆ, ಸುಗ್ಗಿ ಕುಣಿತ, ಭೊತೇರ ಕುಣಿತ, ಜನಪದ ಹಾಡುಗಳು, ಗೊಂದಳಿ ಪದಗಳು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರೂ ನೃತ್ಯಗಳನ್ನು ನೋಡಿ ಹಾಡುಗಳನ್ನು ಕೇಳಿ ಆನಂದ ಪಟ್ಟರು.

ಕಾರ್ಯಕ್ರಮದಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಧ್ವಜ ಪ್ರದರ್ಶನ ಮಾಡಿದ್ದ ಜಿಲ್ಲೆಯ ಆದೀಶ ರಜನೀಶ ವಾಲಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೀದರ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ ಶೆಟಕಾರ, ಹಿರಿಯರಾದ ಶಿವಶರಣಪ್ಪ ವಾಲಿ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ. ರಜನೀಶ ವಾಲಿ, ಕರ್ನಾಟಕ ಜಾನಪದ ಪರಿಷತ್ತಿನ ಬೀದರ ಜಿಲ್ಲಾ ಸಂಚಾಲಕರಾದ ಡಾ.ರಾಜಕುಮಾರ ಹೆಬ್ಬಾಳೆ, ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಜೆಎನ್‍ಯು ವಿಶ್ವವಿದ್ಯಾಲಯದ ಕನ್ನಡ ಪೀಠದ ಪ್ರೊ.. ವಿಶ್ವನಾಥ, ಬೀದರ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮನೋಜಕುಮಾರ ಕುಲಕರ್ಣಿ, ತೆಲಂಗಾಣ ಸಂಗೀತ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ. ಶಿವಕುಮಾರ, ವಿವಧ ಕಲಾತಂಡದ ಕಲಾವಿದರು, ಶಾಲಾ-ಕಾಲೇಜಿನ ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.