ಜಾನಪದ ಕಲೆಯಿಂದ ರಾಜ್ಯ ಸಂಸ್ಕøತಿ ವಿನಿಮಯ:ಅಪ್ಪಾರಾವ ಗುನ್ನಳ್ಳಿ

ಬೀದರ: ಜು.17:ಬೀದರ ಗಡಿಜಿಲ್ಲೆಯಲ್ಲಿರುವ ತೆಲಂಗಾಣದ ಗ್ರಾಮವಾದ ಹೊಸಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೀದರ, ಸಂಸ್ಕøತಿ ಮಂತ್ರಾಲಯ ನವದೆಹಲಿ, ಓಂ ಸಾಯಿ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಗಣೇಶಪುರ, ಕರ್ನಾಟಕ ಸಾಹಿತ್ಯ ಸಂಘ ಬೀದರ ಹಾಗೂ ದಕ್ಷಿಣ ಮಧ್ಯವಲಯ ಸಾಂಸ್ಕøತಿಕ ಕೇಂದ್ರ ನಾಗಪುರ ಇವರ ಸಂಯುಕ್ತಾಶ್ರಯದಲ್ಲಿ ಜಾನದಪ ನೃತ್ಯ ಭಾರತ ಭಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕಾರ್ಯನಿರ್ವಾಹಣ ಅಭಿಯಂತರರು ಕೆಇಬಿ ಅಪ್ಪಾರಾವ ಗುನ್ನಳ್ಳಿ ಮಾತನಾಡಿ “ಜಾನಪದ ನೃತ್ಯ ಕಾರ್ಯಕ್ರಮ ಮೊಟ್ಟಮೊದಲ ಬಾರಿಗೆ ತೆಲಂಗಾಣದ ಗಡಿಗ್ರಾಮ ಹೊಸಳ್ಳಿಯಲ್ಲಿ ಹಮ್ಮಿಕೊಂಡಿದ್ದು ಜಾನಪದ ಕಲಾವಿದರಲ್ಲಿ ಸಂತಸ ಮೂಡಿದೆ. ಈ ರೀತಿಯ ಜಾನಪದ ನೃತ್ಯದಿಂದ ಪರಸ್ಪರ ರಾಜ್ಯ-ರಾಜ್ಯಗಳ ಮಧ್ಯೆ ಸಾಂಸ್ಕøತಿಕ ವಿನಿಮಯದ ಜೊತೆಗೆ ಪ್ರೀತಿ, ವಿಶ್ವಾಸ ಮತ್ತು ಸಾಂಸ್ಕøತಿಕ ಶ್ರೀಮಂತಿಕೆ ಬೆಳೆಸಲು ಸಾಧ್ಯವಾಗುತ್ತದೆ ಎಂದು ಗುನ್ನಳ್ಳಿ ನುಡಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ “ಗಡಿಭಾಗದ ಜನರ ಬಹುದಿನಗಳ ಆಸೆ ಇದಾಗಿತ್ತು. ದೂರದ ಜಮ್ಮು ಕಾಶ್ಮೀರ, ಪಂಜಾಬ್, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಕಲಾವಿದರು ಹೊಸಳ್ಳಿ ಗ್ರಾಮಕ್ಕೆ ಆಗಮಿಸಿ ಕಾರ್ಯಕ್ರಮ ನೀಡಿದ್ದು ಇದೊಂದು ಐತಿಹಾಸಿಕ ಘಟನೆ ಎಂದು ನುಡಿದರು.

ಕಲಾವಿದರ ಜನಪದ ನೃತ್ಯ: ಜಮ್ಮು ಕಾಶ್ಮೀರದ ರೂಫ್ ಜನಪದ ನೃತ್ಯ, ಓಡಿಸ್ಸಾದ ಶಂಖವಾದನ ನೃತ್ಯ, ಮಧ್ಯಪ್ರದೇಶದ ಬದಾಯಿ ನೃತ್ಯ, ಭಾಲ್ಕಿಯ ಲಂಬಾಣಿ ಜನಪದ ನೃತ್ಯ, ಮಹಾರಾಷ್ಟ್ರದ ಸುರಭಿ ನೇತೃತ್ವದ ಲಾವಣಿ ನೃತ್ಯ, ಪಂಜಾಬನ ಭಾಂಗಡಾ ನೃತ್ಯ ಸಭೀಕರ ಗಮನ ಸೆಳೆಯಿತು.

ಇದೇ ವೇಳೆ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಉಪನ್ಯಾಸಕರ ಸಂಘದ ಓಂಕಾರ ಸೂರ್ಯವಂಶಿ, ದಕ್ಷಿಣ ಮಧ್ಯವಲಯ ಸಾಂಸ್ಕøತಿಕ ಕೇಂದ್ರ ನಾಗಪುರದ ಅಧಿಕಾರಿ ದೀಪಕ ಪಾಟೀಲ, ಪ್ರಮುಖರಾದ ಶಿವಯ್ಯ ಸ್ವಾಮಿ, ಬಸಯ್ಯ ಸ್ವಾಮಿ, ವರದಯ್ಯ ಸ್ವಾಮಿ, ನೀಲಕಂಠ ಸ್ವಾಮಿ, ಓಂಪ್ರಕಾಶ ರೊಟ್ಟೆ, ಶಿವಶರಣಪ್ಪ ಗಣೇಶಪುರ, ಅಶೋಕ ಎಲಿ, ಬಸವರಾಜ ಹೆಗ್ಗೆ, ಮಾರುತಿ ಗಣೇಶಪುರ, ಜಗನ್ನಾಥ ಬಿರಾದಾರ, ಮಾಣಿಕಗೌಡ ಸೇರಿದಂತೆ ಅನೇಕರು ಉಪಸ್ತಿತರಿದ್ದರು.