
ಜೇವರ್ಗಿ:ಮಾ.10: ಕ್ಷೇತ್ರದ ವಡಗೇರಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ (ರಿ) ಕಲಬುರಗಿ ಇವರ ವತಿಯಿಂದ ಹಾಗೂ ಬಸವರಾಜ ಪಾಟೀಲ್ ಸೇಡಂ ರವರ ಅಧಕ್ಷತೆಯಲ್ಲಿ ನಡೆದ ಮೊದಲಬಾರಿ ಕಲ್ಯಾಣ ಕರ್ನಾಟಕ ಜನಪದ ಉತ್ಸವದಲ್ಲಿ ಶಾಸಕ ಡಾಕ್ಟರ್ ಅಜಯ್ ಸಿಂಗ್ ಭಾಗವಹಿಸಿ ಮಾತನಾಡಿದ ಅವರು
ಮೊದಲಬಾರಿಗೆ ನಮ್ಮ ವಡಗೇರಾದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಈ ಕಲ್ಯಾಣ ಕರ್ನಾಟಕ ಜನಪದ ಉತ್ಸವವನ್ನು ಏರ್ಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಉಳಿದುಕೊಂಡಿರುವ ಹಲವಾರು ಜಾನಪದ ಕಲೆಗಳನ್ನು ಉಳಿಸಬೇಕಾಗಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ
ಜನಪದ ಕಲೆಯು ಹಲವಾರು ಪೀಳಿಗೆಯಿಂದ ಬಂದ ಪುರಾತನ ಕಲೆಯಾಗಿದ್ದು ಅದನ್ನು ಮುಂದಿನ ತಲೆಮಾರಿಗೆ ಉಳಿಸುವ ಬೆಳೆಸುವ ಕೆಲಸ ಶ್ರೀ. ಬಸವರಾಜ ಪಾಟೀಲ್ ಸೇಡಂ ರವರಿಂದ ಇಂದು ನಡೆಯುತ್ತಿದೆ. ಈ ಜನಪದ ಉತ್ಸವದಲ್ಲಿ ಒಟ್ಟು 14 ಕಲಾ ತಂಡಗಳು ಭಾಗವಹಿಸುತ್ತಿದ್ದು, ಮೊದಲ ದಿನ 7 ಕಲಾ ತಂಡಗಳು ಹಾಗೂ ಎರಡನೇ ದಿನ 7 ಕಲಾ ತಂಡಗಳು ಅವರ ಕಲಾ ನೈಪುಣ್ಯತೆಯನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಸಾಂಪ್ರದಾಯಿಕ ಕಲೆಗಳಾದ ಡೊಳ್ಳು ಕುಣಿತ, ಪುರವಂತಿಕೆ, ಲಂಬಾಣಿ ನೃತ್ಯ, ಹಗಲು ವೇಷ, ಖಣಿ ಮೇಳ, ಭಕ್ತಿ ಭಜನಾ ತಂಡ, ದುಂಡುಮೆ ಹಾಡುಗಳು, ಡೊಳ್ಳಿನ ನೃತ್ಯ, ಗೀಗಿ ಪದಗಳು, ಜನಪದ ಗಾಯನ, ತೊಗಲು ಬೊಂಬೆ, ವಿವಿಧ ಕಲಾಭಿನಯ, ಚೌಡಕಿ ಪದಗಳು ಹಾಗೂ ಜನಪದ ಹಾಡುಗಳು ಇಲ್ಲಿ ಬಿತ್ತರಗೊಳ್ಳಲಿದೆ.
ಹಲವಾರು ತಲೆಮಾರಿನಿಂದ ಈ ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಇಂತಹ ಕಲಾ ತಂಡಗಳಿಗೆ ನಾವು ಅತ್ಯಂತ ಪೆÇ್ರೀತ್ಸಾಹವನ್ನು ನೀಡಿ ಇಂತಹ ಕಲೆಗಳನ್ನು ಉಳಿಸುವ ಕೆಲಸವನ್ನು ಇಂದು ನಾವು ಮಾಡಬೇಕಾಗಿದೆ.
ಈ ಸಂದರ್ಭದಲ್ಲಿ ಖ್ಯಾತ ಜನಪದಗಾರರಾದ ಗುರುರಾಜ ಹೊಸಕೋಟೆ, ಡಾ.ಸ್ವಾಮಿರಾವ ಕುಲಕರ್ಣಿ ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರುಕ್ಕುಮ್ ಪಟೇಲ್ ಇಜೇರಿ, ಈರಗಂಟಪ್ಪ ವಡಗೇರಾ, ಕಾಶಿರಾಯಗೌಡ ಯಲಗೋಡ, ಶ್ಯಾಮರಾಯಗೌಡ ವಡಗೇರಾ, ಶೌಕತ್ ಅಲಿ ಆಲೂರ, ಶಾಂತಪ್ಪಕೂಡಲಗಿ, ಅಯ್ಯನಗೌಡ ಪಡದಳ್ಳಿ, ಶಂಕರಗೌಡ ವಡಗೇರಾ, ಶಿವನಗೌಡ ವಡಗೇರಾ,ಹಸನಪ್ಪ ಚಲವಾದಿ,ಬಸವರಾಜ ಸಂನಜೋನಗಿ, ಬಾಪೂಗೌಡ ಮಾಲಿಪಾಟಿಲ, ತಿರುಪತಿ ದೇಸಾಯಿ, ಅಣ್ಣಾರಾಯಗೌಡ ಸನ್ನತಿ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು