ಜಾನಪದ ಕಲಿಕಾ ಶಿಬಿರ ಆಯೋಜಿಸಲು ಕರೆ

ಕೋಲಾರ ಮೇ.೨೩:ಮಕ್ಕಳು ರಜೆ ಕಾಲದಲ್ಲಿ ಸಮಯ ವ್ಯರ್ಥ ಮಾಡದೆ ಆಟ ಪಾಠಗಳ ಜೊತೆಗೆ ಜಾನಪದ ಕಲೆಗಳನ್ನು ಕಲಿಯಲು ಜಾನಪದ ಕಲಿಕಾ ಶಿಬಿರಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಾಗಿ ಹಮ್ಮಿಕೊಳ್ಳಲು ಗಮನ ಮಹಿಳಾ ಸಮೂಹದ ಸಮನ್ವಯಾಧಿಕಾರಿ ಶಾಂತಮ್ಮ ಕರೆ ನೀಡಿದರು.
ಕೋಲಾರ ನಗರದ ಹಾರೋಹಳ್ಳಿಯ ಗಮನ ಸಮೂಹದಲ್ಲಿ ಕಛೇರಿಯಲ್ಲಿ ಈನೆಲ ಈಜಲ ಕಲೆ ಮತ್ತು ಸಾಂಸೃತಿಕ ಸಂಸ್ಥೆ ಸಿಯಡ್ಸ್ ಗಮನಾ ಮಹಿಳಾ ಸಮೂಹ ಹಮ್ಮಿಕೊಂಡಿದ್ದ ಉಚಿತ ಜಾನಪದ ಗಾಯನ ಕಲಿಕಾ ಶಿಬರವನ್ನು ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲಿಕಾ ಶಿಬಿರಗಳು ಮಕ್ಕಳಲ್ಲಿ ಜಾನಪದ ಕಲೆಯನ್ನು ಬಿತ್ತುವ ಕೆಲಸವಾಗುತ್ತದೆ. ಮತ್ತು ಶಿಭಿರಾರ್ಥಿಗಳ ಮಾನಸಿಕ ಸಾಮರ್ಥ್ಯ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಬಿ. ವೆಂಕಟಾಚಲಪತಿ ಮಾತನಾಡಿ ಬೇಸಿಗೆಯ ರಜೆಗಳಲ್ಲಿ ಕಾಲ ಹರಣ ಮಾಡದೆ ಮನೆಯಲ್ಲಿಯೇ ಮಂಕು ಬೂದಿ ಎರಚಿದ ಹಾಗೆ ಮಕ್ಕಳು ಪಠ್ಯವನ್ನು ಮರೆತು ಮೊಬೈಲ್ ಟಿ.ವಿ.ಗಳನ್ನು ನೋಡುತ್ತಾ ಕಾಲಕರಣ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಜಾನಪದ ಗಾಯನ ಕಲಿಕಾ ಶಭಿರದಲ್ಲಿ ಭಾಗವಹಿಸಿ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ವಿಷಯಗಳನ್ನು ಈ ಶಿಬಿರದಲ್ಲಿ ಕಲಿಯಬೇಕು. ಈ ಶಿಬಿರವು ಮೇ. ೨೬ಕ್ಕೆ ಮುಕ್ತಾವಯವಾಗಲಿದ್ದು, ಶಿಭಿರಾರ್ಥಿಗಳು ತಪ್ಪದೇ ಐದು ಹಾಡು, ಒಂದು ನಾಟಕ, ಒಂದು ನೃತ್ಯ ರೂಪಕವನ್ನು ಕಲಿಯಲು ತಿಳಿಸಿದರು.
ಗಮನ ಲಕ್ಷ್ಮಿದೇವಿ, ಕುಡುವನಹಳ್ಳಿ ಗಣೇಶ್, ಸುನಿತ, ವೆಂಕಟರಾಮ್ ಮುಂತಾದವರು ಉಪಸ್ಥಿತರಿದ್ದರು.