ಜಾನಪದ ಕಲಾ ಕಾರ್ಯಕ್ರಮ

ಶಹಾಪುರ:ಸೆ.19:ಶ್ರೀ ಗುರು ಪುಟ್ಟರಾಜ ಸಂಗೀತ ಸಾಹಿತ್ಯ ಸಂಸ್ಕøತಿಕಾ ಕಲಾ ಸೇವಾ ಸಂಸ್ಥೆ [ರ] ಟೊಕಾಪುರ ಇವರ ಆಶ್ರೆಯದಲ್ಲಿ ನಗರದ ಆಶ್ರಯ ಕಾಲೋನಿ ಬಸ್ ಡಿಪೋ ಹಿಂಭಾಗದಲ್ಲಿ ಜಾನಪದ ಕಲೆ ಪ್ರದರ್ಶನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಜಾನಪದ ಕಲಾವಿದೆ ಶ್ರೀಮತಿ ಲಕ್ಷ್ಮೀಂಭಾಯಿ ಈರಪ್ಪ ರೇವಲ್ ಯಂಕಪ್ಪ ರೇವಲ್ ರವರು ವಿಧ್ಯುತ್‍ಕ್ತವಾಗಿ ಉಧ್ಘಾಟಿಸಿದರು.ಮುಖ್ಯ ಅಥಿತಿಗಳಾಗಿ ಕರ್ನಾಟಕ ಜರ್ನಲಿಷ್ಟ ಯುನಿಯನ್ ಜಿಲ್ಲಾಧ್ಯಕ್ಷರಾದ ಈರಣ್ಣ ಹಾದಿಮನಿ. ಬುಡ್ಗಜಂಗಮ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಯಮನಪ್ಪ ರೇವಲ್. ಎಸ್,ಡಿ,ಎಮ್,ಸಿ, ಅಧ್ಯಕ್ಷರಾದ ಹಣಮಂತ ಅಸಿಬೋಳ. ಕೊರಮ ಸಮಾಜದ ತಾಲುಕಾ ಅಧ್ಯಕ್ಷರಾದ ಹೊನ್ನಪ್ಪ ಮಾನ್ಪಡೆ. ಶಂಕರ ದೊಡಮನಿ. ಉಪಸ್ಥಿತಿರಿದ್ದರು. ಈ ಸಂಧರ್ಭದಲ್ಲಿ ಕಲಾವಿದರಾದ ಗೋಪಾಲ ಕೊಂಡ್ರೋಳ್. ಸುಗಮ ಸಂಗೀv ಮತ್ತು ಹಣಮಂತ ರೇವಲ್ ರವರಿಂದ ತತ್ವ ಪದಗಳು ಮತ್ತು ಶ್ರೀಮತಿ ಲಕ್ಷ್ಮೀಂಭಾಯಿ ರೇವಲ್ ರವರ ಕಲಾ ತಂಡದಿಂದ ಜಾನಪದ ಕಾರ್ಯಕ್ರಮಗಳ ಸೊಗಡು ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಪಂಡಿತ ತಂದೆ ನಾಗಮೂರ್ತಿ ಟೋಕಾಪುರವರಿಂದ ಕಾರ್ಯಕ್ರಮ ನಿರೂಪಿಸಿ ಸರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು.
ವಿಶೇಷ ಅಥಿತಿಗಳಾಗಿ ಕಲಾವಿದರಾದ, ರಾಮಣ್ಣ ರೇವಲ್, ಲಕ್ಷ್ಮಣ್ಣ ರೇವಲ್. ಸಿದ್ರಾಮ ಸಿದ್ದಾಪುರ ಮಾರುತಿ ಕೊಂಡ್ರೋಲ್. ತಬಲವಾದಕರಾದ ಮರಿಲಿಂಗ ಕೊಂಡ್ರೋಲ್.ಯಲ್ಲಪ್ಪ ಹುಂಡೆಕಲ್. ಆಗಮಿಸಿದ್ದರು. ಬುಡ್ಗಜಂಗಮ ಸಮಾಜದ ಮುಖಂಡರಾದ ಬಸವರಾಜ ಕಟ್ಟಿಮನಿ. ಜಗನಾಥ ಕಟ್ಟಿಮನಿ,ಹಣಮಂತ ಹೊಟೇಲ್ ಚಂದ್ರಕಾಂತ ರೇವಲ್. ರುದ್ರಪ್ಪ ಕೊಂಡ್ರೋಳ. ಮಾಹಾಂತೇಶ ರೇವಲ್. ತುಕ್ಕಪ್ಪ ಮಿನಗಾರ. ನರ್ಸಪ್ಪ ಮಿನಗಾರ. ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.