ಜಾನಪದ ಕಲಾವಿದರಿಗೆ ಪ್ರತಿಭೆ ಮಾನದಂಡವಾಗಲಿ

ಕಲಬುರಗಿ.ಜೂ.9: ನಮ್ಮ ದೇಶದ ಮೂಲ ಸಂಸ್ಕøತಿ, ಪರಂಪರೆಯಾದ ಜಾನಪದವನ್ನು ಉಳಿಸಿ, ಬೆಳೆಸುತ್ತಿರುವ ಜಾನಪದ ಕಲಾವಿದರಿಗೆ ಆರ್ಥಿಕ ಭದ್ರತೆಯಿಲ್ಲದಿರುವುದರಿಂದ ಅವರಿಗೆ ಸೂಕ್ತ ಮಾಶಾಸನ ನೀಡುವುದು ಅಗತ್ಯವಾಗಿದೆ. ಅವರ ಅನಕ್ಷರಸ್ಥರಾಗಿರುವುದರಿಂದ ದಾಖಲೆಗಳು ದೊರೆಯುವುದಿಲ್ಲ. ಆದ್ದರಿಂದ ಅವರಲ್ಲಿರುವ ಪ್ರತಿಭೆಯನ್ನು ಮಾಶಾಸನ ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡಬೇಕೆಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಸರ್ಕಾರಕ್ಕೆ ಮನವಿ ಮಾಡಿದರು.
ನಗರದ ಸಮೀಪದಲ್ಲಿರುವ ಗುಂಜ ಬಬಲಾದ ಗ್ರಾಮದಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಬುಧವಾರ ಸರಳವಾಗಿ ಜರುಗಿದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಿಗೆ ಮಾಸ್ಕ್ ವಿತರಣೆ ಮತ್ತು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಜಾನಪದ ಹಿರಿಯ ಕಲಾವಿದೆ ಸುಂದರಾಬಾಯಿ ದೇಗಾಂವ ಮಾತನಾಡಿ, ನಾನು ಸೇರಿದಂತೆ ಗ್ರಾಮದ ಕೆಲ ಮಹಿಳೆಯರು ನೂರಾರು ಜಾನಪದ ಹಾಡುಗಳನ್ನು ಹಾಡುತ್ತೇವೆ. ಅದಕ್ಕೆ ಸಂಬಂಧಿಸಿದಂತೆ ಲಿಖಿತ ದಾಖಲೆಗಳನ್ನು ನಾವು ಸಂಗ್ರಹಿಸಿಲ್ಲ. ನಮಗೆ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ನಮಗೆ ಮಾಹಿತಿಯೂ ಕೂಡಾ ಇಲ್ಲ. ನಮಗೆ ವೇದಿಕೆಗಳನ್ನು ಒದಗಿಸಿಕೊಟ್ಟು, ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿ, ಪ್ರೋತ್ಸಾಹ ಧನ, ಮಾಶಾಸನ ದೊರೆತರೆ ನಮಗೆ ಇನ್ನೂ ಹೆಚ್ಚಿನ ಹುಮ್ಮಸ್ಸು ದೊರೆಯಲು ಸಾಧ್ಯವಾಗುತ್ತದೆಯೆಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಜಾನಪದ ಕಲಾವಿದರಾದ ಬಂಡಮ್ಮ ಬಿಲಗುಂದಿ, ನಿಂಗಮ್ಮ ಜಮಾದಾರ, ಮಧುಬಾಯಿ ಕ್ಷೇತ್ರಿ, ಜಗದೇವಿ ಬಿ.ಮಠಪತಿ, ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ, ಆಳಂದ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ ದೇಗಾಂವ, ಪ್ರಮುಖರಾದ ನಿಂಗಪ್ಪ ಸಿ.ಮಂಗೊಂಡಿ, ಚಂದ್ರಶೇಖರ ಎಸ್.ಬಂಗರಗಿ, ರಾಜಕುಮಾರ ಬಟಗೇರಿ, ಬಸವಂತರಾವ ಸಿ.ಪಾಟೀಲ, ಸುಶೀಲಾಬಾಯಿ ಬಿ.ಪಾಟೀಲ, ಮಲ್ಲಿನಾಥ ಬಿ.ಪಾಟೀಲ, ಶರಣಬಸಮ್ಮ ಎಂ.ಪಾಟೀಲ, ಶಿವರಾಜ ಬಿ.ಪಾಟೀಲ, ಗುರುದೇವಿ ಎಸ್.ಪಾಟೀಲ, ದೇವೇಂದ್ರಪ್ಪ ಪಾಟ್ಲಿ, ಜಗದೇವಿ ಬಿ.ಪಾಟೀಲ, ಭುವನೇಶ್ವರಿ ಜಿ.ಸಂಗೋಳಗಿ, ಬಸವರಾಜ ಮಲಕಪ್ಪಗೋಳ್, ಲೀಲಾವತಿ ಬಿ.ಮಲಕಪ್ಪಗೋಳ್, ಚನ್ನವೀರ ಎಂ.ಪಾಟೀಲ, ಶಾಂತವೀರ ಎಂ.ಪಾಟೀಲ, ಶ್ರೀಶೈಲ್ ಎಸ್.ಪಾಟೀಲ, ಚಿನ್ನಮ್ಮ ಎಸ್.ಪಾಟೀಲ, ಈಶ್ವರ ಎಸ್.ಪಾಟೀಲ, ರಾಜಕುಮಾರ ಪಾಟೀಲ, ಸವಿತಾ ಆರ್.ಪಾಟೀಲ ಸೇರಿದಂತೆ ಮತ್ತಿತರರಿದ್ದರು.