ಜಾನಪದ ಕಲಾವಿದರಿಂದ ರಾಜಕುಮಾರ ಹೆಬ್ಬಾಳೆಗೆ ಸಂಪೂರ್ಣ ಬೆಂಬಲ: ಆಶಾಬಾಯಿ ರಾಠೋಡ

ಬೀದರ:ಏ.26: ಮೇ ೯ ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೇವಾಕಾಂಕ್ಷಿಯಾಗಿ ಡಾ. ರಾಜಕುಮಾರ ಹೆಬ್ಬಾಳೆಯವರು ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲಾ ಹಿರಿಯ ಮತ್ತು ಕಿರಿಯ ಜಾನಪದ ಕಲಾವಿದರಿಂದ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರಿನ ವಿವಿಧ ಪ್ರತಿಷ್ಠಿತ ರಾಜ್ಯಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಕಲಾತಂಡಗಳ ಆಯ್ಕೆ ಸಮಿತಿ ಸದಸ್ಯರಾದ ಶ ಆಶಾಬಾಯಿ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಯೂರಾ ಹೊಟೆಲ್‌ನಲ್ಲಿ ಜಿಲ್ಲೆಯ ಹಿರಿಯ ಮತ್ತು ಕಿರಿಯ ಜನಪದ ಕಲಾವಿದರು ಹಾಗೂ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಬೆಂಬಲ ಸೂಚಿಸುವ ಸಲುವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇತ್ತಿಚಿಗೆ ಪತ್ರಿಕಾಗೋಷ್ಠಿ ಕರೆದು ವಿಜಕುಮಾರ ಸೋನಾರೆ ಹೇಳಿದ್ದರು “ಕಸಾಪ ಚುನಾವಣೆಗೆ ನಿಂತವರು ಕಲಾವಿದರ ಬಗ್ಗೆ ಮಾತನಾಡಬಾರದು ಎಂದು. ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಒಬ್ಬ ಕಲಾವಿದರಿಗೆ ಮಾಶಾಸನ ಕೊಡಿಸಿದರೆ ಇನ್ನೊಬ್ಬ ಕಲಾವಿದರಿಗೆ ಅದು ಸ್ಫೂರ್ತಿಯಾಗುತ್ತದೆ. ಅದೇನು ಕದ್ದುಮುಚ್ಚಿ ಮಾಡಿಸುವುದಲ್ಲ. ಡಾ. ರಾಜಕುಮಾರ ಹೆಬ್ಬಾಳೆಯವರು ಸಾವಿರಾರು ಕಲಾವಿದರಿಗೆ ಮಾಶಾಸನದ ಮಾಹಿತಿ ನೀಡಿ ಸಹಕರಿಸಿದ್ದಾರೆ. ಮಾಡಿದ ಸೇವೆ ಆಧರಿಸಿ ಮತ ಕೇಳುವುದರಲ್ಲಿ ತಪ್ಪೇನಿದೆ.? ಎಂದು ಪ್ರಶ್ನಿಸಿದರಲ್ಲದೆ ನನ್ನ ಹತ್ತಿರವೇ ವಿಜಯಕುಮಾರ ಸೋನಾರೆಯವರು ಜಾನಪದ ಅಕಾಡೆಮಿ ಸದಸ್ಯರಾಗಿದ್ದಾಗ ಇಲಾಖೆಯ ಕಾರ್ಯಕ್ರಮ ಕೊಡಿಸುತ್ತೇನೆಂದು ಹೇಳಿ ೧೦ ಸಾವಿರ ಹಣ ಲಂಚ ಪಡೆದಿದ್ದಾರೆ. ಜೊತೆಗೆ ಲಂಬಾಣಿ ಕಲಾವಿದರಾದ ಕಮಲಾಬಾಯಿ ಗೋಪಿನಾಥ, ಸುಶೀಲಾಬಾಯಿ ಲಾಲಸಿಂಗ್ ಅವರಿಗೆ ಮಾಶಾಸನ ಮಾಡಿಸುತ್ತೇನೆಂದು ಹೇಳಿ ಐದು ಸಾವಿರ ರೂಪಾಯಿ ಲಂಚ ಕೇಳಿದಾಗ ಬಡ ಕಲಾವಿದರು ಕಷ್ಟಪಟ್ಟು ಜಮಾ ಮಾಡಿ ಎರಡು ಸಾವಿರ ಹಣ ಕೊಟ್ಟಿದ್ದಾರೆ ಎಂದು ತಿಳಿಸಿದರು. ಅಲ್ಲದೆ ದಿನಾ ಬೆಳಗಾದರೆ ಲಂಚ ಪಡೆಯುವುದು, ಸುಳ್ಳು ಹೇಳುವುದು ಸೋನಾರೆಯವರ ಕಾಯಕವಾಗಿದೆ. ಸೋನಾರೆಯವರು ಡಾ. ರಾಜಕುಮಾರ ಹೆಬ್ಬಾಳೆಯವರ ಕುರಿತು ಮಾತನಾಡುವ ನೈತಿಕತೆ ಅವರಿಗಿಲ್ಲ. ಅವನೊಬ್ಬ ಢೋಂಗಿ ಕಲಾವಿದನಾಗಿದ್ದಾನೆ. ಆದ್ದರಿಂದಲೇ ಸ್ವಯಂಘೋಷಿತ ಜಿಲ್ಲಾ ಜಾನಪದ ಕಲಾವಿದರ ಬಳಗದ ಅಧ್ಯಕ್ಷನೆಂದು ಹೇಳಿಕೊಂಡು ಕೇಂದ್ರ ಸರ್ಕಾರಕ್ಕೆ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿರುತ್ತಾರೆ. ಇವರಿಗೆ ಯಾವುದೇ ಜನಪದ ಕಲೆಯಲ್ಲಿ ಅನುಭವವಿಲ್ಲವೆಂದು ಕೇಂದ್ರ ಸರ್ಕಾರ ಇವರ ಅರ್ಜಿ ತಿರಸ್ಕರಿಸುವುದು ಇವರು ಮಾಡಿದ ಸಾಧನೆ ತೋರಿಸುತ್ತದೆ. ಇಂಥವರಿAದ ಸುರೇಶ ಚನಶೆಟ್ಟಿಯವರು ಪತ್ರಿಕಾಗೋಷ್ಠಿ ಮಾಡಿಸಿ ವಾಮಮಾರ್ಗದಿಂದ ಗೆಲುವು ಸಾಧಿಸಲು ಕುಮ್ಮಕ್ಕು ನೀಡುತ್ತಿರುವುದು ಸಾಹಿತ್ಯ ಕ್ಷೇತ್ರದ ದುರಂತ ಕಥೆಯಾಗಿದೆ.
ರಾಷ್ಟಿçÃಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಎಂದು ಹೇಳಿಕೊಳ್ಳುವ ರಾಜಕುಮಾರ ಅವರಿಗೆ ತತ್ವಪದ ಬರುವುದಿಲ್ಲ ಎಂದು ಸೋನಾರೆ ಹೇಳಿದ್ದಾರೆ. ಆದರೆ ಸರ್ಕಾರ ಕಲಾವಿದರಿಗೆ, ಸಂಘಟಕರಿಗೆ, ಸಾಹಿತಿಗಳಿಗೆ ಹಾಗೂ ಸಾಂಸ್ಕೃತಿಕ ರಾಯಭಾರಿಗಳಿಗೆ ಜವಾಬ್ದಾರಿ ನೀಡುತ್ತದೆ. ಹೀಗಾಗಿ ಡಾ. ರಾಜಕುಮಾರ ಒಬ್ಬ ಸಂಘಟಕರು. ಅವರು ಕಲಾವಿದರನ್ನು ಮತ್ತು ಸಾಹಿತಿಗಳಿಗೆ ಪ್ರಾಮಾಣಿಕವಾಗಿ ವೇದಿಕೆ ಒದಗಿಸಿಕೊಟ್ಟು ಸಂಘಟನೆ ಮಾಡುತ್ತಾರೆ. ಈ ಕುರಿತು ಕನಿಷ್ಠ ಜ್ಞಾನವೂ ಸೋನಾರೆಯವರಿಗೆ ಇಲ್ಲ. ಅಲ್ಲದೆ ಡಾ. ರಾಜಕುಮಾರ ಅವರು ದೆಹಲಿವರೆಗೆ ಬೆಳೆದದ್ದು ಅವರಿಗೆ ಆಗುತ್ತಿಲ್ಲ. ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಆಶಾಬಾಯಿ ತಿಳಿಸಿದರಲ್ಲದೆ ಬಡ ಲಂಬಾಣಿ ಕಲಾವಿದೆ ಮಾಯಾ ರಾಠೋಡ ಅವರನ್ನು ಭಾರತ ಸರ್ಕಾರದ ವತಿಯಿಂದ ಯುವ ಶಿಷ್ಯವೇತನ ಮಾಡಿಸಿದ್ದು ಸ್ವಾಗತಾರ್ಹ. ಆದ್ದರಿಂದ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಜನಪದ ಕಲಾವಿದರ ವತಿಯಿಂದ ಬೇಷರತ್ ಬೆಂಬಲ ಸೂಚಿಸುತ್ತಿದ್ದೇವೆ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಅತಿಥಿ ಉಪನ್ಯಾಸಕರಾದ ಎಸ್.ಬಿ.ಕುಚಬಾಳ ಅವರು ಮಾತನಾಡಿ “ಶಂಕರ ಚೊಂಡಿಯವರು ಇಷ್ಟು ದಿವಸ ಸುಮ್ಮನಿದ್ದು ಚುನಾವಣೆ ಸಂದರ್ಭದಲ್ಲಿಯೇ ಹೇಳಿಕೆ ನೀಡುತ್ತಿರುವುದೇಕೆ? ಎಂಬುದು ನಮ್ಮ ಪ್ರಶ್ನೆಯಾಗಿದೆ. ಅಲ್ಲದೆ ಉಪನ್ಯಾಸಕರ ಸಂಬಳ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯಿಂದ ನೇರವಾಗಿ ಉಪನ್ಯಾಸಕರ ಖಾತೆಗೆ ಜಮಾ ಆಗುತಿತ್ತು. ಆದರೆ ಡಾ. ಜಗನ್ನಾಥ ಹೆಬ್ಬಾಳೆಯವರು ಅರ್ಧ ಸಂಬಳ ನೀಡುತಿದ್ದರು ಎಂದು ಆರೋಪಿಸಿದ್ದು ಸತ್ಯಕ್ಕೆ ದೂರವಾದ ಮಾತು. ೨೦೧೮ ರಲ್ಲಿ ವಿಶ್ವವಿದ್ಯಾಲಯವು ಅತಿಥಿ ಉಪನ್ಯಾಸಕರನ್ನು ಸಂದರ್ಶನಕ್ಕೆ ಆಹ್ವಾನಿಸಿದಾಗ ಕುಲಸಚಿವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಶಂಕರ ಚೊಂಡಿ ಆಯ್ಕೆಯಾಗಿರುವುದಿಲ್ಲ. ಆದ್ದರಿಂದ ವಿನಾಕಾರಣ ಚೊಂಡಿ ಡಾ. ಹೆಬ್ಬಾಳೆಯವರ ಮೇಲೆ ಆರೋಪ ಮಾಡುತ್ತಿರುವುದು ಖಂಡನಾರ್ಹ ವಿಷಯವಾಗಿದೆ ಎಂದು ತಿಳಿಸಿದರಲ್ಲದೆ ಚುನಾವಣೆಗೆ ಸ್ಪರ್ಧಿಸಿರುವುದು ಡಾ. ರಾಜಕುಮಾರ ಹೆಬ್ಬಾಳೆಯವರು. ಆದರೆ ಅನಾವಶ್ಯಕವಾಗಿ ಡಾ. ಜಗನ್ನಾಥ ಹೆಬ್ಬಾಳೆಯವರ ಹೆಸರು ಇದರಲ್ಲಿ ಎಳೆತರುವುದು ಸಮಂಜಸವಲ್ಲ. ವಿನಾಕಾರಣ ಅವರಿಗೆ ಸಂಬAಧವಿಲ್ಲದ ವಿಷಯಗಳನ್ನು ಹಾಗೂ ಕುಟುಂಬದವರ ಬಗ್ಗೆ ಮಾತನಾಡುತ್ತಿರುವುದು ಅವರ ನೈತಿಕತೆ ಅಧಃಪತನಕ್ಕೆ ಸಾಕ್ಷಿಯಾಗಿದೆ.
ಜಾನಪದ ಯುವ ಕಲಾವಿದರಾದ ಅಂಬಾದಾಸ ಪೋಳ್ ಅವರು ಮಾತನಾಡಿ “ನಾನು ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಮಾತ್ರ ಕಲಾಪ್ರದರ್ಶನ ಮಾಡುತಿದ್ದೆ. ಆದರೆ ಭಾರತ ಸರ್ಕಾರದ ಯುವ ಶಿಷ್ಯ ವೇತನದ ಮಾಹಿತಿಯನ್ನು ಡಾ. ರಾಜಕುಮಾರ ಹೆಬ್ಬಾಳೆಯವರು ನನಗೆ ನೀಡಿ ಉದಯಪುರಕ್ಕೆ ಸಂದರ್ಶನಕ್ಕಾಗಿ ಕಳುಹಿಸಿದ್ದರು. ಸಂದರ್ಶನದಲ್ಲಿ ಪಾಸಾದ ನಂತರ ೨೦೧೬-೧೭ನೇ ಅವಧಿಗೆ ಭಾರತ ಸರ್ಕಾರ ಯುವ ಶಿಷ್ಯವೇತನಕ್ಕೆ ಆಯ್ಕೆ ಮಾಡಿತು. ಸರ್ಕಾರ ೧ ಲಕ್ಷ ೨೦ ಸಾವಿರ ಶಿಷ್ಯ ವೇತನವನ್ನು ಆರ್‌ಟಿಜಿಎಸ್ ಮೂಲಕ ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿತು. ಡಾ. ರಾಜಕುಮಾರ ಅವರ ಸಹಕಾರದಿಂದಲೇ ನನಗೆ ಶಿಷ್ಯವೇತನ ಲಭಿಸಿ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದುಕೊಳ್ಳಲು ಸಾಧ್ಯವಾಯಿತು. ಡಾ. ರಾಜಕುಮಾರ ಹೆಬ್ಬಾಳೆಯವರು ನನ್ನಂತ ಅನೇಕ ಬಡ ಕಲಾವಿದರಿಗೆ ರಾಷ್ಟçಮಟ್ಟದ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಸೋನಾರೆಯವರು ಸುಳ್ಳು ಹೇಳುವ ಮೂಲಕ ಚುನಾವಣೆಯ ಗಿಮಿಕ್ ಮಾಡುತ್ತಿರುವುದು ಖಂಡನಾರ್ಹವಾಗಿದೆ. ಅವರಿಗೆ ನಿಜವಾಗಿ ಕಲಾವಿದರ ಬಗ್ಗೆ ಗೌರವವಿದ್ದರೆ ಡಾ. ರಾಜಕುಮಾರ ಹೆಬ್ಬಾಳೆಯವರು ಏನಾದರೂ ಮಾಡಿರುವುದು ಕಂಡು ಬಂದರೆ ಈ ಹಿಂದೆಯೇ ಹೇಳಬಹುದಿತ್ತು. ಅದನ್ನು ಬಿಟ್ಟು ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿ ಡಾ. ರಾಜಕುಮಾರ ಹೆಬ್ಬಾಳೆಯವರ ಘನತೆಗೆ ಧಕ್ಕೆ ತರುವುದು ಸರಿಯಾದ ಕ್ರಮವಲ್ಲ ಎಂದರು. ನಮ್ಮೆಲ್ಲಾ ಕಲಾವಿದರ ಬೆಂಬಲ ಡಾ. ರಾಜಕುಮಾರ ಅವರಿಗಿದೆ ಎಂದರು.
ಇನ್ನೋರ್ವ ಜನಪದ ಯುವಕಲಾವಿದರಾದ ಪವನ್ ನಾಟೇಕಾರ್ ಅವರು ಮಾತನಾಡಿ “ಡಾ. ರಾಜಕುಮಾರ ಹೆಬ್ಬಾಳೆಯವರು ಭಾರತ ಸರ್ಕಾರದ ವತಿಯಿಂದ ಹಮ್ಮಿಕೊಂಡ ಗೋವಾ ರಾಷ್ಟೀಯ ಸಮ್ಮೇಳನಕ್ಕೆ ನನ್ನನ್ನು ಕಳುಹಿಸಿ ಸಂಭಾವನೆ ಒದಗಿಸಿ ಕೊಟ್ಟಿದ್ದಾರೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.
ಮಹಿಳಾ ಜಾನಪದ ಕಲಾವಿದರಾದ ಕಮಲಮ್ಮ ಉಜನಿ ಮಾತನಾಡಿ “ಡಾ. ರಾಜಕುಮಾರ ಹೆಬ್ಬಾಳೆಯವರು ನನಗೆ ಮಧುರೈನಲ್ಲಿ ನಡೆದ ರಾಷ್ಟಿçÃಯ ಜನಪದ ನೃತ್ಯೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ ಕಳುಹಿಸಿ ವೇದಿಕೆ ಮತ್ತು ಸಂಭಾವನೆ ಒದಗಿಸಿಕೊಟ್ಟಿದ್ದರು. ಇಂತಹ ಹಲವಾರು ಬಡ ಕಲಾವಿದರಿಗೆ ಸ್ಫೂರ್ತಿ ನೀಡಿದ್ದಾರೆ. ಆದ್ದರಿಂದ ಗಾಳಿಮಾತಿಗೆ ಯಾರೂ ಬೆಲೆಕೊಡದೆ ಈ ಬಾರಿ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಬೆಂಬಲಿಸಿ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ ಹಾಗೂ ಇತರರು ಉಪಸ್ಥಿತರಿದ್ದರು