ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ: ಶೆಟ್ಟರ

ಗುಳೇದಗುಡ್ಡ, ಮಾ28: ಪಟ್ಟಣದಲ್ಲಿ ಹೋಳಿ ಹಬ್ಬ ವೈಶಿಷ್ಠತೆ ಪಡೆದುಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಹೋಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹೋಳಿ ಹಬ್ಬದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನದ ಜೊತೆಗೆ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಹೇಳಿದರು.
ಅವರು ಗೆಳೆಯರ ಬಳಗದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ. ಹೋಳಿ ಹಬ್ಬದ ಅಂಗವಾಗಿ ಜಾನಪದ ಕಲೆಗಳ ಪ್ರದರ್ಶನ ಆಯೋಜಿಸಿರುವದು ಸಂತಸ ತಂದಿದೆಂದು ಹೇಳಿದರು.
ಈ ವೇಳೆಯಲ್ಲಿ ಬಾಗಲಕೋಟೆಯ ನಾಗರಾಜ ಅಂಗಡಿ ಕಲಾ ತಂಡದಿಂದ ಜಾನಪದ ಹಲಗೆ ಮೇಳ, ಕೋತಬಾಳದ ಅರುಣೋದಯ ಕಲಾ ತಂಡದ ಶಂಕ್ರಪ್ಪ ಸಂಕಣ್ಣವರ ಜಾನಪದ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖಂಡರು ಸಂಜೀಯ್ ಬರಗುಂಡಿ, ಸುಧೀರ ಗುಡ್ಡದ, ಶರಣು ಚಿಕ್ಕನರಗುಂದ, ಸಂಪತಕುಮಾರ ರಾಠಿ, ಮಹೇಶ ಬಿಜಾಪೂರ, ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ವಿನೋದ ಮದ್ದಾನಿ, ಉಮೇಶ ಹುನಗುಂದ ಹಾಗೂ ಅನ್ವರಖಾನ ಪಠಾಣ, ಪ್ರಕಾಶ ರೋಜಿ, ಸಾಗರ ಕೋಕಾಟಿ, ಪ್ರವೀಣ ದೇವಗಿರಕರ, ವಿಕಾಶ ರೋಜಿ, ಸಂಜೀವ ರಾಂಪೂರ ಇತರರು ಇದ್ದರು.