ಜಾನಪದ ಕಲಾವಿದರನ್ನು ಪೋತ್ಸಾಹಿಸುವದು ಪ್ರತಿಯೊಬ್ಬರ ಕರ್ತವ್ಯ : ಕಂಬಳೇಶ್ವರ ಶ್ರೀ

ಚಿತ್ತಾಪುರ:ಡಿ.3:ಜಾನಪದ ಕಲಾವಿದರನ್ನು ಪ್ರತಿಯೊಬ್ಬರು ಪೋತ್ಸಹಿಸಿದಾಗ ಮಾತ್ರ ಜಾನಪದ ಕಲೆ ಉಳಿಯಲು ಸಾದ್ಯ ಎಂದು ಕಂಬಳೇಶ್ವರ ಮಠದ ಶ್ರೀಸೋಮಶೇಖರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಅಳ್ಳೋಳ್ಳಿಯಲ್ಲಿ ಕರ್ನಾಟಕ eನಪದ ಪರಿಷತ್ತು ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡ ಜಾನಪದ ಝೇಂಕಾರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು ಜಾನಪದ ಕಲಾವಿದರು ನಾಡಿನ ಸಾಂಸ್ಕ್ರತಿಕ ರಾಯಬಾರಿಗಳು. ಹಳ್ಳಿಗಳಲ್ಲಿ ಮಾತ್ರ ಜಾನಪದ ಕಲೆಗಳು ಜೀವಂತ ಉಳಿದಿದೆ ಇವರನ್ನು ಸಂಘ ಸಂಸ್ಥೆಯವರು ಸರಕಾರ, ಕಲಾವಿದರನ್ನು ಗುರುತಿಸಬೇಕು ಎಂದು ಹೇಳಿದರು.

ಮುಖ್ಯಥಿತಿಯಾಗಿ ಹಿಂದುಳಿದ ವರ್ಗಾಗಳ ಬಿಜೆಪಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮನೋರ ಮಾತನಾಡಿ ಕನ್ನಡ ಸಂಸ್ಕ್ರತಿ ಇಲಾಖೆ ಗ್ರಾಮೀಣ ಭಾಗದ ಕಲಾವಿದರನ್ನು ನಿರ್ಲಕ್ಷಿಸುತ್ತದೆ.ಅವರು ಸರಕಾರದಿಂದ ಸಿಗುವ್ಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಂಘ ಸಂಸ್ಥೆಯವರು ಗ್ರಾಮೀಣ ಭಾಗದ ಕಲಾವಿದರಿಗೆ ಸರಕಾರದ ಸೌಲಭ್ಯ ಪಡೆಯಲು ಶ್ರಮಿಸಬೇಕು ಎಂದು ಹೇಳಿದರು. ಮುಖ್ಯ ಅಥಿತಿಯಾಗಿ ಪಂಚಾಕ್ಷರಿ ಪೂಜಾರಿ, ಸೋಮಶೇಖರ ಮೋಶನಿ, ಕಾಶಿರಾಯ, ಬಸವರಾಜ ಎಂಬತ್ತನಾಳ, ವೀರಭದ್ರಪ್ಪ ತೆಂಗಳಿ ಇದ್ದರು. ತಾಲೂಕ ಅಧ್ಯಕ್ಷ ನಾಗಯ್ಯ ಸ್ವಾಮಿ ಅದ್ಯಕ್ಷತೆ ವಹಿಸಿದರು

ಭೀಮನಹಳ್ಳಿಯ ಕಲಾವಿದರಾದ ಮಹಾದೇವಿ ಹೊಸ್ಮನಿ, ಶಿವಮ್ಮ ಮೈಲಾರ, ಬಸಲಿಂಗಮ್ಮ ಜಕ್ಕೂಬ,ಬಸ್ಸಮ್ಮ ಅಂಬರ್, ಬಸಮ್ಮ ಹಾಸ್ಟೇಲ್, ರಾಜೋಳ್ಳಿ ಸರಸ್ವತಿ ರಿಮಾಕನೂರ್, ನಾಗಮ್ಮ ರಾಮನೂರ, ದೇವಕಮ್ಮ ಕೆರಬೋ, ಅಯ್ಯಮ್ಮ ಕೊರಬೋ, ಸರಸ್ವತಿ ಪರಮನೋರ್, ದಂಡಗಂಡದ ಮಹಾದೇವಿ ಕರಿಕೇನರ್, ದುರ್ಗಮ್ಮ ಗುಡ್ಡೆನೋರ್, ಗೌರಮ್ಮ, ಸಾಬವ್ವ ದೇವಣಿ, ಮಲ್ಲಮ್ಮ ಬೂಸನೂರ, ಅಂಜಮ್ಮ ದ್ಯಾವಣಿ, ಶರಣಮ್ಮ ಹುಳಗೋಳ ಅವರು ಸೋಬಾನ ಪದಗಳು ಹಾಡಿದರು.
ಭೀನಮಹಳ್ಳಿಯ ಕಲಾವಿದರಾದ ತಿಮ್ಮರಾಯ, ಚೆನ್ನಪ್ಪ, ದೇವಿಂದ್ರಪ್ಪ ಪಟ್ಟಾ, ರಾಜೋಳ್ಳಾ ಮಲ್ಲಿಕಾರ್ಜುನ ವೀಶ್ವಕರ್ಮ, ಸಾಬಣ್ಣ ಕ್ಯಾಲಬ್, ಬಸಪ್ಪ ದಿಮಾಕ್, ಬೀರಪ್ಪ ಹುಂಡೆಕಾರ, ಇಮಾಮಸಾಬ, ಅಲ್ಲೂರ (ಕೆ)ಯ ಚಂದ್ರಾಮ ನಾಟಿPಕಾರ್, ಭೀಮರಾಯ, ಮಲ್ಲಪ್ಪ ತೆಲಗರ, ದೇವಪ್ಪ ಬಾನರ, ಬೆಳಗೇರಿಯ ಚೆನ್ನಪ್ಪ ಶಾಹಾಪುರ, ರಾಮಣ್ಣ ಗುಡ್ಡನೋರ, ಹಣಮಂತ, ಕಾಂತಪ್ಪ ಮಲ್ಲಪ್ಪ ಅರಕೇರಿ, ಬಸವರಾಜ ಹಡಪದ ಡೋಣಗಾಂವದ ರೇವಣಯ್ಯ ಸ್ವಾಮಿ, ಅಲ್ಲೂರ(ಬಿ)ಯ ದೇವಿಂಧ್ರ ಚಮ್ಮಾ, ಹಣಮಂತ ಬೋಳಿ, ಅಯ್ಯಪ್ಪ ಚೆಮ್ಮನೂರ, ನಾಗೇಶ ಗಮಗಾ, ದಂಡಗುಂಡ ಕಲಾವಿದರಾದ ಭೀಮಣ್ಣಾ, ಗಂಗಪ್ಪ ಅಡPಕಾಯಿ, ದುರಗಪ್ಪ ಯರಗೋಳ್, ಭಜನೆ ಪದಗಳು ಹಾಡಿದರು. ಶಾಂತಕುಮಾರ ಭಂಕಲಗಿ ಜಾನಪದ ಗೀತೆ ಹಾಡಿದರು. ಮೋಹರಂ ಪದ ನದಿಮಸಾಬ ಮುಲ್ಲಾ, ಚಂದಾಪಾó, ಅಯ್ಯಪ್ಪ ಪುಜರಿ, ಬಸವರಾಜ ಸಾಯಬಣ್ಣ ಸುಬೆದಾರ, ಶರಣಪ್ಪ ಹೊಸನಿ ಬೀಮನಹಳ್ಳಿ, ರಾಜಳಾ ಇಮಾಸಾಬ ಮುಲ್ಲಾ, ನರಸಪ್ಪ, ಕಾಶಪ್ಪ ತಳವಾರ, ಹುಸೇನಸಾಬ,ಸಿದ್ರಾಮಪ್ಪ ಡೋಣಗಾಂವ, ಸೇರಿದಂತೆ ಅನೇಕ ಜಾನಪದ ಕಲಾವಿದರು ಬಾಗವಹಿಸಿ ಪ್ರರ್ಶನ ನೀಡಿದರು.