ಜಾನಪದ ಕಲಾಪ್ರದರ್ಶನ

ಬೀದರ್:ಜು.10: ಆಶಾಬಾಯಿ ರಾಠೋಡ ತಂಡದಿಂದ ಲಂಬಾಣಿ ನೃತ್ಯ, ಶ್ರೀಮತಿ ಚಿನ್ನಮ್ಮ ಸಂಗಡಿಗರಿಂದ ಡೊಳ್ಳು ಕುಣಿತ, ನಾಗಮ್ಮ ಚಂದಾಪುರೆ ತಂಡದಿಂದ ಸೋಬಾನೆ ಹಾಡುಗಳು, ಶೇಷರಾವ ಬೆಳಕುಣಿಕರ್ ತಂಡದಿಂದ ಬುದ್ಧ ಭಜನೆ, ವಿಶ್ವನಾಥ ಕಲಾತಂಡದಿಂದ ಗಾರುಡಿ ಗೊಂಬೆ ಕಲಾಪ್ರದರ್ಶನ ಜರುಗಿತು. ಈ ಕಾರ್ಯಕ್ರಮವನ್ನು ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪೆÇ್ರ. ಎಸ್.ವಿ.ಕಲ್ಮಠ, ಅತಿಥಿಗಳಾಗಿ ಸಂಗೀತ ಕಲಾಮಂಡಲದ ಅಧ್ಯಕ್ಷ ರಾಜೇಂದ್ರಸಿಂಗ್ ಪವಾರ್ ಆಗಮಿಸಿದ್ದರು.
ಸಂಗಮೇಶ ಜವಾದಿ ನಿರೂಪಿಸಿದರು. ಶಿವಶರಣಪ್ಪ ಗಣೇಶಪುರ ಸ್ವಾಗತಿಸಿದರು. ಪ್ರಕಾಶ ಕನ್ನಾಳೆ ವಂದಿಸಿದರು.