ಜಾನಪದ ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನಾಂಗದ ಮೇಲಿದೆ: ಆಲೆಗಾಂವ

ಕಲಬುರಗಿ,ಜು.14-ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದು . ಸಾಂಸ್ಕøತಿಕ ಕಲೆಗಳನ್ನು ನಿರ್ಲಕ್ಷಿಸಲಾಗಿದೆ. ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಬೈಲಾಟದ ಹಿರಿಯ ಕಲಾವಿದರಾದ ಮಲ್ಲಿನಾಥ ಆಲೆಗಾಂವ ಅವರು ತಿಳಿಸಿದರು.
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ಕಿವುಡ ಕಟ್ಟಿಯ ಆವರಣದಲ್ಲಿ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಆಯೊಜಿಸಿದ ಆಷಾಡ ಮಾಸದ ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮವು ತಬಲಾ ಭಾರಿಸುವ ಮುಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡಿನ ಕಲೆ, ನುಡಿ ಸಂಸ್ಕೃತಿ ಜಾನಪದ ಬಹಳ ಹಿಂದಿನ ಕಾಲದಿಂದಲೂ ಬಂದಿರುವಂತದ್ದು, ಇವುಗಳನ್ನೆ ನಮಗೆ ಇಂದು ಮುಂದುವರೆಸಿ ಕೊಂಡು ಹೊಗುವುದಕ್ಕೆ ಆಗುತ್ತಿಲ್ಲಾ. ಆದ್ದರಿಂದ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ಯುವ ಜನಾಂಗದ ಪ್ರಮುಖ ಕರ್ತವ್ಯ ವಾಗಿದೆ. ಇದರ ಜೊತೆಗೆ ಕಲಾವಿದರನ್ನು ಪೆÇ್ರತ್ಸಾಹಿಸಬೇಕೆಂದು ತಿಳಿಸಿದರು.
ಬಸವರಾಜ ತೋಟದ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡುತ್ತ ನಮ್ಮ ಸಂಸ್ಥೆಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಟ್ಟದಲ್ಲಿ ಕಲಾವಿದರಿಗಾಗಿ ವೇದಿಕೆ ವದಗಿಸುವುದಾಗಿದೆ ಎಂದರು.
ಆಷಾಡ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮದಲ್ಲಿ ಜಾನಪದ ಶ್ರೀದೇವಿ ಬಿ. ವಚನಗಾಯನ ವಿಜಯಕುಮಾರ್ ಹಡಲಗಿ. ತತ್ವಪದ ಸಿದ್ದರಾಮ ಪಾಟೀಲ್. ಸೋಬಾನೆ ಪದ ಇರಣ್ಣಾ ಎಸ್ . ಜೋಗುಳ ಪದ. ಪಾರ್ವತಿ ಭಿಮಣ್ಣಾ . ಕೊಟ್ಟು ಬಿಸುವಪದ. ಕಾವೆರಿ ಉಮೆಶ. ತಬಲಾಸಾತ. ಬಸ್ಸಯ್ಯ ಸ್ವಾಮಿ. ಹಾರ್ಮೋನಿಯಂ ಸಾತ ಶರಣಪ್ಪ ಕಾರಬಾರಿ ನೀಡಿದರು.
ಇ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಕಮಲಾಬಾಯಿ ಸಂಗಪ್ಪ. ಪ್ರಕಾಶ ಆಲೆಗಾಂವ ಸಂಸ್ಥೆಯ ಸದಸ್ಯರಾದ ಬಸವರಾಜ ಬಳುರ್ಗಿ ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.