
ಗೋಕಾಕ,ಏ15 : ಗ್ರಾಮೀಣ ಮೂಲ ಸಂಸ್ಕøತಿಯನ್ನು ಬಿಂಬಿಸುವ ಜಾನಪದದಲ್ಲಿ ಬದುಕಿನ ನಿಜವಾದ ಮೌಲ್ಯಗಳು ಅಡಕವಾಗಿವೆ' ಎಂದು ಶಿಂಧೋಳಿಯ ಸಾಹಿತಿ ಎ.ಎ. ಸನದಿ ಹೇಳಿದರು. ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಸಾಹಿತ್ಯ, ಸಾಂಸ್ಕøತಿಕ ಸೌರಭಕಾರ್ಯಕ್ರಮದಲ್ಲಿ
ಜಾನಪದತ್ರಿಪದಿಯಲ್ಲಿಜೀವನದರ್ಶನ’ ಕುರಿತುಉಪನ್ಯಾಸ ನೀಡಿದಅವರುತ್ರಿಪದಿಗಳು ಜನಪದರುಕನ್ನಡ ಸಾಹಿತ್ಯಕ್ಕೆ ನೀಡಿದ ಬಹುದೊಡ್ಡಕಾಣಿಕೆಯಾಗಿದೆಎಂದರು.
ಜನಪದರುತಾವು ಅನುಭವಿಸಿದ ನೋವು, ನಲಿವು, ದು:ಖ, ದುಮ್ಮಾನ, ಅನುಭವ ಇವುಗಳನ್ನು ಹೃದಯದಿಂದ ಹಾಡಿದರು. ಅವು ಒಬ್ಬರಿಂದಒಬ್ಬರಿಗೆ ಸಾಗಿ ವ್ಯಾಪಕತೆಯನ್ನು ಪಡೆದುಕೊಂಡಿತು.ಗ್ರಾಮೀಣಜನರ ಬದುಕು, ಜೀವನ, ಸಂಸ್ಕøತಿಇವೆಲ್ಲವನ್ನು ಒಳಗೊಂಡಿರುವುದೇ ಜಾನಪದ ಸಾಹಿತ್ಯದವೈಶಿಷ್ಟ್ಯವಾಗಿದೆ ಎಂದರು.
ಜಾನಪದ ಸಾಹಿತ್ಯದಲ್ಲಿ ಮಹಿಳೆಗೆ ಪ್ರಮುಖ ಸ್ಥಾನವಿದೆ.ಗರತಿ, ಪತಿವ್ರತೆ, ತ್ಯಾಗಿ, ತಾಯಿ ಹೀಗೆಕುಟುಂಬ ವಿವಿಧ ಹಂತಗಳಲ್ಲಿ ಚಿತ್ರಿತಗೊಂಡಿರುವುದನ್ನಜಾನಪದವು ಹೇಳುತ್ತದೆ ಎಂದರು.
ಹಲವಾರುಜನಪದ ತ್ರಿಪದಿಗಳ ಮೂಲಕ ಜಾನಪದ ಸಾಹಿತ್ಯದ ರಸದೌತಣವನ್ನು ಸೇರಿದ ಸಹಸ್ರಾರುಜನರಿಗೆನೀಡಿದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಅವರು ಮಾತನಾಡಿ, ದಾನ, ಧರ್ಮಗಳ ಮೂಲಕ ಜೀವನದ ಸಾರ್ಥಕತೆಯನ್ನು ಪ್ರಾಪ್ತಮಾಡಿಕೊಳ್ಳಬೇಕು.ನುಡಿದಂತೆ ನಡೆಯುವ ಮೂಲಕ ಸಸ್ಕಾರ್ಯಗಳಲ್ಲಿ ತೊಡಗಿಕೊಂಡುಜೀವನದಲ್ಲಿ ಶಾಂತಿ, ನೆಮ್ಮದಿಯನ್ನುಕಾಣಬೇಕುಎಂದರು.
ಕಡನಿ ಶಾಂತವೀರಸ್ವಾಮಿಅವರುಜಗದ್ಗುರು ಸಿದ್ದಲಿಂಗೇಶ್ವರ ಪುರಾಣವನ್ನು ಹೇಳಿದರು.
ಗಾನಭೂಷಣ ವೀರೇಶಕಿತ್ತೂರ, ಮಲ್ಲಿಕಾರ್ಜುನ ಹರತಿ, ರಾಘವೇಂದ್ರ ಕೃಷ್ಣಾ, ಶಾಮರಾವ ಪುಲಾರೆ, ವಿಜಯದೊಡ್ಡಣ್ಣವರಅವರಿಂದಜರುಗಿದ ಸಂಗೀತ ಗೋಷ್ಠಿ ಜರುಗಿತು.
ಗೋಕಾಕದಧನ್ಯಾ ಪಾಟೀಲ ಭರತ ನಾಟ್ಯವುಎಲ್ಲರ ಗಮನಸೆಳೆಯಿತು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.