ಜಾನಕಿ ದಾದಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

ಬೀದರ:ಎ.12: ಬ್ರಹ್ಮಕುಮಾರಿ ಸಂಸ್ಥೆಯ ದಿವಂಗತ ಮುಖ್ಯ ಆಡಳಿತಾ ಧಿಕಾರಿಣಿ ಜಾನಕಿ ದಾದಿ ಅವರ ಅಪಾರ ಸೇವೆಯ ಸ್ಮರಣಾರ್ಥ ಇಂದು ರಾಷ್ಟ್ರ ರಾಜ್ಯಧಾನಿ ನವದೆಹಲಿಯ ಉಪ ರಾಷ್ಟ್ರಪತಿ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕಮಲ ಹಸ್ತದಿಂದ ಐದು ರೂಪಾಯಿ ಮುಖ ಬೆಲೆಯ ಅಂಚೆಚೀಟಿ ಬಿಡುಗಡೆ ಆಗಲಿದೆ.

ಉಪ ರಾಷ್ಟ್ರಪತಿ ಭವನದಲ್ಲಿ ಇಂದು ಸಂಜೆ 4.30 ಗಂಟೆಗೆ ಸಮಾರಂಭ ನಡೆಯಲಿದ್ದು ಪದ್ಮಶ್ರೀ ಡಿಆರ್ ಕಾರ್ತಿಕೇಯನ್, ಕೇಂದ್ರೀಯ ಮಂತ್ರ ರವಿಶಂಕರ್ ಪ್ರಸಾದ್, ಸಹೋದರಿ ಶಿವಾನಿ, ರಾಜಯೋಗಿನಿ ಆಶಾ ನಿರ್ದೇಶಕಿ, ಒ.ಆರ್.ಸಿ. ದಿಲ್ಲಿ. ಸಹ ನಿರ್ದೇಶಕ ಬ್ರಹ್ಮ ಕುಮಾರ್ ಬ್ರೀಜ ಮೋಹನ್, ದಿಲ್ಲಿ. ಕಾರ್ಯಕಾರಣಿ ಸಚಿವರು ಬ್ರಹ್ಮ ಕುಮಾರ್ ಮೃತ್ಯುಂಜಯ, ಮೌಂಟ್ ಅಬು ,ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ನೇರ ಪ್ರಸಾರ ಡಿಡಿ ನ್ಯೂಸ್ ರಾಜ್ಯಸಭಾ ,ಬ್ರಹ್ಮಕುಮಾರಿ ಸಂಸ್ಥೆಯು ಅವೇಕನಿಂಗ್ ಚಾನೆಲ್ ಮೂಲಕ ಆಗಲಿದೆ.