ಜಾಧವ ಗೆಲುವು 51 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿ

ಕಾಳಗಿ. ಮೇ.20. ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಶ್ರೀ ಹನುಮಾನ್ ದೇವಸ್ಥಾನದಲ್ಲಿ ದೇವರಿಗೆ ಹರಕೆ ಹೊತ್ತಿದ್ದ ಜಾಧವ ಅವರ ಅಭಿಮಾನಿಯೊಬ್ಬರು ಇಂದು ಶನಿವಾರ ಹರಕೆ ತಿರಿಸಿ, ಭಕ್ತಿ ಸಮರ್ಪಿಸಿದರು.

ಸಾರ್ವತ್ರಿಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವಿನಾಶ ಜಾಧವ ಅವರು ಗೆಲುವು ಸಾಧಿಸಿದರೆ ಜಾಧವ ಅವರ ಅಭಿಮಾನಿ ಸುನೀಲ ರಾಜಾಪುರ ಅವರು ಶ್ರೀ ಹನುಮಾನ ದೇವರಿಗೆ 51 ತೆಂಗಿನ ಕಾಯಿ ಒಡೆದು ಹರಕೆ ಹೊತ್ತಿದ್ದರು.

ಅದರಂತೆ ಚಿಂಚೋಳಿ ಕ್ಷೇತ್ರದಲ್ಲಿ ಅವಿನಾಶ ಜಾಧವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಹನುಮಾನ ದೇವರಿಗೆ ಹರಕೆ ತೀರಿಸಿ ಸಿಹಿ ತಿನ್ನಿಸಿದರು.

ದೇವಿಂದ್ರ ಕದಂ, ಜಗದೀಶ ಪಾಟೀಲ, ಬಲರಾಮ ವಲ್ಲ್ಯಾಪುರ, ಭೀಮರಾಯ ಮಲಘಣ, ಸುರೇಶ ಸೇಗಂವಕರ, ಕಾಶಿನಾಥ ರಾಜಾಪುರ, ಶರಣಪ್ಪ ಪಾಟೀಲ,ಅಖೀಲ್ ಕದಂ, ರತ್ನಮ್ಮ ಡೊಣ್ಣೂರ ಸೇರಿದಂತೆ ಅನೇಕರಿದ್ದರು .