ಜಾದಳದಿಂದ ಮಾತ್ರ ಅಲ್ಪಸಂಖ್ಯಾತರಿಗೆ ನ್ಯಾಯ

ರಾಯಚೂರು.ನ.12- ಇಂದು ಜಿಲ್ಲಾ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರು ಪ್ರಮುಖರ ಸಭೆಯನ್ನು ನಂದೀಶ್ವರ ದೇವಸ್ಥಾನದ ಹತ್ತಿರ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ ಉಪಯೋಗಿಸಿ ನಂತರ ಸ್ಥಾನಮಾನ ನೀಡದೆ ಮಾಡಿದರು. ಈಗಾಗಲೇ ಆ ಪಕ್ಷದ ಬಷಿರುದ್ದಿನ್ ಬಹಿರಂಗವಾಗಿ ಅನ್ಯಾಯ ಹೇಳಿದ್ದಾರೆ. ಇದನ್ನು ಅಲ್ಲಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಪಕ್ಷದಿಂದ ಮಾತ್ರ ಮುಸ್ಲಿಂ ಸಮಾಜ ಮುಖಂಡರನ್ನು ಗುರುತಿಸುವ ಕೆಲಸವಾಗಿದೆ.
ಎನ್.ಶಿವಶಂಕರ ವಕೀಲರು ಕಾರ್ಯಾಧ್ಯಕ್ಷ ಮಾತನಾಡಿ, ರಾಯಚೂರು ಜಿಲ್ಲೆ ಅಲ್ಪಸಂಖ್ಯಾತರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರಿಗೆ ಹೆಚ್ಚಿನ ರಾಜಕೀಯ ಅವಕಾಶ ಸಿಗಬೇಕಾದರೆ ಅವರು ಒಗ್ಗಟ್ಟಾಗಬೇಕಾಗಿದೆ. ತಮಗೆ ಅನ್ಯಾಯ ಮಾಡುವ ಪಕ್ಷವನ್ನು ಬಿಟ್ಟು, ಜೆಡಿಎಸ್ ಪಕ್ಷ ಸೇರಬೇಕೆಂದು ಕರೆ ನೀಡಿದರು. ಯೂಸೂಫ್ ಖಾನ್ ಮಾತನಾಡಿ, ನಮ್ಮ ಸಮಾಜದವರು ನಗರದಲ್ಲಿ ಅತಿ ಸಂಖ್ಯೆಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ನಾವು ಸಂಘಟನೆಯಾದರೆ ನಮ್ಮ ಸಮಾಜಕ್ಕೆ ಉನ್ನತ ಸಮಾಜ ದೊರೆಯಬಹುದೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಅಧ್ಯಕ್ಷ ಎಂ.ಪವನಕುಮಾರ, ನಗರ ಅಧ್ಯಕ್ಷ ತಿಮ್ಮಾರೆಡ್ಡಿ, ಜಿಲ್ಲಾ ವಕ್ತಾರ ಅಕ್ಷರ ನಾಗುಂಡಿ, ತಾಲ್ಲೂಕು ಅಧ್ಯಕ್ಷ ಬುಡ್ಡನಗೌಡ, ಅಲ್ಪಸಂಖ್ಯಾತ ಮುಖಂಡರಾದ ಎಮ್ಮಿನ್ ಸಾಬ್, ನವಾಜ್, ಅಮ್ಜದ್ ಹುಸನ್, ಖಲೀಲ, ಬಾಬ ಕಲ್ಮಮಲ, ಅಲಂಬಾಬು, ಬಬಲೂ, ಸಾಬೀರ್, ಅಬೂಬಕರ್ ಉಪಸ್ಥಿತರಿದ್ದರು.