
ಧಾರವಾಡ, ಸೆ.16: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನೋರೋಗ ವಿಭಾಗ ಹಾಗೂ ಡಿಮ್ಹಾನ್ಸ್ ಸಂಸ್ಥೆ, ಧಾರವಾಡ ಇವರ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಜಾಥಾ ಕಾರ್ಯಕ್ರಮವನ್ನು ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಾಥಾ ಕಾರ್ಯಕ್ರಮವು ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರುಶುರಾಮ ಎಫ್.ದೊಡ್ಡಮನಿ, ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿಯ ಅಧ್ಯಕ್ಷರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಡಿ.ಆರ್.ರೇಣಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಟೀಲ ಶಶಿ ಇವರು ಜಾಥಾಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಡಿಮ್ಹಾನ್ಸ್ ಸಂಸ್ಥೆಯ ನಿದೇಶಕ ಡಾ.ಮಹೇಶ ದೇಸಾಯಿ ಅವರು ಮಾತನಾಡಿ, ಆತ್ಮಹತ್ಯೆ ತಡೆಗಟ್ಟಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಟೆಲಿಮಾನಸ್ ಸಹಾಯವಾಣಿಯ ಸಹಾಯ ಪಡೆದುಕೊಂಡು ಈ ಆತ್ಮಹತ್ಯೆಯ ವಿಚಾರದಿಂದ ಹೊರಬಂದು ಉತ್ತಮ ಜೀವನ ನಡೆಸಬಹುದು. ಪ್ರತಿ ವ?ರ್À ಆಯೋಜಿಸುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವೆಂದು ಹೇಳುತ್ತಾ, ಮಾನಸಿಕ ಕಾಯಿಲೆಗಳ ಸಮಸ್ಯೆಗೆಳಿಗೆ ಮನೋವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬಾರದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಜಿಲ್ಲಾ ಕು?À್ಠರೋಗ ನಿರ್ಮೂನಲಾಧಿಕಾರಿ ಹಾಗೂ ಜಿಲ್ಲಾ ಕಾರ್ಯಕ್ರಮ ಅನು?Á್ಠಧಿಕಾರಿ ಡಾ.ಶಿಶಧರ ಬಿ.ಕಳಸೂರ ಮಠ, ತಾಲೂಕು ಆರೋಗ್ಯಧಿಕಾರಿ ಡಾ.ತನುಜಾ ಕೆ.ಎನ್. ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಅಯ್ಯನಗೌಡ ಪಾಟೀಲ ಹಾಗೂ ಇತರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ರಾಘವೇಂದ್ರ ನಾಯಕ, ಸಹ ಪ್ರಾಧ್ಯಾಪಕ ಡಾ.ರಂಗನಾಥ ಕುಲಕರ್ಣಿ, ಸಹಾಯಕ ಪ್ರಾಧ್ಯಾಪಕ ಡಾ.ತೇಜಸ್ವಿ ಟಿ.ಪಿ., ಟೆಲಿ ಮಾನಸ್ ಹಿರಿಯ ಸಂದರ್ಶಕ ಮನೋವೈದ್ಯರಾದ ಡಾ.ಸುಧೀಂದ್ರ ಹುದ್ದಾರ ಹಾಗೂ ಸೈಕಿಯಾಟ್ರಿಕ್ ನಸಿರ್ಂಗ್ ವಿಭಾಗದ ಉಪನ್ಯಾಸಕ ಡಾ.ಸುಶೀಲಕುಮಾರ ರೋಣದ್, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಂತರಾಮು ಬಿ.ಜಿ., ಮನೋವೈದ್ಯಕೀಯ ಸಮಾಜಕಾರ್ಯಕರ್ತ ಅಶೋಕ ಕೋರಿ, ಓಬಾ ನಾಯ್ಕ ಪಿ. ಪ್ರಶಾಂತ ಪಾಟೀಲ್, ಶ್ರೀದೇವಿ ಬಿರಾದಾರ, ಆರ್.ಎಮ್.ತಿಮ್ಮಾಪೂರ, ಸೈಕಿಯಾಟ್ರಿಕ್ ನಸಿರ್ಂಗ್ ವಿಭಾಗದ ಪ್ರಶಾಂತ ಬೇವೂರು, ಟಲಿಮಾನಸ್ ತಂಡದವರು ಹಾಗೂ ಇತರ ವಿಭಾಗದ ಸಿಬ್ಬಂದಿಗಳು, ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳು, ಸಮಾಜಕಾರ್ಯ ವಿದ್ಯಾರ್ಥಿಗಳು ಹಾಗೂ ಎಸ್.ವಿ.ವಾಯ.ಎಮ್ ಸಂಸ್ಥೆಯ ಇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜಾಥಾವು ಡಿಮ್ಹಾನ್ಸ್ ಸಂಸ್ಥೆಯ ಆವರಣದಿಂದ ಪ್ರಾರಂಭವಾಗಿ ಪ್ರೆಸೆಂಟೇಶನ್ ಶಾಲೆ ಹಿಂಭಾಗದ ರಸ್ತೆಯ ಮೂಲಕ, ಹಳೆ ಎಸ್.ಪಿ ವೃತ್ತಕ್ಕೆ ತಲುಪಿತು. ಇಲ್ಲಿ ನಸಿಂಗ್ ವಿದ್ಯಾರ್ಥಿಗಳು, ಸಮಾಜಕಾರ್ಯ ಪ್ರಶಿಕ್ಷಾಣಾರ್ಥಿಗಳು ಹಾಗೂ ಇತರ ವಿಭಾಗದ ಸಿಬ್ಬಂದಿಗಳು ಮಾನವ ಸರಪಳಿಯನ್ನು ನಿರ್ಮಿಸಿ, ಆತ್ಮಹತ್ಯೆ ತಡೆಗಟ್ಟುವ ಕುರಿತಾದ ಘೋ?Àಣೆಗಳನ್ನು ಹೇಳಿದರು. ತದನಂತರ ಈ ಜಾಥಾವು ಡಿಮ್ಹಾನ್ಸ್ ಸಂಸ್ಥೆಗೆ ತಲುಪಿತು.