ಜಾತ್ರ ಮಹೋತ್ಸವ ಪ್ರಯುಕ್ತ ರಕ್ತದಾನ ಶಿಬಿರ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.06: ಉತ್ತನೂರು ಗ್ರಾಮದ ಉತ್ತರೆಶ್ವೇವರ ದೇವರ ಹಾಗೂ ಗೋಸಬಾಳ‌ ಗ್ರಾಮದ  ಸಿದ್ದಲಿಂಗಪ್ಪ ದೇವರ ಜಾತ್ರ ಮಹೋತ್ಸವ ಇಂದು ಸಂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರೆ.
 ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಆರಾಧ್ಯ ದೈವ ಶ್ರೀ ಉತ್ತರೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
 ರಥೋತ್ಸವ ಪ್ರಯುಕ್ತವಾಗಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಟಾಸ್ಕ್ ಫೋರ್ಸ್ ಸಮಿತಿ (ರಕ್ತ ಸುರಕ್ಷತೆ) ಬಳ್ಳಾರಿ, ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಬಳ್ಳಾರಿ, ಪ್ರಾಥಮಿಕ  ಆರೋಗ್ಯ ಕೇಂದ್ರ ಕರೂರು ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
 ಉತ್ತನೂರು ಗ್ರಾಮದ ಅಗಸೆ ಮುಂಭಾಗದ  ಅವರಣದಲ್ಲಿ ಊರಿನ ಯುವಕರು,ಹಿರಿಯರು, ಮುಖಂಡರು,ಎಲ್ಲಾ ಸಂಘ ಸಂಸ್ಥೆಗಳು  ಹಾಗೂ ಊರಿನ ಜನರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು.
  ವಿವೇಕಾನಂದ ರಕ್ತ ಬಂಡಾರ ವ್ಯವಸ್ಥಾಪಕರ ಜಿ.ಗೋಪಾಲ ರೆಡ್ಡಿ, , ಸುನಿಲ್ ವೈದ್ಯಧಿಕಾರಿ ಕರೂರು,ರೇಣುಕಾ ಪಿ.ಎಚ್.ಸಿ.ಒ , ಜಿ.ಯಂಕಪ್ಪ , ಸಂತೋಷ ಸಿ.ಎಚ್.ಒ, ಸಿಬ್ಬಂದಿ ವರ್ಗದವರು, ವಿ.ಶಿವನಗೌಡ, ಜೆ.ವೀರನಗೌಡ ಗ್ರಾಮ ಪಂಚಾಯತಿ ಸದಸ್ಯ, ಈಶ್ವರ ಗೌಡ, ಎ. ಎಂ.ಶರಣಯ್ಯ ಸ್ವಾಮಿ,ಶಿವಮೂರ್ತಿ ಕಾರ್ಯದರ್ಶಿ, ಶಿವಪ್ಪ, ಶಿವಕುಮಾರ,ಮಲ್ಲಿಕಾರ್ಜುನ, ಸತೀಶ್, ದೇವೇಂದ್ರ ಗೌಡ, ಜೆಡೆಶ್, ,ಎಂ. ರವಿ, , ಈ.ಬಸವರಾಜ, ವೈ.ಹೊನ್ನೂರಪ್ಪ  ಕೆ.ಚಾಗಪ್ಪ,ಕೆ.ಚಾಗಮೂರ್ತಿ, ಇನ್ನು ಮುಂತಾದವರು ಇದ್ದರು.