ಜಾತ್ರೋತ್ಸವದ ಬೆಳ್ಳಿಹಬ್ಬ

ಹುಬ್ಬಳ್ಳಿ,ಏ4 : ಶ್ರೀ ಕಟ್ಟಿ ಮಂಗಳಾದೇವಿ ದೇವಸ್ಥಾನ ಹಾಗೂ ವೀರಾಂಜನೇಯ ದೇವಸ್ಥಾನ ಸಮಿತಿ ವತಿಯಿಂದ ಶ್ರೀ ಕಟ್ಟಿ ಮಂಗಳಾದೇವಿ ಜಾತ್ರೋತ್ಸವದ ಬೆಳ್ಳಿಹಬ್ಬ ಹಾಗೂ ಶ್ರೀ ವೀರಾಂಜನೇಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇಂದಿನಿಂದ 6 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ವಿ.ವಳಸಂಗ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇಂದು ಸಂಜೆ 5 ಗಂಟೆಗೆ ಲಿಂಗರಾಜ ನಗರದ ಮಹಿಳೆಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರೆಡಾನ್ ಕ್ಯಾನ್ಸರ್ ಸೆಂಟರ್ ನ ಡಾ. ಸಂಜೀವ ಕುಲಕೋಡ, ಪ್ರಸೂತಿ ಮತ್ತು ಸ್ರ್ತೀರೋಗ ತಜ್ಣರಾದ ಡಾ. ಶೀತಲ್ ಕುಲಗೋಡ ಇವರಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಇರಲಿದೆ ಎಂದ ಅವರು ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಅವರಿಂದ ಹಾಸ್ಯ ಸಂಜೆ ನಡೆಯಲಿದೆ ಎಂದರು.
ಏ. 5 ರಂದು ಬೆ. 10 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಹಾಗೂ ವಿವಿಧ ಸ್ಪರ್ಧೆಗಳು ಇರಲಿದ್ದು, ಸಂಜೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಏ. 6 ರಂದು ಶ್ರೀ ಕಟ್ಟಿ ಮಂಗಳಾದೇವಿಗೆ ಮಹಾರುದ್ರಾಭಿಷೇಕ, ಮಹಾಪೂಜೆ,ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯ ಹಾಗೂ ತೊಟ್ಟಿಲೋತ್ಸವ , ಶ್ರೀವೀರಾಂಜನೇಯ ಸ್ವಾಮಿಗೆ ಮಹಾರುದ್ರಾಭಿಷೇಕ್, ತೊಟ್ಟಿಲೋತ್ಸವ ಹಾಗೂ ಮಹಾಮಂಗಳಾರತಿ ಜರುಗಲಿದೆ.
ನಂತರ ಲಿಂಗರಾಜನಗರದ ಬೀದಿಗಳಲ್ಲಿ ಕುಂಭಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಸಂಜೆ ಆಶೀರ್ವಚನ, ಜಾನಪದ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಜಿ.ಝಳಗಿ, ಪೆÇ್ರೀ. ಕೆ.ಎಸ್.ಕೌಜಲಗಿ ಉಪಸ್ಥಿತರಿದ್ದರು.