ಜಾತ್ರೋತ್ಸವಕ್ಕಾಗಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ

??????

ಕಡಬ, ಎ.೨೭- ಕಡಬ ತಾಲೂಕು ಕೊಯಿಲ ಗ್ರಾಮದ ಅತೂರು ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಜಾತ್ರೋತ್ಸವದ ಅಯವ್ಯಯ ಮಂಡನೆ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ ಮಾತನಾಡಿ , ಜಾತ್ರೋತ್ಸವಕ್ಕಾಗಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ದೇವಳದಲ್ಲಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಉತ್ಸವ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ಬೇಂಗದಪಡ್ಪು, ಮೋಹನ್ ದಾಸ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಮುರಳಿಕೃಷ್ಣ ಬಡಿಲ, ಬಾಲಕೃಷ್ಣ ನಾಯ್ಕ, ಸಂಜೀವ ಗೌಡ ಕೊನೆಮಜಲು, ವಿನಯ ಕುಮಾರ್ ರೈ ಕೊಯಿಲ ಪಟ್ಟೆ ಇದ್ದರು.
ಉತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಲ್ಲಡ್ಕ ವರದಿ ಮಂಡಿಸಿದರು. ಕಾರ್ಯದರ್ಶಿ ಸುದೀಶ್ ಪಟ್ಟೆ ಸ್ವಾಗತಿಸಿ,ನಿರೂಪಿಸಿದರು.