ಜಾತ್ರೆ, ಹಬ್ಬಗಳಿಂದ ಐಕ್ಯತಾ ಭಾವ


ಲಕ್ಷ್ಮೇಶ್ವರ,ಜ.17: ಜಾತ್ರೆ,ಹಬ್ಬ-ಹರಿದಿನಗಳು ಪರಸ್ಪರರಲ್ಲಿ ಸ್ನೇಹ, ಬಾಂಧವ್ಯ,ಸೌಹಾರ್ಧತೆ, ನಾವೆಲ್ಲ ಒಂದು ಎಂಬ ಭಾವನೆ ಬೆಸೆಯುತ್ತವೆ. ಜಾತ್ರೆಗಳ ಆಚರಣೆಯ ಸಂದರ್ಭದಲ್ಲಿ ಮಠಮಾನ್ಯಗಳು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಸಮಾಜದ ಶ್ರೇಯೋಭಿವೃದ್ಧಿಗೆ ಮೂಲಾಧಾರವಾಗಿದೆ ಗದುಗಿನ ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಮೀಪದ ಹೂವಿನಶಿಗ್ಲಿಯ ವಿರಕ್ತಮಠದ ಜಾತ್ರಾಮಹೋತ್ಸವ, ಲಿಂ.ನಿರಂಜನ ಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆದ ಧರ್ಮಸಭೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಧರ್ಮ, ಸಂಸ್ಕøತಿ, ಆಚಾರ-ವಿಚಾರ, ಮೌಲ್ಯಗಳನ್ನು ಬಿತ್ತುವ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಮಠಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಮನುಷ್ಯನ ಬದುಕು ಮೌಲ್ಯಯುತ ಮತ್ತು ಸ್ಮರಣೀಯವಾಗಿರಲು ಧರ್ಮದ ತಳಹದಿಯಲ್ಲಿ ಸಾಗಬೇಕು. ಜನಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡ ಬಸವಾದಿ ಶರಣರ, ಸಂತರ, ಮಹಾತ್ಮರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು. ಲಿಂ. ನಿರಂಜನ ಮಹಾಸ್ವಾಮಿಳು ಕೈಗೊಂಡ ಸಮಾಜಮುಖಿ ಕಾರ್ಯ, ಧಾರ್ಮಿಕ ವಿಚಾರಗಳು, ಮಾನವೀಯ ಮೌಲ್ಯಗಳು ದಾರಿದೀಪವಾಗಿವೆ. ಅವರು ತೋರಿದ ಮಾರ್ಗದಲ್ಲಿ ಮಠವು ಅನಾಥ, ಬಡ ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ನೆಹರು ಓಲೇಕಾರ ಶ್ರೀಮಠದ ಕಾರ್ಯವೈಖರಿಯನ್ನು ಪ್ರಶಂಸಿದರು. ಹತ್ತಿಮತ್ತೂರಿನ ಸಂಸ್ಕøತ ಶಿಕ್ಷಕ ಪಿ.ಜಿ. ಆರಾಧ್ಯಮಠ ನುಡಿನಮನ ಗೈದರು. ರಾಯರಾಳು ತಾಂಡಾ ರಾಮಕೃಷ್ಣ ಆಶ್ರಮದ ವಿಷ್ಣು ಸ್ವಾಮೀಜಿ ವಿರಚಿತ “ಭೂಮಿತಾಯಿ ನಾನು ನಿನ್ನೊಳಗೆ” ಗ್ರಂಥ ಬಿಡುಗಡೆ ನೆರವೇರಿತು. ಡಿವೈಎಸ್‍ಪಿ ಶಂಕರ ರಾಗಿ, ಶಂಕರ ಗಡೆಪ್ಪನವರ, ಮಂಜುನಾಥ ನಾವಿ, ರೇವಣಪ್ಪ ಆನೆಪ್ಪನವರ, ಮೋಹನ ಮೆಣಸಿನಕಾಯಿ, ತಿಪ್ಪಣ್ಣ ಸುಬ್ಬಣ್ಣವರ, ಡಾ.ಚಂದ್ರು ಕೆ ಲಮಾಣಿ, ಶೇಖಣ್ಣ ಬೆಂಚಳ್ಳಿ, ಶ್ರೀಕಾಂತ ಬೆಳವಗಿ ಉಪಸ್ಥಿತರಿದ್ದರು. ವಾಸನ ಗ್ರಾಮದ ಪಾರಂಪರಿಕ ವೈಧ್ಯ ಡಾ. ಹನಮಂತ ಮಳಲಿ ಅವರಿಗೆ ವೈಧ್ಯ ನಿರಂಜನ ಪ್ರಶಸ್ತಿ ನೀಡಲಾಯಿತು. ರಾಣೆಬೆನ್ನೂರಿನ ಕು.ದಾನೇಶ್ವರಿ ಸೂರಣಗಿ ಭರತನಾಟ್ಯ ಪ್ರಸ್ತುತ ಪಡಿಸಿದರು. ಭಕ್ತರಿಂದ ಮಠಾಧ್ಯಕ್ಷರಾದ ಶ್ರೀ ಚನ್ನವೀರ ಮಹಾಸ್ವಾಮಿಗಳ ತುಲಾಭಾರ ಸೇವೆ ನೆರವೇರಿತು.