ಜಾತ್ರೆ ರದ್ದಾದರೂ ದರ್ಶನಕ್ಕಾಗಿ ಭಕ್ತಾದಿಗಳ ದಂಡು

ನವಲಗುಂದ ಮಾ 25 : ಕೋವಿಡ್ ಮಹಾಮಾರಿ 2 ನೇ ಅಲೆಯು ದಿನದಿಂದ ದಿನಕ್ಕೆ ಹೆಚ್ವಾಗುತ್ತಲಿದ್ದು, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ತಾಲೂಕಿನ ಯಮನೂರ ಗ್ರಾಮದ ಪ್ರಸಿದ್ಧ ಜಾತ್ರೆಯನ್ನು ರದ್ದಗೊಳಿಸಿ ಆದೇಶ ಹೊರಡಿಸಿ ಕಠಿಣ ನಿಯಮ ಜಾರಿಗೊಳಿಸಿದರೂ ಭಕ್ತಾಧಿಗಳು ವಿಶೇಷ ಪೂಜೆಗೆಂದು ಚಾಂಗದೇವರ ದರ್ಶನಕ್ಕೆ ಬರುತ್ತಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಯಮನೂರಿನ ಚಾಂಗದೇವರ ಜಾತ್ರೆ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತಾಧಿಗಳು ಹರಿದು ಬರುತ್ತಿದ್ದು, ಭಕ್ತಾಧಿಗಳನ್ನು ತಹಶಿಲ್ದಾರ ನವೀನ್ ಹುಲ್ಲೂರ ಅವರು ಸ್ವತಃ ಸ್ಥಳಕ್ಕೆ ಆಗಮಿಸಿ ಭಕ್ತಾಧಿಗಳನ್ನು ಮರಳಿ ಕಳಿಸುವಲ್ಲಿ ಮುಂದಾದರು.
ಬೆಣ್ಣೆ ಹಳ್ಳದಲ್ಲಿ ಭಕ್ತಾಧಿಗಳ ದಂಡು
ಚಾಂಗದೇವರ ದರ್ಶನಕ್ಕೂ ಮುನ್ನ ಇಲ್ಲಿನ ಬೆಣ್ಣೆ ಹಳ್ಳಕ್ಕೆ ಭೇಟಿ ನೀಡಿ ಸ್ನಾನ ಮಾಡುವ ಪ್ರತೀತಿ ಇದೆ. ಆದರೇ ಕೋವಿಡ್ ಹಿನ್ನೆಲೆಯಲ್ಲಿ ಹಳ್ಳ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಕೂಡಾ ಭಕ್ತಾದಿಗಳ ದಂಡು ಸಾಗರೋಪಾದಿಯಲ್ಲಿ ಬರುತ್ತಿದ್ದು, ಭಕ್ತಾಧಿಗಳ ಮನವೊಲಿಸಿ ತಡೆಯಲು ತಾಲೂಕಾಡಳಿತ ಹಾಗೂ ಪೆÇಲೀಸರು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು. ಭಕ್ತಾಧಿಗಳು ಚಾಂಗದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ಭಕ್ತಾಧಿಗಳು ದರ್ಶನವಿಲ್ಲದೇ ನಿರಾಸೆಯಿಂದ ಬಂದ ದಾರಿಗೆ ಸಾಗುವಂತಾಗಿದೆ.