ಜಾತ್ರೆ ಭಜನೆ ಉತ್ಸವಗಳು ನಮ್ಮ ಸಂಸ್ಕೃತಿಯ ಸಂಕೇತ

ವಿಜಯಪುರ.ಡಿ೧೧: ದೇವರ ಜಾತ್ರೆಗಳು ಗ್ರಾಮಗಳ ಒಂದು ಪ್ರಮುಖ ಪರಂಪರೆ ಯಾಗಿದೆ ಎಂದು ಪಟ್ಟಣದ ಮೇಲೂರು ರಸ್ತೆಯ ಬಸವ ಕಲ್ಯಾಣ ಮಠ ಬಸವ ಲೋಕದ ಕಿರಿಯ ಶ್ರೀಗಳಾದ ಶ್ರೀ.ಸದಾಶಿವಸ್ವಾಮಿಗಳು ತಿಳಿಸಿದರು.
ಇವರು ಪಟ್ಟಣದ ಶ್ರೀ ಬಸವಕಲ್ಯಾಣ ಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀಮಠದ ಸಂಪ್ರದಾಯದ ಪರಂಪರೆಯಂತೆ ಜ್ಞಾನ ಸಾನಿಧ್ಯ ವಹಿಸಿದ ಪರಮ ಪೂಜ್ಯ ನಿರಂಜನ ಪ್ರಣವಸ್ವರೂಪ ಡಾ.ಮಹದೇವ ಸ್ವಾಮೀಜಿಗಳ ಮಾರ್ಗದರ್ಶನದಂತೆ ಕಾರ್ತಿಕ ಮಾಸದ ಕಡೆಯ ಸೋಮವಾರ ದಂದು ನಡೆಯುವ ಶಿವ ಪಂಚಾಕ್ಷರಿ ಮಹಾಮಂತ್ರದ ಅಖಂಡ ಭಜನೆ ಮತ್ತು ಕಡಲೆಕಾಯಿ ಪರಿಷೆಯ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ನೀಡುವ ಕಡಲೆ ಕಾಯಿಗಳನ್ನು ಹುರಿದು,ಹದ ಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶ ಗಳಲ್ಲಿ ನಡೆಯುವ ಜಾತ್ರೆ ಹಾಗೂ ಉತ್ಸವಗಳು ಜಾನಪದ ಸಂಸ್ಕೃತಿ ಯ ಮೂಲ ಸಂಕೇತ ಗಳಾಗಿದೆ. ರೈತರು ದೇಶದ ಬೆನ್ನೆಲುಬು ಇಂದು ನಾಗರಿಕತೆ ಮುಂದು ವರಿದಂತೆ ಗ್ರಾಮೀಣ ಪ್ರದೇಶದ ರೈತ ಸೊಗಡಿನ ಜನರ ಪರಂಪರೆ ಬದಲಾಗಿ ಯಾಂತ್ರಿಕ ಬದುಕಿಗೆ ರೈತಾಪಿ ಜನರು ಬದಲಾಗುತ್ತಿದ್ದು ಹೈನುಗಾರಿಕೆ ಮತ್ತು ಕೃಷಿ ಕಾಯಕ ಮಾಡುವುದನ್ನು ಕಡಿಮೆಯಾಗಿದೆ ಈ ಬದಲಾವಣೆಯನ್ನು ನಾವು ಇಂದು ನಮ್ಮ ಸಮಾಜದಲ್ಲಿ ಕಾಣುತ್ತಿದ್ದೇವೆ
ಈ ನಿಟ್ಟಿನಲ್ಲಿ ಅನ್ನದಾತ ತನ್ನ ಪುರಾತನ ಕಾಯಕವಾದ ಕೃಷಿ ಜೀವನ ಮತ್ತು ಜಾನುವಾರುಗಳನ್ನು ಸಾಕಣೆ ಮಾಡುವುದರ ಮೂಲಕ ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಮಠದ ದಾಸೋಹ ಮೇಲ್ವಿಚಾರಕ ಗಣೇಶ್,ಬಿ.ರಾಜಣ್ಣ,ಅಂಕಥಟ್ಟಿ ಮುನಿನಂಜ ರೆಡ್ಡಿ ,ಕಾಲಪ್ಪ, ಎಂ.ಮಹೇಶ್,ನವೀನ್,ನಾಗಣ್ಣ, ಜಯಚಂದ್ರ, ಮಂಡ್ಯ ತಾಲ್ಲೂಕು ಪ್ರಗತಿಪರ ರೈತ ಮುಖಂಡ ತಿಮ್ಮೇಗೌಡ, ಮದೂರು ತಮ್ಮಣ್ಣ, ವಿ.ವೆಂಕಟೇಶ್ ಮೊದಲಾದವರು ಹಾಜರಿದ್ದರು.