ಜಾತ್ರೆ ಉತ್ಸವಗಳಿಂದ ಸಾಮರಸ್ಯ ಬಲ ಹೆಚ್ಚಳ :ಡಿ.ಎಲ್.ಚವ್ಹಾಣ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.28:ಜಾತ್ರಾ ಮಹೋತ್ಸವಗಳು ಕೋಮು ಸೌಹಾರ್ದತೆಯ ಪ್ರತೀಕವಾಗಿವೆ. ಅವು ಸಮಾಜದಲ್ಲಿ ಸಾಮರಸ್ಯದ ಪ್ರತಿಬಿಂಬ ಮೂಡಿಸುತ್ತವೆ. ಜಾತ್ರಾ ಉತ್ಸವಗಳೆಂದರೆ ಸಂತೋಷದ ಹೊನಲು ಹರಿಸುತ್ತವೆ. ಜನತೆಯ ಮನಗಳಲ್ಲಿ ಶ್ರದ್ಧಾ, ಭಕ್ತಿ, ಶಾಂತಿ,ನೆಮ್ಮದಿಯ ಉತ್ಸಾಹ ಇಮ್ಮಡಿಗೊಳಿಸುತ್ತವೆ ಎಂದು ವಿಜಯಪುರ ಜಿಲ್ಲಾ ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಎಲ್.ಚವ್ಹಾಣ ಹೇಳಿದರು.
ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದ ಸವಾಯಿ ವಸ್ತಿ ತೋಟದಲ್ಲಿನ ಹಜರತಪೀರ ದಗಾ9ದ ಶಾಹನೂರವಲಿ ಬಾಬಾ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಜರುಗಿದ ಧಾಮಿ9ಕ ಧರ್ಮಸಭೆ, ಗಣ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಅನುಗ್ರಹದಿಂದ ಜೀವನಪಥ ಪಾವನಗೊಳ್ಳುತ್ತವೆ. ಈ ದಗಾ9ದ ದೇವರು ಒಳಿತದ ಪರಂಪರೆ, ಭಕ್ತಿಯ ಲಯವನ್ನು ಜನಮನದಲ್ಲಿ ತೆರೆದಿದ್ದಾರೆ.ಬಾಬಾರ ದೈವಬಲ ದೊಡ್ಡದಾಗಿದೆ. ಹೀಗಾಗಿ ಪ್ರೇರಣಾದಾಯಕ ದೇವರಾಗಿ ಮಹಿಮೆ ಸಾರುತ್ತಿದ್ದಾರೆ. ಜಾತಿ,ಮಥ,ಪಂಥಗಳ ಮೇಲು,ಕೀಳೆನ್ನದೇ ಸರ್ವಧಮಿ9ಯರು ಎಲ್ಲರೂ ಒಂದೇ ಎಂಬ ವಿಶಾಲ ಮನೋಭಾವದಿಂದ ಜಾತ್ರೆಯಲ್ಲಿ ಸೇರಿ ಭಕ್ತಿಭಾವ, ಹರಕೆ,ತೀರಿಸಿ ಉತ್ಸಾಹದಿಂದ ಸಮರ್ಪಸಿ ಧನ್ಯತೆ ಮೆರೆಯುತ್ತಿರುವುದು ವಿಶೇಷವಾಗಿದೆ ಎಂದರು.
ದೇವರ ಉಪಾಸಕಿ,ಪೂಜಾರಿ ಶಾರದಾಬಾಯಿ ಮೋಹನ ರಾಠೋಡ ಸಾನ್ನಿಧ್ಯ ವಹಿಸಿದ್ದರು.
ಕನ್ನೂರ ಗ್ರಾಪಂ ಅಧ್ಯಕ್ಷ ವಿಠ್ಠಲ ಭಜಂತ್ರಿ ಅಧ್ಯಕ್ಷತೆ ವಹಿಸಿ, ಜಾತ್ರಾ ಮಹೋತ್ಸವ ಅತ್ಯಂತ ಉತ್ಸುಕತೆಯಿಂದ ನಡೆಯಲು ಕನ್ನೂರ ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಸಕಲ ಹಿರಿಯರು,ಭಕ್ತರ ಸಹಾಯ, ಸಹಕಾರ ಶ್ರಮವೇ ಕಾರಣವಾಗಿದೆ. ಧರ್ಮಕಾರ್ಯಗಳು ಮೊಳಗಲಿ ಎಲ್ಲೆಡೆಗೂ ಶಾಂತಿ,ನೆಮ್ಮದಿ ಲಭಿಸಲಿ ಎಂದು ಶುಭ ಹಾರೈಸಿದರು.
ಹೊತಿ9 ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಗೋವಾದ ಸಚೀನ ರಾಠೋಡ, ಮಾಜಿ ಜಿಪಂ ಉಪಾಧ್ಯಕ್ಷ ಕಾಳು ಬೆಳ್ಳುಂಡಗಿ, ತಾಪಂ ಮಾಜಿ ಉಪಾಧ್ಯಕ್ಷ ಇಂಚಗೇರಿಯ ಬಾಬು ಚವ್ಹಾಣ, ಗ್ರಾಪಂ ಸದಸ್ಯ ದಲಿಸಾಬಾ ಹಿಪ್ಪರಗಿ, ಸಫಿಕ ಸಲೀಂ ಮುಜಾವರ್, ಮುತ್ತಣ್ಣಗೌಡ ಪಾಟೀಲ, ವಿಜು ರಾಠೋಡ, ಪೊಲೀಸ್ ಇಲಾಖೆಯ ಪುನೀತ್ ಚವ್ಹಾಣ, ಕೊಳರಗಿ ಗ್ರಾಪಂ ಸದಸ್ಯ ಸವಾಯಿ ರಾಠೋಡ, ರಮೇಶಗೌಡ ಬಿರಾದಾರ, ಅರಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಸೀತಾರಾಮ ಚವ್ಹಾಣ, ಕನ್ನೂರ ಗ್ರಾಪಂ ಮಾಜಿ ಸದಸ್ಯ ಮಶಾಖಸಾಬ ಮಂದಾರೆ, ಆಮಿ9ಯ ಸಂಜು ಚವ್ಹಾಣ, ಸಂತೋಷ ಚವ್ಹಾಣ, ಪ್ರಿಯಾಂಕಾ ಚವ್ಹಾಣ, ಸಂಜಯಗಾಂಧಿ ಚವ್ಹಾಣ, ಅಕ್ಷತಾ ಚವ್ಹಾಣ, ಪುನೀತ ಚವ್ಹಾಣ, ಸಂಜನಾ ರಾಠೋಡ, ಸಂತೋಷ ಚವ್ಹಾಣ, ಪಾಯಲ ಚವ್ಹಾಣ, ಸಾನಿಯಾ ರಾಠೋಡ, ಶಾಶ್ವತ ರಾಠೋಡ ಮೊದಲಾದವರು ಜ್ಯೋತಿ ಬೆಳಗಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇಂಚಗೇರಿ ಗ್ರಾಪಂ ಸದಸ್ಯ ಅಪ್ಪುಬಾಪು ಚವ್ಹಾಣ, ಕೂಡಗಿ ತಾಂಡೆಯ ರೂಪಸಿಂಗ ರಾಠೋಡ, ಚಾಂದು ರಾಠೋಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ವ್ಯವಸ್ಥಾಪಕ ಮಂಡಳಿಯಿಂದ ವಿವಿಧ ಗ್ರಾಮದ ಗ್ರಾಮಸ್ಥರನ್ನು, ಗಣ್ಯರನ್ನು, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ರಾತ್ರಿಯಿಡೀ ಲಂಬಾಣಿ ಭಜನಾ ಕೀರ್ತನೆಗಳು ಸುಶ್ರಾವ್ಯವಾಗಿ ಮೊಳಗಿದವು. ಇಂಚಗೇರಿಯ ರಾಮಗೊಂಡ ವಡಿಯರ ಸ್ವಾಗತಿಸಿ,ನಿರೂಪಿಸಿ ವಂದಿಸಿದರು.