ಜಾತ್ರೆಯಲ್ಲಿ ಮನ ರಂಜಿಸಿದ ಸಂಗೀತ

ಬೀದರ್:ಫೆ.3: ಔರಾದ್ ತಾಲ್ಲೂಕಿನ ಧೂಪತಮಹಾಗಾಂವ್ ಗ್ರಾಮದ ಸದ್ಗುರು ಗಣೇಶ್ವರ ಅವಧೂತರ ಮಠದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಸಂಗೀತ ಕಾರ್ಯಕ್ರಮ ಸಾರ್ವಜನಿಕರ ಮನ ರಂಜಿಸಿತು.
ಕಲಾವಿದರಾದ ಪುಂಡಲೀಕರಾವ್ ಪಾಟೀಲ ಗುಮ್ಮಾ, ಸಪ್ತಸ್ವರ ಕಲಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ, ಸಂಜುಕುಮಾರ ಸ್ವಾಮಿ ಉಜನಿ, ಸಂಜು ಸ್ವಾಮಿ ಕಂದಗೂಳ, ಬೇಬಾವತಿ ನಾಗರಾಳ, ಭೋಜರೆಡ್ಡಿ ಬರ್ದಾಪುರ, ಸಂಗೀತ ವಿದ್ಯಾರ್ಥಿಗಳಾದ ಮಾಣಿಕೇಶ್ವರಿ, ಅಕ್ಷತಾ, ಅಂಬಿಕಾ, ಕಿರಣ ನಾವದಗೆರೆ ಮೊದಲಾದವರು ಗಾಯನ ಪ್ರಸ್ತುತಪಡಿಸಿದರು.
ಗ್ರಾಮದ ಯೆಂಕಾರೆಡ್ಡಿ, ಶ್ರೀನಿವಾಸ ಜೊನ್ನಿಕೇರೆ, ನೆಹರೂ ಬಿರಾದಾರ, ಸಂಜು ಪಾಟೀಲ, ಓಂಕಾರ ಪಾಟೀಲ, ಪ್ರಭು ಪವಾರ್, ಸಂಗಮೇಶ ಪಾಟೀಲ ಮೊದಲಾದವರು ಇದ್ದರು.