ಜಾತ್ರೆಯಲ್ಲಿ ಮನ ತಣಿಸಿದ ಭಕ್ತಿಯ ರಸಮಂಜರಿ

ಕೆಂಭಾವಿ :ಜ.10: ಯಾಳಗಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮz ಸಾನಿಧ್ಯವನ್ನು ಸತೀಶ ಭಟ್ ಜೋಶಿ ವಹಿಸಿದ್ದರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಜಾತ್ರೆಯೆಂಬುದು ಜನರ ಭಕ್ತಿ ಭಾವದ ಸಂಕೇತವಾಗಿದೆ ಇದರಿಂದ ಭಕ್ತಿಯಲ್ಲಿ ಮಿಂದು ಬರುವ ಭಕ್ತಸಾಗರಕ್ಕೆ ತನು ಮನಗಳನ್ನು ಸಂತೈಸಲು ಸಂಗೀತವೊಂದೆ ಉತ್ತಮ ಔಷದವಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿಯೂ ಉತ್ತಮ ಪ್ರತಿಭಾನ್ವಿತ ಸಂಗೀತಗಾರರಿದ್ದಾರೆ ಶರಣು ಕಂಭಾರ ,ಶಾಂತು ಬಡಿಗೇರ ,ಅಂಬರೀಶ ಜಾದವ ,ಹಾಗೂ ಇನ್ನೂಳಿದ ಕಲಾವಿದರೆಲ್ಲರೂ ಸ್ವಗ್ರಾಮದಲ್ಲಿ ತಮ್ಮ ಪ್ರತಿಭೆಯನ್ನು ತೋರುವ ಮೂಲಕ ತಾಯಿ ಶ್ರೀ ದೇವಿಯ ಮಾತೆಯ ಅನುಗ್ರಹಕ್ಕೆ ಬರುವ ಭಕ್ತರಿಗೆ ಹಾಗೂ ಗ್ರಾಮದ ಜನರ ಮನಕ್ಕೆ ಸಂಗೀತ ಮುದ ನೀಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಶಂಕರಗೌಡ ಪೋ ಪಾಟೀಲ, ರಾಮನಗೌಡ ವಂದಗನೂರ, ಸಿದ್ದನಗೌಡ ಕಾರನೂರ , ಅಮೀನರೆಡ್ಡಿ ಹೊಸಮನಿ ಶ್ರೀನಿವಾಸರೆಡ್ಡಿ ಮಾಲಿಪಾಟೀಲ,ಸಿದ್ದನಗೌಡ ಹೊಸಮನಿ,ಬಸಯ್ಯಸ್ವಾಮಿಗಳು , ಚಂದಪ್ಪ ಬೆಕಿನಾಳ,ಬಸವರಾಜ ಹೆಳವರ ಹಾಗೂ ಮುಖಂಡರು ಭಾಗವಹಿಸಿದರು ನಿರೂಪಣೆ ಶಿವಶರಣಪ್ಪ ಶಿರೂರ ಹಾಗೂ ಯಮುನೇಶ ಭಜಂತ್ರಿ ನೇರವೇರಿಸಿಕೊಟ್ಟರು

Spread the love