ಜಾತ್ರೆಗೆ ಕೊರೋನಾ ಛಾಯೆ: ಡಿಸಿ ಸ್ಪಷ್ಟ ಆದೇಶಕ್ಕಾಗಿ ಎಲ್ಲರ ಚಿತ್ತ

ನಂಜನಗೂಡು:ಮಾ:15: ಇದೇ ತಿಂಗಳು 26ರಂದು ನಡೆಯಲಿರುವ ಪಂಚ ಮಹಾರಥೋತ್ಸವಕ್ಕೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ಕ್ರಮವಹಿಸಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಇದು ಒಂದು ಕಡೆಯಾದರೆ ಸರ್ಕಾರ ಹೊಸ ಸರತ್ತು ವಿಧಿಸಿ ಸುತ್ತೋಲೆ ಹೊರಡಿಸಿದೆ ಆದ್ದರಿಂದ ಈ ಬಾರಿಯೂ ದೊಡ್ಡ ಜಾತ್ರೆ ನಡೆಯುವುದು ಅನುಮಾನವಾಗಿದೆ.
ಅಧಿಕಾರಿಗಳು ಜಿಲ್ಲಾಧಿಕಾರಿಗಳ ತೀರ್ಮಾನ ದತ್ತ ಕಾಯುತಿದ್ದಾರೆ ಆದರೂ ದೊಡ್ಡ ಜಾತ್ರೆಗೆ ಸಂಬಂಧಪಟ್ಟಂತೆ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿವೆ
ಅಂತ ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಎರಡನೇ ಅಂತ ಕೊರೋನೋ ಪ್ರಮಾಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತೋಲೆ ಬಂದಿದೆ ಧಾರ್ಮಿಕ ಆಚರಣೆಗಳಲ್ಲಿ 500 ಮಂದಿ ಭಾಗವಹಿಸಬೇಕೆಂದು ಸುತ್ತೋಲೆ ಬಂದಿರುವುದರಿಂದ ಇದರ ಜೊತೆಗೆ ಅನೇಕ ಶರತ್ತುಗಳು ಆದೇಶ ಪತ್ರದಲ್ಲಿ ಇದೆ
ದೇವಸ್ಥಾನದ ಈ ಓ ರವೀಂದ್ರ ಮಾತನಾಡಿ ದೊಡ್ಡ ಜಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವುದರಿಂದ ಶಾಸಕರು ದೊಡ್ಡ ಜಾತ್ರೆಯ ವಿಶೇಷ ಸಭೆ ಕರೆದು ಅನೇಕ ಸೂಚನೆಗಳನ್ನು ನೀಡಿದರು ಅದರಂತೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಆದರೂ ಜಿಲ್ಲಾಧಿಕಾರಿಗಳ ಸ್ವಷ್ಟ ಆದೇಶಕ್ಕಾಗಿ ಪತ್ರ ಬರೆದಿದ್ದೇವೆ ಈ ಪತ್ರ ಆದೇಶ ಬರುವವರೆಗೂ ಜಾತ್ರೆ ಸಿದ್ಧತೆ ನಡೆಯುತ್ತಿರುತ್ತದೆ ಕಳೆದ ವರ್ಷ ದೊಡ್ಡ ಜಾತ್ರೆ ನಡೆಯದ ಭಕ್ತಾದಿಗಳು ಬೇಸರ ಉಂಟಾಗಿತ್ತು ಈ ಬಾರಿಯಾದರೂ ದೊಡ್ಡ ಜಾತ್ರೆ ನಡೆಯುತ್ತದೆ ಎಂದು ಎಲ್ಲರ ಮನದಲ್ಲಿ ಆಸೆ ಉಂಟಾಗಿತ್ತು ಆದರೆ ರಾಜ್ಯಗಳಲ್ಲಿ ಎರಡನೆಯ ಹಂತದ ಕೊರೋನ ಹೆಚ್ಚುತ್ತಿರುವುದರಿಂದ ಸರ್ಕಾರ ಹೊಸ ಶರತ್ತುಗಳನ್ನು ಒಳಗೊಂಡಂತೆ ಸುತ್ತೋಲೆಯನ್ನು ಕಚೇರಿಯ ಕಳಿಸುವುದರಿಂದ ಇದಕ್ಕೆ ಅನ್ವಯಿಸಿದರೆ ಮಾತನಾಡಿದರೆ ದೊಡ್ಡ ಜಾತ್ರೆ ನಡೆಯುವುದು ಅನುಮಾನ ವಾಗಿದೆ ಎಂದರು ಆದರೂ ದೇವಸ್ಥಾನದ ಕಡೆಯಿಂದ ಜಾತ್ರೆಯ ಬಗ್ಗೆ ಪತ್ರ ಬರೆದಿದ್ದೇವೆ ಜಿಲ್ಲಾಧಿಕಾರಿಗಳು ಸ್ಪಷ್ಟ ಆದೇಶಕ್ಕಾಗಿ ಕಾಯುತ್ತಿದ್ದೇವೆ ಒಟ್ಟಿನಲ್ಲಿ ಈ ಸುತ್ತೋಲೆಯಿಂದ ಜಾತ್ರೆ ನಡೆಯುವುದು ಅನುಮಾನವಾಗಿದೆ ನಡೆಯದಿದ್ದರೆ ಎಲ್ಲರಿಗೂ ನಿರಾಸೆಯಾಗಲಿದೆ