ಜಾತ್ರೆಗೂ ತಟ್ಟಿದ ಬಿಸಿ : ಮಾಸ್ಕ್ ಹಾಕದವರಿಗೆ ದಂಡ – ಪ್ರಕಾಶ್ ಡಂಬಳ

ಲಿಂಗಸುಗೂರು.ಮಾ.೨೮- ಅಮರೇಶ್ವರ ಜಾತ್ರೆಯಲ್ಲಿ ಯಾತ್ರಿಕರು ಬಂದು ಅಮರೇಶ್ವರ ದೇವರ ದರ್ಶನ ಮಾಡಿದ ಭಕ್ತರು
ಅಮರೇಶ್ವರ ಜಾತ್ರೆಯಲ್ಲಿ ಯಾತ್ರಿಕರು ಕೋವಿಡ್ ೧೯ ನಿಯಮ ಪ್ರಕಾರ ಪ್ರತಿಯೊಂದು ಹಂತದಲ್ಲೂ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಪ್ರಕಾಶ್ ಡಂಬಳ ತಿಳಿಸಿದರು.
ಮಾಸ್ಕ ಇಲ್ಲದವರಿಗೆ ಪ್ರತಿಯೊಬ್ಬ ವ್ಯಕ್ತಿಗೆ ೧೦೦ ದಂಡ ವಿಧಿಸಿದರು ಹಾಗೂ ಅಮರೇಶ್ವರ ಜಾತ್ರೆಯಲ್ಲಿ ತಾಲೂಕು ಆಡಳಿತ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದರು. ಕೋವಿಡ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.
ಕಳೇಗಟ್ಟಿದ ಅಮರೇಶ್ವರ ಜಾತ್ರೆ ಪ್ರತಿ ವರ್ಷ ದಂತೆ ಈ ವರ್ಷ ಜಾತ್ರೆ ಸಾರ್ವಜನಿಕರಿಗೆ ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಸಂಪೂರ್ಣವಾಗಿ ಸಾರ್ವಜನಿಕರಿಗೆ ಜಾತ್ರೆಗೂ ತಟ್ಟಿದ ದಂಡದ ಬಿಸಿ ತಟ್ಟಿದೆ.
ಪೋಲೀಸರು ಸುಡು ಬಿಸಿಲಿನಲ್ಲಿ ನಿಂತು ದಂಡ ವಸೂಲ ಮಾಡಿ ಜಾತ್ರೆಗೆ ಮಾಸ್ಕ್ ಧರಿಸಿ ಜೀವ ಉಳಿಸಿ ಎಂದು ಪ್ರಾಣರಕ್ಷಣೆ ಮಾಡಿಕೊಳ್ಳಿಯೆಂದು ಸಾರ್ವಜನಿಕರಿಗೆ ಮಾಹಿತಿ ಪೋಲೀಸರು ತಿಳಿಸಿದರು.