ಜಾತ್ರೆಗಳು ಮನುಷ್ಯನ ಕಲಾತ್ಮಕ ಬದುಕಿಗೆ ಪೂರಕ :ಹಾರಕೂಡ ಶ್ರೀ

Oplus_131072

ಬಸವಕಲ್ಯಾಣ:ಮೇ:19: ಜಾತ್ರೆಗಳು, ಉತ್ಸವಗಳು, ಹಬ್ಬ ಹರಿದಿನಗಳು ಮನುಷ್ಯನ ಕಲಾತ್ಮಕ ಬದುಕಿಗೆ ಪೂರಕವಾಗಿದ್ದು, ಅಧ್ಯಾತ್ಮಿಕ ಹಂದರ ರೂಪಿಸಿ ಕೊಡುತ್ತವೆ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಮೈಸಲಗಾ ಗ್ರಾಮದ ಶ್ರೀ ಲಕ್ಷ್ಮಿ ಮಾತೆಯ 12ನೇ ಜಾತ್ರಾ ಮಹೋತ್ಸವದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇಡೀ ವರ್ಷ ನೋವು ನಲಿವುಗಳ ಹೊಯ್ದಟದಲ್ಲಿ ಬಳಲಿದ ಮನಸ್ಸಿಗೆ ಧರ್ಮಕಾರ್ಯಗಳು ನೆಮ್ಮದಿಯ ಸಿಂಚನ ನೀಡುತ್ತವೆ.
ಲಕ್ಷ್ಮಿ ಮಾತೆಯ ದೇವಸ್ಥಾನ ಚೈತನ್ಯದ ಕೇಂದ್ರವಾಗಿದ್ದು, ದೇವಿಯ ಆರಾಧನೆ ಹಾಗೂ ದುಡಿಮೆಯಿಂದ ಬದುಕಿಗೆ ಹೊಸ ಹೊಳಪು ಬರುತ್ತದೆ.
ಸತ್ಯ ಶುದ್ಧ ಶ್ರಮದ ಬೆವರಿನ ಹನಿಯಲ್ಲಿ ಲಕ್ಷ್ಮಿ ಪ್ರಸನ್ನ ವಾಗುಗಳು ಎಂಬುದು ಸಾರ್ವಕಾಲಿಕ ಸತ್ಯದ ಮಾತಾಗಿದೆ.
ಪ್ರತಿ ಧರ್ಮಚರಣೆಗಳು ಬದುಕನ್ನು ಕುರಿತು ಮಾತಾಡುವಂತಿರಬೇಕು, ನೈಜ ನೆಲೆ ಗಟ್ಟಿಗೊಳಿಸುವಂತಿರಬೇಕು.
ಲಕ್ಷ್ಮಿ ಮಾತೆಯ ದಿವ್ಯ ಕೃಪೆಗೆ ಪಾತ್ರರಾಗಬೇಕಾದರೆ, ಪರಿಶ್ರಮ ಬದುಕಿನ ಮೂಲ ಮಂತ್ರ ವಾಗಬೇಕು.
ಮೈಸಲಗಾ ಗ್ರಾಮ ಐಶ್ವರ್ಯ ಧಾಮವಾಗಿ ಸರ್ವರು ಸೌಖ್ಯದಿಂದ ಬಾಳಲಿ ಎಂದು ಶುಭ ಹಾರೈಸಿದರು.
ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಖೇಳಗಿ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಳಖೇಡ ಮಾತನಾಡಿದರು.
ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು ಬಬಲಾದ,
ಜಗನ್ನಾಥ ದೊವೆ, ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಕುಮಾರ ಶಾಸ್ತ್ರಿಗಳು, ಶಿವಶರಣಯ್ಯ ಕಂಬಳಿಮಠ, ಗುರುಲಿಂಗಪ್ಪ ಸೈದಾಪುರೆ, ರೇವಣಸಿದ್ದಪ್ಪ ಅಟ್ಟೂರ, ಗುಂಡೇರಾವ ಬಿರಾದಾರ ಭೀಮಶಂಕರ ಮಾಲಿ ಪಾಟೀಲ, ರೇಣುಕಾ ನೀಲೆ, ಶಾಂತಾಬಾಯಿ ರಾಠೋಡ, ಸುಧಾಮ ಜಾಧವ, ಸಿದ್ದಾರೂಡ ಬಿರಾದಾರ, ಬಸವರಾಜ ಕಲಶೆಟ್ಟಿ ಉಪಸ್ಥಿತರಿದ್ದರು.
ಗುಂಡಪ್ಪ ಪಾಟೀಲ ಯಳವಂತಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಲ್ಲಿನಾಥ ಗವಾಯಿ ಹಿತ್ತಲ ಶಿರೂರ ಪ್ರಾರ್ಥನ ಗೀತೆ ನಡೆಸಿಕೊಟ್ಟರು.
ಚಿತ್ರ : ಹಾರಕೂಡದ ಪರಮಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಧರ್ಮಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಳಖೇಡ, ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಕುಮಾರ ಶಾಸ್ತ್ರಿಗಳು, ಶಿವಶರಣಯ್ಯ ಕಂಬಳಿಮಠ, ಗುರುಲಿಂಗಪ್ಪ ಸೈದಾಪುರೆ, ರೇವಣಸಿದ್ದಪ್ಪ ಅಟ್ಟೂರ, ಗುಂಡೇರಾವ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.