
ಸೈದಾಪುರ:ಎ.7:ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತಾದಿಗಳು ಒಂದಡೆ ಸೇರಿ ದೈವಿ ಶಕ್ತಿಯನ್ನು ಕಂಡು ಕೊಳ್ಳುವ ಈ ಕ್ಷಣ ಅತಿ ಮಹತ್ವದ್ದಾಗಿದೆ ಎಂದು ಅಬ್ಬೆತುಮಕೂರ ಸಿದ್ದಸಂಸ್ಥಾನ ಮಠದ ಡಾ.ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಸಮೀಪದ ಕ್ಯಾತ್ನಾಳ ಗ್ರಾಮದ ಮಾರೆಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಜನ್ಮ ಕೊಟ್ಟ ತಾಯಿ, ಜನ್ಮ ಕೊಟ್ಟ ಭೂಮಿ ಸಾವಿರಪಟ್ಟು ಮೇಲು. ಈ ನೆಲದ ಸಂಸ್ಕøತಿಯನ್ನು ಉಳಿಸಿ ಬೆಳಸುವ ಕಾರ್ಯ ಪ್ರತಿಯೊಬ್ಬರದು. ಎಲ್ಲ ಜಾತಿ ಜನಾಂಗದವರಿಗೆ ಅತ್ಯಂತ ಭಕ್ತಿ ಪ್ರೀಯವಾದ ಹಾಗೂ ಗ್ರಾಮಗಳ ರಕ್ಷಣೆ ಮಾಡುವ ದೇವರುಗಳೆಂದರೆ ಮಾರೆಮ್ಮ ದೇವಿ ಮತ್ತು ಅಂಜನೇಯ್ಯ ಸ್ವಾಮಿ. ಶ್ರೀ ಮಾರೇಮ್ಮ ದೇವಿ ದೇವರು ನಿಮಗೆ ಉತ್ತಮ ಮಳೆ ಬೆಳೆಯೊಂದಿಗೆ ಸಮೃದ್ದ ಜೀವನ ನೀಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಮ್.ಎಮ್.ಪೋಲಿಸ್ ಪಾಟೀಲ್ ನ್ಯಾಯವಾದಿ ಕಲಬುರಗಿ, ಬಸವರಾಜ ಪಾಟೀಲ್, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಪಾಟೀಲ್, ಮಾಜಿ ಜಿ.ಪಂ ಸದಸ್ಯೆ ಶಶಿಕಲಾ ಭೀಮಣ್ಣಗೌಡ ಕ್ಯಾತ್ನಾಳ್, ಗ್ರಾ.ಪಂ ಸದಸ್ಯ ಪರ್ವತರೆಡ್ಡಿ, ಬನ್ನಪ್ಪ, ನೀಲಕಂಠಗೌಡ, ಬೂದಯ್ಯಸ್ವಾಮಿ, ನಾಗರೆಡ್ಡಿಗೌಡ, ಬಸವರಾಜ ಶಾಸ್ತ್ರಿ, ಬಸವಲಿಂಗಪ್ಪ ವಡಿಗೇರಕರ್, ಮಲ್ಲಿಕಾರ್ಜುನ ಅರಿಕೇರಕರ್ ಸೇರಿದಂತೆ ಗ್ರಾಮಸ್ಥರು, ಸುತ್ತಲಿನ ಭಕ್ತಾದಿಗಳು ಉಪಸ್ಥಿತರಿದ್ದರು.
ನೂರಾರೂ ಭಕ್ತರ ಮಧ್ಯೆ ಸಾಗಿದ ಅದ್ಧೂರಿ ರಥೋತ್ಸವ: ಗ್ರಾಮದ ಆರಾಧ್ಯ ಮಾತೆ ಮಾರೇಮ್ಮ ಜಾತ್ರೆ ಮಹೋತ್ಸವವು ನೂರಾರೂ ಭಕ್ತರ ಮಧ್ಯೆ ಸಡಗರ ಸಂಭ್ರಮದೊಂದಿಗೆ ಬುಧವಾರ ಸಂಜೆ ಅದ್ಧೂರಿಯಾಗಿ ನೆರವೇರಿತು. ಇದಕ್ಕೂ ಮೊದಲು ಅಂಭಾಮಹೇಶ್ವರಿಯ ಮೂರ್ತಿಯನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ರಥದ ಹಗ್ಗವನ್ನಿಡಿದ ಭಕ್ತರು ಜೈ ಘೋಷಗಳನ್ನು ಮೊಳಗಿಸಿ ಎಳೆದರು. ದೇವಸ್ಥಾನದಿಂದ ಹೊರಟ ರಥೋತ್ಸವವವು ದೇವರ ಪಾದಗಟ್ಟೆಯನ್ನು ತಲುಪಿ ವಿಶೇಷ ಪೂಜೆ ಸಲ್ಲಿಸಿ ಹಿಂತಿರಿಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಯುವ ಸಮೂಹವು ರಥೋತ್ಸವಯುದ್ಧಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಮಹಿಳೆಯರು ಕಳಸವನ್ನು ಹಿಡಿದು ರಥದಯಿಂದೆ ಹೆಜ್ಜೆ ಹಾಕಿದರು. ರಥವನ್ನು ಪುಷ್ಪ ಮಾಲೆಗಳಿಂದ ಸಿಂಗರಿಸಲಾಗಿತ್ತು. ಸೈದಾಪುರ, ಗುಡೂರ, ಕೂಂಡಪುರ, ಸಂಗ್ವಾರ, ಮುನಗಲ್ ಯಾದಗಿರಿ ನಗರ ಸೇರಿದಂತೆ ನಾನಾ ಗ್ರಾಮಗಳ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾದರು.