ಜಾತ್ರೆಗಳು ಜನರನ್ನು ಒಂದುಗೂಡಿಸಿ ಪ್ರೀತಿ ಆತ್ಮೀಯತೆ ಬೆಳೆಸುತ್ತದೆ :ಗುರುಬಸವಪಟ್ಟದ್ದೇವರು

ಭಾಲ್ಕಿ :ಜ.17:ತಾಲೂಕಿನ ಗಡಿಭಾಗದ ಕಾಸರತುಗಾವ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಿರೇಮಠ ಸಂಸ್ಥಾನ ಪಿಠಾಧಿಪತಿ ಗುರುಬಸವ ಪಟ್ಟದ್ದೇವರು ಪ್ರವಚನ ಮೂಲಕ ಆಶೀರ್ವಚನ ನೀಡಿದರು.
ಜಾತ್ರೆಗಳು, ದೊಡ್ಡ ದೊಡ್ಡ ಆಚರಣೆಗಳು ನಡೆಸುವದರಿಂದ ಜನರನ್ನು ಒಂದುಗುಡಿಸಿ, ಪ್ರೀತಿ ಆತ್ಮೀಯತೆ, ಸಹೋದರ ಮನೋಭಾವ ಬೆಳಿಸುತ್ತದೆ. ಹಿರಿಯರು ಹಾಕಿಕೊಟ್ಟ ಸನ್ಮಾರ್ಗದತ್ತ ನಾವು ನಡೆಯಬೇಕು.
ಬಸವಣ್ಣನವರು ವಚನ ಮೂಲಕ ನಮ್ಮ ಅಂತರಂಗದಲಿರುವ ಕೆಟ್ಟ ಅಂಶವನ್ನು ಹೊರದೂಡಿಸಬೇಕು ಎಂದು ತಿಳಿಸಿದ್ದಾರೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ ಅನ್ಯರಿಗೆ ಅಸೆಯ ಪಡಬೇಡ ತನ್ನ ಬಣ್ಣಿಸಲು ಬೇಡ ಇದಿರು ಹಳೆಯಲು ಬೇಡ ಇದೆ ಅಂತರಂಗ ಸುದ್ದಿ ಇದೇ ಬಹಿರಂಗ ಸುದ್ದಿ
ನಮ್ಮ ಅಂತರಂಗವೂ, ಬಹಿರಂಗವು ಒಂದೆಯಾಗಿರಬೇಕು. ಮನಸ್ಸು ಶುದ್ಧವಾಗಿರಬೇಕು. ಕ್ಷಣಿಕ ಸುಖಕ್ಕಾಗಿ ಕೆಟ್ಟ ಚಟಗಳಿಗೆ ಬಲಿ ಆಗಬಾರದು,ದಯವೇ ಧರ್ಮದ ಮೂಲವಯ್ಯಾ, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ, ಮನುಷ್ಯರಲ್ಲಿ ದಯ ಮುಖ್ಯ, ದಯ ಇದ್ದರೆ ಧರ್ಮ,ಕಾಯಕವೇ ಕೈಲಾಸ ಪ್ರತಿಯೊಬ್ಬರೂ ದುಡಿದು ತಿನ್ನಬೇಕು,ಎಂದು ಬಸವಣ್ಣನವರು ಸಾರಿದಾರೆ ಎಂದು ಆಶೀರ್ವಚನದಲ್ಲಿ ನುಡಿದರು.