ಜಾತ್ರೆಗಳಿಂದ ಸಂಭಂಧ ಗಟ್ಟಿ

ಚಿಟಗುಪ್ಪ,ಫೆ.12-ಜಾತ್ರೆ ಹಾಗೂ ಉತ್ಸವಗಳು ನಮ್ಮ ಭವ್ಯ ಪರಂಪರೆಯ ಪ್ರತೀಕ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜರುಗುವ ಜಾತ್ರೆಗಳು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನುಡಿದರು.
ತಾಲೂಕಿನ ಬನ್ನಳ್ಳಿ ಗ್ರಾಮದಲ್ಲಿ ಜರುಗಿದ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ಚಂದ್ರಶೇಖರ್ ಪಾಟೀಲ್, ವೆಂಕಟರೆಡ್ಡಿ ಸೇರಿಕಾರ್, ರಾಜರೆಡ್ಡಿ ಚೋಲಾ,ಬಲರಾಮ್ ರೆಡ್ಡಿ ಚೋಲಾ, ಬನ್ನಪ್ಪ ಜಮಾದಾರ್,ಅಜಿತ್ ಪಾಟೀಲ್, ಅರುಣ್ ಬಾವಗಿ, ಮಂಜುನಾಥ್ ಸಲಗಾರ್,ಗೋಪಾಲ್ ರೆಡ್ಡಿ ಚಾವ್ಲಾಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.