ಜಾತ್ರಾ ಹಿನ್ನಲೆ ಬ್ರಹ್ಮರಥ ‘ರಥಬೀದಿಗೆ’

ಪುತ್ತೂರು, ಮಾ.೧೬- ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಬ್ರಹ್ಮರಥೋತ್ಸವವು ಪೂರ್ವಶಿಷ್ಠ ಸಂಪ್ರದಾಯದಂತೆ ತುಳು ಪಂಚಾಂಗದ ನಲ್ಕುರಿಯಂತೆ ಏ. ೧೭ರಂದು ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ಬ್ರಹ್ಮರಥವನ್ನು ಬ್ರಹ್ಮರಥ ಮಂದಿರದಿಂದ ಹೊರ ತಂದು ದೇಗುಲದ ರಥಬೀದಿಯಲ್ಲಿ ಪೂರ್ವಾಭಿಮುಖವಾಗಿ ಇರಿಸಲಾಯಿತು.
ದೇವಾಲಯದ ಅರ್ಚಕ ವೇ.ಮೂ. ವಸಂತ ಕೃಷ್ಣ ಕೆದಿಲಾಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಬಳಿಕ ದೇವಾಲಯದ ವಾಸ್ತು ಇಂಜಿನಿಯರ್ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಲಾಯಿತು.
ಬ್ರಹ್ಮರಥವನ್ನು ಹೊರ ತರುವ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಶೇಖರನಾರಾವಿ, ಬಿ. ಐತ್ತಪ್ಪ ನಾಯ್ಕ್, ಬಿ.ಕೆ. ವೀಣಾ, ರಾಮ್‌ದಾಸ್ ಗೌಡ, ದೇವಾಲಯದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.
ಮಂಗಳವಾರದಿಂದ ಬ್ರಹ್ಮರಥಕ್ಕೆ ಕ್ಲ್ಯಾಂಪ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ದೇವಾಲಯದ ನೌಕರರು ನಿರ್ವಹಿಸಲಿದ್ದಾರೆ. ಬ್ರಹ್ಮರಥವನ್ನು ಪತಾಕೆಗಳಿಂದ ಅಲಂಕರಿಸುವ ಕೆಲಸವನ್ನು ಸುಬ್ರಹ್ಮಣ್ಯದ ರಥಕಟ್ಟುವ ಕೆಲಸಗಾರರಾದ ನಾಗೇಶ್ ಮತ್ತು
ತಂಡದವರು ನಿರ್ವಹಿಸಲಿದ್ದಾರೆ.