ಜಾತ್ರಾ ಮಹೋತ್ಸವ

ಹುಬ್ಬಳ್ಳಿ,ಜು19 : ಸುಮಾರು200 ವರ್ಷಗಳ ಕಾಲ ಐತಿಹಾಸಿಕ ಪ್ರಸಿದ್ದಿ ಹೊಂದಿರುವ ನಗರದ ಹೊಸೂರಿನ ಗ್ರಾಮ ದೇವತೆಯಾದ ಶ್ರೀ ಗಾಳಿದುರ್ಗಮ್ಮಾ ದೇವಿ ಜಾತ್ರಾ ಮಹೋತ್ಸವವು ಇಂದು ವಿಜೃಂಭಣೆಯಿಂದ ಜರುಗಿತು.
ಸುಮಾರು 60 ವರ್ಷಗಳಿಂದ ಶ್ರೀ ಗಾಳಿ ದೇವಿ ದುರ್ಗಮ್ಮ ದೇವತೆಯ ಜಾತ್ರಾಮಹೋತ್ಸವವನ್ನು ಹೊಸೂರಿನ ಹಿರೇಕೆರೂರ ಕುಟುಂಬ ಪ್ರತಿ ವರ್ಷ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಜಾತ್ರಾಮಹೋತ್ಸವವನ್ನು ರದ್ದುಗೊಳಿಸಲಾಗಿತ್ತು. ಆದ ಕಾರಣ ಈ ವರ್ಷ ಶ್ರೀ ಗಾಳಿ ದುರ್ಗಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ಇಂದು ರಾತ್ರಿ ಅನ್ನಪ್ರಸಾದ ಸೇವೆಯನ್ನು ಹೊಸೂರಿನ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದ ಎದುರುಗಡೆ ಆಯೋಜಿಸಲಾಗಿದೆ.
ಇಂದು ಬೆಳಿಗ್ಗೆ ಶ್ರೀ ದೇವಿಗೆ ವಿಶೇಷ ಪೂಜಾ ಅಲಂಕಾರ ನೆರವೇರಿತು.